ಬೆಂಗಳೂರು(ನ.  16)  ಹಫ್ತಾ ವಸೂಲಿ ಮಾಡಲು ಯತ್ನಿಸಿದ ಪಾಲನಹಳ್ಳಿ ಪಾಪಣ್ಣನ ಗ್ಯಾಂಗ್ ನ್ನು ಬಂಧಿಸಲಾಗಿದೆ. ಪ್ರಶಾಂತ್ ಕುಮಾರ್, ಸಂಜಯ್,ನವೀನ್. ಮಂಜುನಾಥ್,ರಮೇಶ್,ಸ್ಯಾಮುಯಲ್,ಉಮೇಶ್,ಸುಬ್ರಮಣಿ,ಮಂಜುನಾಥ, ನಾಗರಾಜ,ರಮೇಶ್,ಸುರೇಶ್ ಬಂಧಿತರು.

ಈ ಗ್ಯಾಂಗ್ ವಸೂಲಿಗೆ ಇಳಿದಿದ್ದರ ಹಿಂದಿನ ಕತೆಯೂ ರೋಚಕ. ಜೈಲಿನಲ್ಲಿರುವ10 ಜನರನ್ನ ಬಿಡಿಸಲು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಹಣ ನೀಡಲು ಒಪ್ಪದ ರಮೇಶ್ ಎಂಬುವವನನ್ನ ಚಾಕುವಿನಿಂದ ಇರಿದಿದ್ದರು.

ಕಳ್ಳ ದಂಪತಿ, ಯಾವ ಜಿಲ್ಲೆಯನ್ನು ಬಿಟ್ಟಿಲ್ಲ

ಸಿಕ್ಕಿಬಿದ್ದ ಶಾಸ್ತ್ರೀ ಗ್ಯಾಂಗ್:  ರಾತ್ರಿ ವೇಳೆ ಸಾರ್ವಜನಿಕರ ಸುಲಿಗೆ ಮಾಡುತಿದ್ದ ಶಾಸ್ರ್ತಿಗ್ಯಾಂಗ್ ಸಹ ಪೊಲೀಸರ ಬಲೆಗೆ ಬಿದ್ದಿದೆ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುವವರನ್ನು ಟಾರ್ಗೇಟ್ ಮಾಡ್ತಿದ್ದ ಗ್ಯಾಂಗ್ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಹಣ ಚಿನ್ನಾಭಾರಣ ದೋಚುತಿತ್ತು.

ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶ್ರೀಪಾದಶಾಸ್ರ್ತೀ, ವಿನ್ಸೆಂಟ್ ಬಾಬು, ಆಕಾಶ್ ನಾಯ್ಡು ಬಂಧಿತ ಆರೋಪಿಗಳು. ಬಂಧಿತರಿಂದ 1.5ಲಕ್ಷ ನಗದು, 7 ಗ್ರಾಂ ಚಿನ್ನ , ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.  ಆರೋಪಿಗಳ ವಿರುದ್ಧ ಕೊಡಿಗೇಹಳ್ಳಿ ಮತ್ತು ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.