ಬೆಂಗಳೂರು(ಜು. 30)  ಖತರ್ ನಾಕ್ ಕೊಲಂಬಿಯಾ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.  ಸೈಕಲ್ ನಲ್ಲಿ ಓಡಾಟ, ವಾಕಿಟಾಕಿ ಹಿಡಿದು ಕಳ್ಳಾಟ ಮಾಡುತ್ತಿದ್ದ ತಂಡವನ್ನು ಬಂಧಿಸಲಾಗಿದೆ.

ನಟ ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ‌ ಮಾಡಿದ್ದ ಕಳ್ಳರು ಸಿಕ್ಕಿಬಿದ್ದಿದ್ದಾರೆ.  15 ಅಡಿ ಗೋಡೆಗಳನ್ನು ಸಲೀಸಾಗಿ ಜಿಗಿಯಲು ಈ ತಂಡ ತರಬೇತಿ ಪಡೆದುಕೊಂಡಿತ್ತು.

ಸೈಕಲ್‌ನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನ ಪತ್ತೆ ಮಾಡಿ ಅತ್ಯಾಧುನಿಕ ಸಲಕರಣೆಗಳನ್ನ ಬಳಸಿ ತಂಡ ಕೃತ್ಯ ಎಸಗುತ್ತಿತ್ತು. ಆರೋಪಿಗಳ ವಿಚಾರಣೆಗೆ ಪೊಲೀಸರಿಗೂ ಸ್ಪ್ಯಾನಿಷ್ ಭಾಷೆ ಕಲಿಯಬೇಕಾಗಿ ಬಂದಿದೆ.

ಮನೆ ಮುಂದಿನ ತುಳಸಿ ಗಿಡದ ಮೇಲೆ ಕಳ್ಳರ ಕಣ್ಣು.. ಎಲ್ಲದಕ್ಕೂ ಕಾರಣ ಕೊರೋನಾ

ವಿಲಿಯನ್ ಪಡಿಲ್ಲಾ ,ಸ್ಟೆಫಾನಿಯಾ,ಕ್ರಿಶ್ಚಿಯನ್ ಇನಿಸ್ ಬಂಧಿತ ಆರೋಪಿಗಳು. ಯುವತಿ ಸ್ಟೆಫಾನಿಯಾ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದಳು.  ಹೊರ ಬಂದ ವ್ಯಕ್ತಿಗಳಿಗೆ ಸ್ಪ್ರೇ ಮಾಡಿ ಮೂರ್ಛೆ ಹೋಗುವಂತೆ  ನಂತರ ಮಾಡುತ್ತಿದ್ದು ಬಳಿಕ ವಾಕಿಟಾಕಿಯಲ್ಲಿ ಸ್ನೇಹಿತರಿಗೆ ಸಂದೇಶ ನೀಡಿ ಕಳ್ಳತನ ಮಾಡಲಾಗುತ್ತಿತ್ತು.

ನಂತರ ಗ್ಯಾಸ್ ಕಟರ್ ನಿಂದ ಬ್ರೇಕ್ ಮಾಡಿ ಕಳ್ಳತನ ಮಾಡ್ತಿದ್ದ ಗ್ಯಾಂಗ್. ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡ್ತಿರುವಾಗ ಪಿಪಿಇ ಕಿಟ್ ಸಹ ಧರಿಸಿದ್ದರು.  ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿದ್ದು  ಆರೋಪಿಗಳಿಂದ ಆರು ಕೆಜಿ ಚಿನ್ನ ಕಳ್ಳತನ ಪ್ರಕರಣವೂ ಗೊತ್ತಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.