ಬಾಲಕನ ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಸಿನಿಮೀಯ ರೀತಿಯಲ್ಲಿ ಬಾಲಕನ ರಕ್ಷಿಸಿದ ಪೊಲೀಸರು!
ಮನೆ ಮುಂದೆ ಆಟವಾಡ್ತಿದ್ದ ಮಗವನ್ನು ಕಿಡ್ನಾಪ್ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಹೆಣ್ಣೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜೂ.08): ಮನೆ ಮುಂದೆ ಆಟವಾಡ್ತಿದ್ದ ಮಗವನ್ನು ಕಿಡ್ನಾಪ್ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಹೆಣ್ಣೂರು ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಹೊರಮಾವಿನ ನಿವಾಸಿ ಸುಭಾಷ್ ಮತ್ತು ಅಶ್ವಿನಿ ದಂಪತಿ. ಸುಭಾಷ್ ಬಿಎಂಟಿಸಿ ಬಸ್ ಚಾಲಕ. ಅಶ್ವಿನಿ ಗೃಹಿಣಿ. ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಹೊರಮಾವುವಿನ ಅಗರದ ಒಂದು ಸಣ್ಣ ಮನೆಯಲ್ಲಿ ವಾಸವಿದ್ದಾರೆ. ಆದರೆ ಮಂಗಳವಾರ ಸಂಜೆ 5.10 ರ ಸುಮಾರಿಗೆ ಮನೆ ಮುಂದೆ ಆಟವಾಡ್ತಿದ್ದ 11 ವರ್ಷದ ಮಗ ಇದ್ದಕ್ಕಿದ್ದಂತೆ ಕಾಣೆಯಾಗ್ಬಿಟ್ಟಿದ್ದ.
ಇಲ್ಲೇ ಆಟ ಆಡ್ತಿರ್ಬಹುದು ಅಂತಾ ಸುಮ್ಮನಿದ್ರು ರಾತ್ರಿಯಾದರೂ ಬರದಿದ್ದಾಗ ಅಕ್ಕಪಕ್ಕ ಎಲ್ಲಾ ಹುಡುಕಲಾರಂಭಿಸಿದರು. ಆದ್ರೆ 8.30ಕ್ಕೆ ಬಂದ ಅದೊಂದು ಕಾಲ್ ಇವರ ಎದೆ ಬಡಿತವನ್ನೇ ನಿಲ್ಲಿಸಿತ್ತು. ಕರೆ ಮಾಡಿದ ಅದೊಬ್ಬ ವ್ಯಕ್ತಿ ಮಗು ಬೇಕು ಅಂದ್ರೆ 50 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಇಟ್ಟಿದ್ದ. ಅಷ್ಟೇ ಅಲ್ಲ ಪೊಲೀಸರಿಗೆ ವಿಷಯ ಹೇಳಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ. ಆಗಿದ್ದಾಗಲಿ ಎಂದುಕೊಂಡ ಪೋಷಕರು ರಾತ್ರಿ 9:30 ಕ್ಕೆ ಹೊರಮಾವು ಪೊಲೀಸ್ ಠಾಣೆಗೆ ಬಂದು ವಿಚಾರ ತಿಳಿಸಿದ್ರು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ವಸಂತ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನಿಂಗರಾಜ್ ನೇತೃತ್ವದ 9 ಜನರ ತಂಡ ಮಾಡಿ ಬೇಟೆಗೆ ಇಳಿದಿದ್ರು.
ಅನ್ಯಜಾತಿಯವನ ಪ್ರೀತಿಸಿದ ಮಗಳ ಕೊಂದ ಅಪ್ಪ, ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ!
ಬಂದಿದ್ದ ಅದೊಂದು ಕರೆಯ ಟವರ್ ಲೊಕೇಶನ್ ಆಧರಿಸಿ ಜಿಗಣಿ ಬಳಿ ಇರುವ ಜೆ.ಆರ್ ಫಾರ್ಮ್ ಹೌಸ್ ಬಳಿ ಬಂದಿದ್ದಾರೆ. ಎಷ್ಟೇ ಸರ್ಕಸ್ ಮಾಡಿದ್ರು ಫಾರ್ಮ್ ಹೌಸ್ ಗೇಟ್ ಓಪನ್ ಮಾಡದೇ ಇದ್ದಾಗ ಕಾಂಪೌಂಡ್ ಪಕ್ಕ ಪೊಲೀಸ್ ಜೀಪ್ ನಿಲ್ಲಿಸಿ ಅದರ ಮೇಲೇರಿ ಕಾಂಪೌಂಡ್ ಜಂಪ್ ಮಾಡಿ ಫಾರ್ಮ್ ಹೌಸ್ ಒಳ ಹೋಗಿದ್ದಾರೆ. ಸೆಕ್ಯೂರಿಟಿ ರೂಮ್‌ನಲ್ಲಿ ಕುಳಿತಿದ್ದ ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಗೌರವ್ ಸಿಂಗ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನಂದ್ರೆ, ಬಾಲಕ ಮನೆ ಪಕ್ಕದಲ್ಲಿದ್ದ ಗರ್ಭಿಣಿ ಮಹಿಳೆ ಮಂಗೀತಾ ಮಗುವನ್ನು ಮೇನ್ ರೋಡ್ ವರೆಗೂ ಹೋಗುವಂತೆ ಹೇಳಿದ್ಳಂತೆ.
ದಕ್ಷಿಣ ಕನ್ನಡ: ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕನ ಅಟ್ಟಹಾಸ
ಅಲ್ಲಿಗೆ ಬರುವ ಮತ್ತೊಬ್ಬ ಮಹಿಳೆ ನಿನ್ನನ್ನ ಸ್ವಿಮ್ಮಿಂಗ್ ಪೂಲ್‌ಗೆ ಕರೆದುಕೊಂಡು ಹೋಗ್ತಾಳೆ ಮಜಾ ಮಾಡಿಕೊಂಡು ಬಾ ಎಂದಳಂತೆ. ಅದರಂತೆ ಬಂದ ದುರ್ಗಾ ಅನ್ನೋ ಮಹಿಳೆ ಮಗುವನ್ನು ಸ್ವಿಮ್ಮಿಂಗ್ ಪೂಲ್‌ಗೆ ಹೋಗೋಣ ಎಂದು ಆಟೊ ಹತ್ತಿಸಿ ಕರೆದೊಯ್ದಿದ್ದಾಳೆ. ಸೀದಾ ಜೆ.ಆರ್.ಫಾರ್ಮ್ ಹೌಸ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಸಂಬಂಧಿ ಗೌರವ್ ಬಳಿ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಅಲ್ಲದೇ ಈ ಹಿಂದೆ ಬಾಲಕನ ತಾಯಿ ಅಶ್ವಿನಿ ಮೊಬೈಲ್ ಪಡೆದಿದ್ದ ಮಂಗೀತ ನಂಬರ್ ಪಡೆದಿರಬಹುದು ಅನ್ನೋ ಶಂಕೆ ಇದೆ. ಸದ್ಯ ಆರೋಪಿ ಗೌರವ್ ಸಿಂಗ್ ಬಂಧಿಸಿರುವ ಹೆಣ್ಣೂರು ಪೊಲೀಸರು ದುರ್ಗಾ ಅನ್ನೋ ಮಹಿಳೆಗಾಗಿ ಬಲೆ ಬೀಸಿದ್ದಾರೆ. ಅಲದೇ ಈ ಕಿಡ್ನಾಪ್ ಕೇಸ್‌ನಲ್ಲಿ ಮಂಗೀತಾ ಸೇರಿದಂತೆ ಮತ್ಯಾರ ಪಾತ್ರ ಇದೇ ಅನ್ನೋದನ್ನ ಪತ್ತೆ ಹಚ್ಚುತ್ತಿದ್ದಾರೆ.