ಒಂದು ರಾತ್ರಿ ಎರಡೆರಡು ಬಾರಿ ಸೆಕ್ಸ್ ನಿರಾಕರಿಸಿದ ಪತ್ನಿಯ ಹತ್ಯೆ, ಗಂಡನ ನಾಟಕಕ್ಕೆ ಪೊಲೀಸರೇ ಸುಸ್ತು!
ವಿಕೃತ ಕಾಮದಾಸೆ ತೀರಿಸಿಕೊಳ್ಳಲು ಪತ್ನಿ ನಿರಾಕರಿಸಿದಾಗ ಆಕೆಯನ್ನೇ ಹತ್ಯೆ ಮಾಡಿ ಬಳಿಕ ಮಿಸ್ಸಿಂಗ್ ದೂರು ನೀಡಿ ಊರಿಡಿ ಹುಡುಕಿದ್ದಾನೆ. ಆದರೆ ಪೊಲೀಸರ ತನಿಖೆಯಲ್ಲಿ ಪತಿ ಅಸಲಿ ಮುಖ ಬಹಿರಂಗವಾಗಿದೆ.
ಅಮ್ರೊಹ(ಡಿ.09): ಈತನದ್ದು ವಿಚಿತ್ರ ಹಾಗೂ ವಿಕೃತ ಬಯಕೆ. ಒಂದು ರಾತ್ರಿ ಎರಡೆರಡು ಬಾರಿ ಸೆಕ್ಸ್ ಮಾಡುವಂತೆ ಪತ್ನಿಯನ್ನು ಪದೇ ಪದೇ ಒತ್ತಾಯಿಸಿದ್ದಾನೆ. ಪತಿಯ ಬೇಡಿಕೆ ಹಾಗೂ ಹಿಂಸೆ ಹೆಚ್ಚಾಗುತ್ತಿದ್ದಂತೆ ಒಂದೇ ರಾತ್ರಿ ಎರಡನೇ ಬಾರಿ ಸೆಕ್ಸ್‌ಗೆ ನಿರಾಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗಂಡ, ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಬಳಿಕ 50 ಕಿಲೋಮೀಟರ್ ದೂರದಲ್ಲಿ ಮೃತದೇಹ ಎಸೆದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ನಾಟಕವಾಡಿದ್ದಾನೆ. ಇದೀಗ ಈ ವಿಕೃತ ಕಾಮದಾಹದ ಪತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೊಹ ಜಿಲ್ಲೆಯಲ್ಲಿ. ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಗಂಡ ಜೈಲು ಪಾಲಾಗಿದ್ದಾನೆ. ಇತ್ತ ಮೂವರು ಮಕ್ಕಳು ಅನಾಥರಾಗಿದ್ದಾರೆ.
34 ವರ್ಷದ ಮೊಹಮ್ಮದ್ ಅನ್ವರ್ 9 ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. ಇವರಿಗೆ ಮೂರು ಮಕ್ಕಳಿದ್ದಾರೆ. ಕಳೆದ ಕೆಲ ದಿನಗಳಿಂದ ಇವರಿಬ್ಬರ ನಡುವೆ ಸೆಕ್ಸ್ ವಿಚಾರಕ್ಕಾಗಿ ವಿಪರೀತ ಜಗಳವಾಗಿದೆ. ಅಮ್ರೋಹದಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿರುವ ಮೊಹಮ್ಮದ್ ಅನ್ವರ್ ರಾತ್ರಿ 10 ಗಂಟೆ ಸುಮಾರಿಗೆ ಶಾಪ್ ಕ್ಲೋಸ್ ಮಾಡಿ ಮನೆ ಸೇರಿಕೊಳ್ಳುತ್ತಾನೆ. ಬಳಿಕ ರಾತ್ರಿಯಲ್ಲಿ ಕನಿಷ್ಠ ಎರಡು ಬಾರಿ ಸೆಕ್ಸ್ ಮಾಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಆದರೆ ಒಂದೆರಡು ದಿನ ಪತಿಯ ಬೇಡಿಕೆಗೆ ಒಪ್ಪಿದ್ದ ಪತ್ನಿ ಬಳಿಕ ಈತನ ಬೇಡಿಕೆ ಹೆಚ್ಚಾಗತೊಡಗಿದೆ.
Mumbai Crime: ಅಮ್ಮನ ಶವ ಕೊಂದು ಪ್ಯಾಕ್ ಮಾಡಿ ಎಸೆದ ಜುಹುವಿನ ಶಿಕ್ಷಕ ಅಂದರ್..!
ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೇ ಪತ್ನಿ ಒಂದು ರಾತ್ರಿ ಒಂದು ಬಾರಿ ಮಾತ್ರ ಸೆಕ್ಸ್ ನಡೆಸುವುದಾಗಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್ ಅನ್ವರ್ ಪ್ರತಿ ದಿನ ರಾತ್ರಿ ಕನಿಷ್ಠ ಎರಡು ಬಾರಿ ಸೆಕ್ಸ್ ಮಾಡಲೇಬೇಕು ಎಂದು ರಂಪಾಟ ಮಾಡಿದ್ದಾನೆ. ಬಳಿಕ ದಾರದಿಂದ ಪತ್ನಿ ಕೈಗಳಳನ್ನು ಕಟ್ಟಿ ಥಳಿಸಿದ್ದಾನೆ. ಅದೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೈಗೈದಿದ್ದಾನೆ.
ಈತನ ಕ್ರೌರ್ಯಕ್ಕೆ ಪತ್ನಿಯ ಪ್ರಾಣ ಪಕ್ಷಿ ಹಾರಿಹೋಗಿದೆ. ಇತ್ತ ಪತ್ನಿಯ ಹತ್ಯೆ ಮಾಡಿದ ಮೊಹಮ್ಮದ್ ಅನ್ವರ್, 50 ಕಿಲೋಮೀಟರ್ ದೂರದಲ್ಲಿ ಪತ್ನಿ ಶವ ಎಸೆದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಈತನ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ಫಲಿಸಲಿಲ್ಲ ಚಿಕಿತ್ಸೆ: ವಿಶಾಖಪಟ್ಟಣದಲ್ಲಿ ರೈಲು - ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿದ್ದ ಯುವತಿ ಬಲಿ
ಪತ್ನಿಯ ಸಂಬಂಧಿಕರು, ಆಪ್ತರು, ನೆರಮನೆಯರ ವಿಚಾರಣೆ ನಡೆಸಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಮೊಹಮ್ಮದ್ ಅನ್ವರ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ಅನ್ವರ್ ವಶಕ್ಕೆ ಪಡೆದ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದ್ದರೆ. ಈ ವೇಳೆ ಪತ್ನಿಯ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತನ ಮಾಹಿತಿ ಆಧರಿಸಿ ಪೊಲೀಸರು ಪತ್ನಿಯ ಮೃತದೇಹ ಪತ್ತೆ ಹಚ್ಚಿದ್ದಾರೆ. ಕೇವಲ ಸೆಕ್ಸ್ ವಿಚಾರಕ್ಕಾಗಿ ಈ ಕೊಲೆ ನಡೆದಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಅನ್ವರ್ ಮತ್ತೊಬ್ಬಳ ಜೊತೆ ಸಂಸಾರ ನಡೆಸಲು ಸಜ್ಜಾಗಿದ್ದ ಅನ್ನೋ ಮಾಹಿತಿಯೂ ಕೇಳಿಬರುತ್ತಿದೆ. ಇದೀಗ ಮೊಹಮ್ಮದ್ ಅನ್ವರ ಜೈಲು ಪಾಲಾಗಿದ್ದಾನೆ. ಇತ್ತ ತಾಯಿ ಕಳೆದುಕೊಂಡು ಮೂವರು ಮಕ್ಕಳು ಅನಾಥರಾಗಿದ್ದಾರೆ.