ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ವೇಳೆ ಡಮ್ಮಿ ಫೋನ್ ಬಳಕೆ? ನೆಟ್ವರ್ಕ್ ಟ್ರೇಸ್‌ನಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಸಂಚು!
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ವೇಳೆ ಡಮ್ಮಿ ಮೊಬೈಲ್ ಬಳಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದನಾ ಆರೋಪಿ. ಎಷ್ಟೇ ನೆಟ್ವರ್ಕ್ ಟ್ರೇಸ್ ಮಾಡಿದ್ರೂ ನಂಬರ್ ಪತ್ತೆಯಾಗ್ತಿಲ್ಲ.
ಬೆಂಗಳೂರು (ಮಾ.2): ರಾಜ್ಯವನ್ನು ಬೆಚ್ಚಿ ಬೀಳಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ಆರೋಪಿ ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಸಿಸಿಟಿವಿಯಲ್ಲಿ ಮುಖ ಮರೆ ಮಾಚಿದ್ದೂ ಅಲ್ಲದೇ, ಈಗ ತನ್ನ ಫೋನ್ ಕೂಡ ಟ್ರೇಸ್ ಆಗದ ರೀತಿಯಲ್ಲಿ ಡಮ್ಮಿ ಫೋನ್ ಬಳಕೆ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾನೆಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಒಂದೊಂದೇ ರೋಚಕ ಸುಳಿವು ಸಿಗುತ್ತಿವೆ. ಬಾಂಬ್ ಬ್ಲಾಸ್ಟ್ ಆರೋಪಿಯ ಬಳಿ ಫೋನ್ ಇರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಖಚಿತವಾಗಿದೆ. ಆದರೆ, ಎಷ್ಟು ಬಾರಿ ನೆಟ್ವರ್ಕ್ ಟ್ರೇಸ್ ಮಾಡಿದರೂ ಆರೋಪಿಯ ಮೊಬೈಲ್ ನಂಬರ್ ಮಾತ್ರ ಟ್ರೇಸ್ ಆಗುತ್ತಿಲ್ಲ. ಬಾಂಬ್ ಇಟ್ಟ ಆರೋಪಿಯ ಬಳಿ ಪೋನ್ ಇರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ. ಇನ್ನು ಬಿಲ್ ಪಾವತಿ ಮಾಡುವಾಗ ಟೇಬಲ್ ಮೇಲೆ ಪೋನ್ ಇಟ್ಟು, ನಂತರ ಬಿಲ್ ಪೇ ಮಾಡಿ ಪುನಃ ಫೋನ್ ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ.
Rameshwaram Cafe Blast: 3 ತಿಂಗಳು ತಯಾರಿ ನಡೆಸಿದ್ದ ವೆಲ್ ಟ್ರೈನ್ಡ್ ಬಾಂಬರ್; ಬಿಎಂಟಿಸಿ ವಜ್ರ ಬಸ್ಸಲ್ಲಿ ಸಂಚಾರ!
ಆರೋಪಿ ತನ್ನ ಬಳಿ ಫೋನ್ ಇದೆ ಎಂಬುದನ್ನ ಪೊಲೀಸರಿಗೆ ಖಚಿತ ಪಡಿಸುವುದಕ್ಕಾಗಿ ಹಾಗೂ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವುದಕ್ಕಾಗಿ ಮೊಬೈಲ್ ಬಳಕೆ ಮಾಡಿದ್ದಾನೆ ಎಂಬುದು ತಿಳಿಯುತ್ತಿದೆ. ಆದರೆ, ಹೋಟೆಲ್‌ನಲ್ಲಿ ಫೋನ್ ಬಳಕೆ ಮಾಡಿದ ಫೋನ್ ಬಗ್ಗೆ ಹಾಗೂ ಆರೋಪಿಯ ನಂಬರ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪೋನ್ ನಂಬರ್ ಟ್ರೇಸ್ ಆಗಿಲ್ಲ. ಇವನು ಬೇಕಂತಲೇ ಡಮ್ಮಿ ಮೊಬೈಲ್ ಫೋನ್ ಬಳಕೆ ಮಾಡಿದ್ದಾನಾ? ಅಥವಾ ಸ್ವಿಚ್ಡ್ ಆಫ್ ಆಗಿದ್ದ ಫೋನ್ ಬಳಕೆ ಮಾಡಿ ಪೊಲೀಸರು ನೆಟ್ವರ್ಕ್ ಟ್ರೇಸ್ ಮಾಡಿ ತಲೆ ಕೆಡಿಸಿಕೊಳ್ಳಲಿ ಎಂದು ಹೀಗೆ ಮಾಡಿದ್ದಾನಾ ಎಂಬ ಆನುಮಾನ ಎದುರಾಗಿದೆ.
ಕಾಂಗ್ರೆಸ್‌ನವರು ಅಯೋಗ್ಯ ನನ್ನ ಮಕ್ಕಳು; ಪಾಕಿಸ್ತಾನ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಿ: ಯತ್ನಾಳ್ ಆಕ್ರೋಶ
ಬಾಂಬ್ ಬ್ಲಾಸ್ಟ್‌ಗೂ ಮುನ್ನ ಹೋಟೆಲ್‌ನಲ್ಲಿ ರಿಹರ್ಸಲ್?
ಇನ್ನು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್‌ಗೂ ಮುನ್ನ ಆರೋಪಿ ಹೋಟೆಲ್‌ಗೆ ಬಂದು ರೆಕ್ಕಿ ಮಾಡಿದ್ದಾನೆ ಎಂಬ ಅನುಮಾನವೂ ಕಂಡುಬಂದಿದೆ. 'ರೆಕ್ಕಿ' ಎಂದರೆ - ಅಪರಾಧ ಮಾಡುವ ಮುನ್ನ ಸ್ಥಳಕ್ಕೆ ಬಂದು ಪ್ಲಾನ್ ಮಾಡುವುದು. ಬಾಂಬ್ ಬ್ಲಾಸ್ಟ್ ಆರೋಪಿ ಕೂಡ ಮೊಲದೇ ರಿಹರ್ಸಲ್ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ, ಹೋಟೆಲ್‌ನಲ್ಲಿ ಪೋನ್ ಆನ್ ಮಾಡದೇ ಮೊಬೈಲ್ ಬಳಕೆ ಮಾಡಿದಂತೆ ಆ್ಯಕ್ಟ್ ಮಾಡಿದ್ದಾನೆ. ತನ್ನ ಬಳಿ ಪೋನ್ ಇದೆ ಎಂದು ತೋರಿಸಿಕೊಳ್ಳುವ ಮೂಲಕ ಪೊಲೀಸರ ತನಿಖೆಗೆ ಚಾಲೆಂಜ್ ಹಾಕಿದ್ದಾನೆ. ಆದರೆ, ನಿಜವಾದ ಪೋನ್ ಬಳಸಿದ್ದನಾ ಅಥವಾ ಡಮ್ಮಿ ಪೋನ್ ಬಳಸಿದ್ದನಾ ಎಂಬುದು ಪತ್ತೆಯಾಗಿಲ್ಲ. ಹೀಗಾಗಿ, ಆರೋಪಿ ಪತ್ತೆಗೆ ಪೊಲೀಸರು ತೀರಾ ತಲೆಕೆಡಿಸಿಕೊಂಡಿದ್ದಾರೆ.