Sexual Harassment : ಬೆಂಗಳೂರು, ಶ್ವಾನಗಳಿಗೆ ಊಟ ಹಾಕಲು ಬಂದವಳಿಗೆ ಮರ್ಮಾಂಗ ತೋರಿಸಿದ ಪೊಲೀಸ್!
* ಬೆಂಗಳೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ದಾಖಲಾಯ್ತು ಎಫ್ಐಆರ್
* ಅಮೃತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಚಂದ್ರಶೇಖರ್ ಮೇಲೆ ಎಫ್ಐಆರ್.
* ಮಹಿಳೆಗೆ ಮರ್ಮಾಂಗ ತೋರಿಸಿದ್ದ ಆರೋಪ
* ಸೋಮವಾರ ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ಘಟನೆ.
ಬೆಂಗಳೂರು(ಡಿ. 21) ಮುಂಬೈ (Mumbai) ಮತ್ತು ಪುಣೆಯಲ್ಲಿ (Pune) ಹೆಚ್ಚಾಗಿ ಕೇಳಿಬರುತ್ತಿದ್ದ ರೀತಿಯ ಪ್ರಕರಣ ಬೆಂಗಳೂರಿನಿಂದ (Bengaluru) ವರದಿಯಾಗಿದೆ. ಮಹಿಳೆಗೆ (Woman) ಮರ್ಮಾಂಗ (Sexual Harassment) ತೋರಿಸಿದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿ ಮೇಲೆ ದೂರು ದಾಖಲಾಗಿದೆ.
ಅಮೃತಹಳ್ಳಿ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮೇಲೆ ಎಫ್ಐಆರ್ ದಾಖಲಾಗಿದೆ. ಸೋಮವಾರ ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ಘಟನೆ ನಡೆದಿದೆ.
ಬರ್ತ್ ಡೇ ಪಾರ್ಟಿ ಮುಗಿಸಿ ಚಂದ್ರಶೇಖರ್ ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿರುವ ಆರೋಪ ಬಂದಿದೆ. ಸದ್ಯ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ IPC ಸೆಕ್ಷನ್ 354(a) (ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ) ನಿಯಮದಡಿ ಪ್ರಕರಣ ದಾಖಲಾಗಿದೆ.
ಗೆಳೆಯನ ಅಂಗವನ್ನೇ ಕತ್ತರಿಸಿದ್ದಳು: ಗೆಳೆಯಯ ಖಾಸಗಿ ಅಂಗವನ್ನೇ(Private Part) ಈಕೆ ಕತ್ತರಿಸಿ ಹಾಕಿದ್ದಾಳೆ. ಯೋಗ (Yoga Teacher) ಶಿಕ್ಷಕಿ ಇಂಥ ಕೆಲಸ ಮಾಡಿದ್ದಾಳೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮರಳಿದ ಬಳಿಕ ಯುವಕ ಜೈಪುರದ ಭಂಕ್ರೋಟಾ ಠಾಣೆಗೆ ದೂರು ನೀಡಿದ್ದ.
ಯುವಕ ಮತ್ತು ಯುವತಿ ಇಬ್ಬರು ಯೋಗ ತರಬೇತುದಾರರಾಗಿದ್ದು ಬಿಕಾನೇರ್ ನಿವಾಸಿಗಳು. ಕಳೆದ ಎರು ವರ್ಷಗಳಿಂದ ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕನಿಗೆ ರೀಮಾ (Social Media) ಪರಿಚಯವಾಗಿದೆ. ಒಂದು ದಿನ ಮನೆಗೆ ಕರೆಸಿಕೊಂಡ ಯುವತಿ ಆತನಿಗೆ ಊಟ ನೀಡಿದ್ದಳು. ಊಟದಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದು ಯುವಕ ಅಮಲಿಗೆ ಜಾರಿದ್ದಾನೆ. ಮಧ್ಯರಾತ್ರಿ ಎರಡು ಗಂಟೆ ನಂತರ ಎಚ್ಚರವಾಗಿ ನೋಡಿದಾಗ ಎಲ್ಲ ಕಡೆ ರಕ್ತ ಚೆಲ್ಲಿತ್ತು. ಯುವಕನ ಮರ್ಮಾಂಗ ಕತ್ತರಿಸಿ ಬಿದ್ದಿದೆ. ಯುವತಿ ಇನ್ನೊಂದು ಕಡೆ ಮುದುಡಿ ಕುಳಿತುಕೊಂಡಿದ್ದಳು. ಮರ್ಮಾಂಗ ಕತತ್ತರಿಸಿದ್ದ ಆಕೆಯೇ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾಳೆ. ನನ್ನನ್ನು ಕ್ಷಮಿಸಿ ಎಂದು ಅಳುತ್ತಾ ಕುಳಿತುಕೊಂಡಿದ್ದಳು.
ಎಟಿಎಂನಲ್ಲಿ ದೌರ್ಜನ್ಯ: ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ್ದಾನೆ. ದಿಟ್ಟತನ ಮೆರೆದಿರುವ ಮಹಿಳೆ ಆತನ ಕೃತ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದರು.
ಮುಂಬೈ ಹರಿ ಓಂ ನಗರದ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಭಾನುವಾರ ಬೆಳಗಿನ ಜಾವ 3 ಕೃತ್ಯ ನಡೆದಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಥಾಣೆಯ ಕೊಪಾರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಭಾನುವಾರ ಎಟಿಎಂಗೆ ಹಣ ತೆಗೆಯಲು ಹೋಗಿದ್ದಾಳೆ. ಮಹಿಳೆ ಹಿಂಬಾಲಿಸಿ ಬಂದವ ಅಶ್ಲೀಲವಾಗಿ ವರ್ತಿಸತೊಡಗಿದ್ದಾನೆ. ಆದರೆ ದಿಟ್ಟ ಮಹಿಳೆ ಆತನ ವಿಡಿಯೋ ಮಾಡಿದ್ದಾಳೆ. ತಕ್ಷಣ ಕ್ರಮ ತೆಗೆದುಕೊಂಡ ಪೊಲೀಸರು ಆರೋಪಿ ಸಂದೀಪ್ ಕುಂಭಕರ್ಣ(38)ನನ್ನು ಬಂಧಿಸಿದ್ದರು.
ಮಹಿಳೆ ಮುಂದೆಯೇ ಓಲಾ ಕ್ಯಾಬ್ ಚಾಲಕ ಹಸ್ತಮೈಥುನ
ಮಂಡ್ಯದ ಪ್ರಕರಣ: ಕಳೆದ ವರ್ಷ ಪ್ರೇಮಿಗಳ ದಿನದಂದೇ ಅಪ್ರಾಪ್ತ ಯುವಕನ ಮರ್ಮಾಂಗ ಕತ್ತರಿಸಿರುವ ಪೈಶಾಚಿವ ಘಟನೆ ಮಂಡ್ಯದಲ್ಲಿ ನಡೆದಿತ್ತು. . ಕಿಡ್ನಾಪ್ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ. ಪ್ರೇಮಿಗಳ ದಿನದಂದೇ ಕಿಡಿಗೇಡಿಗಳಿಂದ ಪೈಶಾಚಿಕ ಕೃತ್ಯ ನಡೆದಿದ್ದು, ಕಿಡ್ನಾಪ್ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ. ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಕಾಲೇಜು ಯುವಕನ್ನು ಕಾರಿನಲ್ಲಿ ಅಪಹರಿಸಲಾಗಿತ್ತು.