ರಾಮೇಶ್ವರಂ ಕೆಫೆ ಮಾಲೀಕರು ನನಗೆ ಹೇಳಿದಂತೆ ಗ್ರಾಹಕರ ಬ್ಯಾಗ್‌ನಿಂದ ಸ್ಫೋಟ: ತನಿಖೆಗೆ ತೇಜಸ್ವಿ ಸೂರ್ಯ ಒತ್ತಾಯ

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಕೆಫೆ ಓನರ್‌ ಬಳಿ ಮಾತನಾಡಿದ್ದು  ಗ್ರಾಹಕರು ಬಿಟ್ಟು ಹೋಗಿದ್ದ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.

Bengaluru Rameshwaram Cafe  Blast MP Tejasvi Surya   demand for investigation gow

ಬೆಂಗಳೂರು (ಮಾ.1): ಬೆಂಗಳೂರಿನ ಕುಂದಲಹಳ್ಳಿ ಗೇಟ್‌ ಸಮೀಪ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ.  ಪೊಲೀಸರು ಉಗ್ರರ ಕೃತ್ಯ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು,  ಐಇಡಿ (impoverished explossive device - ಸುಧಾರಿತ ಸ್ಪೋಟಕ್ಕೆ ಸಾಮಾಗ್ರಿ) ಬಳಕೆ ಮಾಡಿಕೊಂಡು ಸ್ಪೋಟ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಇದೀಗ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿಂತೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿ, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಿಗ್ ಟ್ವಿಸ್ಟ್, ಐಇಡಿ ಬಳಸಿರುವ ಬಗ್ಗೆ ಪೊಲೀಸರ ಶಂಕೆ!

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಅದರ ಸಂಸ್ಥಾಪಕ ಶ್ರೀ ನಾಗರಾಜ್  ಅವರ ಬಳಿ ನಾನು ಮಾತನಾಡಿದೆ. ಗ್ರಾಹಕರು ಬಿಟ್ಟು ಹೋಗಿದ್ದ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದೆ ಮತ್ತು ಯಾವುದೇ ಸಿಲಿಂಡರ್ ಸ್ಫೋಟಗೊಂಡಿಲ್ಲ ಎಂದು ಅವರು ನನಗೆ ಮಾಹಿತಿ ನೀಡಿದ್ದಾರೆ. ಇದು ಬಾಂಬ್ ಸ್ಫೋಟದ ಸ್ಪಷ್ಟ ಪ್ರಕರಣ ಎಂದು ತೋರುತ್ತದೆ. ಬೆಂಗಳೂರು ಸ್ಪಷ್ಟ ಉತ್ತರಗಳನ್ನು ಕೇಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿ ಕೇಳಿದ್ದಾರೆ. 

ಗೃಹಸಚಿವರ ಪ್ರತಿಕ್ರಿಯೆ: ಘಟನೆ ಬಗ್ಗೆ ಕುಣಿಗಲ್ ನಲ್ಲಿ ಗೃಹ ಸಚಿವ ಡಾ ಪರಮೇಶ್ವರ್ ಹೇಳಿಕೆ ನೀಡಿ ನಮ್ಮ ಪೊಲೀಸರು ಹೋಗಿ ಪರಿಶೀಲನೆ ಮಾಡಿದ್ದಾರೆ. ಹೇಗೆ ಆಗಿದೆ ಅಂತಾ ತಿಳಿದು ಬರಬೇಕಿದೆ. ಸ್ಫೋಟಕ ಐಇಡಿ  ಅಂತಾ ಅವರಿವರು ಹೇಳುತ್ತಿದ್ದಾರೆ. ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಒಟ್ಟು 9 ಜನರಿಗೆ ಗಾಯ ಆಗಿದೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ನಾನು ಕೂಡ ಸಂಜೆ ಅಥವಾ ನಾಳೆ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡ್ತಿನಿ. ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ. ಪರಿಶೀಲನೆ ಆಗ್ತಿದೆ. ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತದೆ. ಹೇಳಿಕೆಗಳು ಬಂದಿವೆ ಅಷ್ಟೇ ಅವರಿವರು ಹೇಳುತ್ತಿದ್ದಾರೆ. ಐಇಡಿ ಅಂತಾ ಹೇಳ್ತಿದ್ದಾರೆ. ಆದರೆ ಖಚಿತತೆ ಇಲ್ಲ. ಬ್ಯಾಗ್ ಇತ್ತು ಅಂತಿದ್ದಾರೆ. ನಿರ್ದಿಷ್ಟ ಮಾಹಿತಿ ಇನ್ನೂ ಬರಬೇಕಿದೆ. ನಿರ್ದಿಷ್ಟ ಮಾಹಿತಿ ನಮ್ಮ ಇಲಾಖೆಯಿಂದ ಬರಬೇಕಿದೆ. ಇಂತಹ ವಿಚಾರದಲ್ಲಿ ಸ್ಪೆಕ್ಯೂಲೆಟ್ ಮಾಡುವುದು ಸರಿಯಲ್ಲ. ನಮ್ಮ‌ ಇಲಾಖೆ ವರದಿ ಬರೋವರೆಗೂ ನಾನು ಏನು ಹೇಳಲು ಆಗಲ್ಲ. ಕುಣಿಗಲ್ ನಲ್ಲಿ ಗೃಹ ಸಚಿವ ಡಾ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

 

Latest Videos
Follow Us:
Download App:
  • android
  • ios