Asianet Suvarna News Asianet Suvarna News

ಎಚ್ಚರ... ನಿಮ್ಮ ವಾಟ್ಸಾಫಿಗೆ ನಿಮ್ಮದೆ ಅಶ್ಲೀಲ ಪೋಟೋ ಬರುತ್ತೆ!

ಪೋಟೊ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದ ಕಿಂಗ್ ಪಿನ್ ಬಂಧನ/ ಅಸ್ಸಾಂ ಮೂಲದ ಆರೋಪಿ ವಿಶ್ವಾಸ್ ಬಂಧಿಸಿದ ವೈಟ್ ಫೀಲ್ಡ್ ಪೊಲೀಸರು/ ಫೇಸ್ ಬುಕ್,ವಾಟ್ಸ್ ಅಪ್, ಟ್ವೀಟರ್,ಇನ್ಸ್ ಗ್ರಾಮ್ ನಲ್ಲಿನ ಪೋಟೊ ಬಳಸಿ ಮಾರ್ಫಿಂಗ್ ಮಾರ್ಫಿಂಗ್ ಮಾಡಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಡ್ತಿದ್ದ ಖತರ್ನಾಕ್  

Bengaluru police bust photo morphing racket 3 arrested mah
Author
Bengaluru, First Published Oct 11, 2020, 11:35 PM IST
  • Facebook
  • Twitter
  • Whatsapp

ಬೆಂಗಳೂರು(ಅ. 11) ಪೋಟೊ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದ ಕಿಂಗ್ ಪಿನ್ ಬಂಧನವಾಗಿದೆ. ಅಸ್ಸಾಂ ಮೂಲದ ಆರೋಪಿ ವಿಶ್ವಾಸ್  ಎಂಬಾತನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್,ವಾಟ್ಸ್ ಅಪ್, ಟ್ವೀಟರ್,ಇನ್ಸ್ ಗ್ರಾಮ್ ನಲ್ಲಿನ ಪೋಟೊ ಬಳಸಿ ಮಾರ್ಫಿಂಗ್  ಮಾಡುತ್ತಿದ್ದ ಖದೀಮ ಅಂದರ್ ಆಗಿದ್ದಾನೆ ಮಾರ್ಫಿಂಗ್ ಮಾಡಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಡ್ತಿದ್ದ ಖತರ್ನಾಕ್  ಕಿಲಾಡಿ ಈತ.

ಗೋವಾದಲ್ಲಿ ಬ್ರಹ್ಮಚಾರಿ ಸಹವಾಸ ಮಾಡಿದ ಗೃಹಿಣಿ!

ಬೆಂಗಳೂರು ಹೊರವಲಯದ ಚಿಕ್ಕಜಾಲ ಸಮೀಪ ಕೋಳಿ ಫಾರಂ ಇಟ್ಟುಕೊಂಡಿದ್ದು ಆರೋಪಿ ಪೋಟೋಗಳನ್ನು  ಸೊಷಿಯಲ್ ಮೀಡಿಯಾದಲ್ಲಿ  ಕಲೆಕ್ಟ್ ಮಾಡಿಕೊಳ್ಳುತ್ತಿದ್ದ. ಅಶ್ಲೀಲವಾಗಿ ಎಡಿಟ್ ಮಾಡಿ ಅದನ್ನ ವ್ಯಾಟ್ಸ್ ಅಪ್ ಗ್ರೂಪಿಗೆ ಹಾಕುತ್ತಿದ್ದ. ನಂತರ ಸಂಬಂಧಿಸಿದವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ನೀವು ಕೊಡ್ಲಿಲ್ಲ ಅಂದ್ರೆ ಎಡಿಟೆಡ್ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕುತ್ತಿದ್ದ. ಪ್ರೊಫೆಸರ್ ಓರ್ವರ ಪೋಟೊ ಮಾರ್ಫಿಂಗ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿತ್ತು ಇವನ ಗ್ಯಾಂಗ್. ಖತರ್ನಾಕ್ ಆರೋಪಿಗಳ ವಿರುದ್ದ ಸಿಇಎನ್ ಠಾಣೆಗೆ ಪ್ರೊಫೆಸರ್ ದೂರು ನೀಡಿದ್ದರು.

ಡ್ಯಾಡಿ ಎಬೌವ್ 50 ಅನ್ನೋ ವಾಟ್ಸ್ ಗ್ರೂಪ್ ನಲ್ಲಿ ಪೋಟೊ ಕದಿಯುತ್ತಿದ್ದ ವಿಶ್ವಾಸ್ ನ ಪತ್ತೆ ಮಾಡಲಾಗಿದೆ  ರಾಜಕಾರಣಿ, ಉದ್ಯಮಿಗಳು, ಪ್ರೊಫೆಸರ್ ಗಳೇ ಈ ಗ್ಯಾಂಗ್ ನ ಟಾರ್ಗೆಟ್ ಆಗಿತ್ತು. ಹಲವು ಜನರಿಗೆ ವಿಶ್ವಾಸ್ ಅಂಡ್ ಗ್ಯಾಂಗ್ ಇದೇ ರೀತಿ ಬ್ಲಾಕ್ ಮೇಲ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು ವಿಚಾರಣೆ ಮುಂದುವರಿದಿದೆ.


 

 

 

Follow Us:
Download App:
  • android
  • ios