ಬೆಂಗಳೂರು(ಫೆ. 23)  ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ.  ದೀಪಕ್ ಕುಮಾರ್ ಎಂಬಾತನನ್ನ ಕೃಷ್ಣರಾಜಪುರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸಂತ್ರಸ್ಥ ಯುವತಿ ಜನವರಿ 13 ರಂದು ಠಾಣೆಗೆ ತೆರಳಿ ದೂರು ನೀಡಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವತಿ ದೂರು ದಾಖಲಿಸಿದ್ದರು.

ಸ್ನೇಹಿತನ ರೂಂ ಗೆ ಹೋಗಿದ್ದ ಸಂದರ್ಭದಲ್ಲಿ ಸ್ನಾನ ಮಾಡೋದನ್ನ  ಆರೋಪಿ ವಿಡಿಯೋ ಮಾಡಿ ಇಟ್ಟುಕೊಂಡಿದ್ದ. ವೆಂಕಟಪ್ಪ ಗಾರ್ಡನ್ ನ ಭಟ್ಟರಹಳ್ಳಿಯ ಬಳಿಯಿರುವ ರೂಂನಲ್ಲಿ ಘಟನೆ ನಡೆದಿತ್ತು.

ಮುಗುಳುನಗೆ ಸುಂದರಿ ಆಶಿಕಾ ಕೆನ್ನೆಗೆ ಮುತ್ತು ಕೊಟ್ಟು ಓಡಿ ಹೋದ

ಖಾಸಗಿ ವಿಡೀಯೋ ಇಟ್ಟುಕೊಂಡು ಸೋಶಿಯಲ್ ಮಿಡೀಯಾದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. 3 ಲಕ್ಷ ಹಣವನ್ನ ಕೊಡುವಂತೆ ಯುವತಿಗೆ ಬ್ಯ್ಲಾಕ್ ಮೇಲ್ ಮಾಡುತ್ತಿದ್ದ. ಕಲಂ 354(ಸಿ), 509, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.

ಕೊನೆಗೂ ಮಧ್ಯಪ್ರದೇಶ ಮೂಲದ ದೀಪಕ್ ಎಂಬಾತನನ್ನ ಬಂಧಿಸಿ ಕರೆತರಲಾಗಿದೆ. ಕಾಲೇಜ್ ನಲ್ಲಿ ದೀಪಕ್ ಗೆ ಪರಿಚಯವಾಗಿದ್ದ ಸಂತ್ರಸ್ತೆ ಖಾಸಗಿ ಕಾರ್ಯಕ್ರಮಕ್ಕೆ ಆತನ ಜತೆ ತೆರಳಿದ್ದಳು.  ಕಾರ್ಯಕ್ರಮ ಮುಗಿದ ಬಳಿಕ ಸ್ನೇಹಿತನ ರೂಂಗೆ ಹೋಗಿದ್ದಳು. ಆ ವೇಳೆ ಆರೋಪಿ ವಿಡಿಯೋ ಮಾಡಿದ್ದ.

ಇದಾದ ಮೇಲೆ   ಬೆಂಗಳೂರಿನ ರೂಂ ಖಾಲಿ ಮಾಡಿಕೊಂಡು ತನ್ನ ಊರಿಗೆ ತೆರಳಿದ್ದ ಆರೋಪಿ ಅಲ್ಲಿಂದ ಸಂತ್ರಸ್ಥ ಯುವತಿಗೆ ಬ್ಲ್ಯಾಕ್ ಮೇಲ್ ಮಾಡೋಕೆ ಆರಂಭಿಸಿದ್ದ. ಹೊಸ ಇ-ಮೇಲ್ ಐಡಿ ಕ್ರಿಯೇಟ್ ಮಾಡಿ ವಿಡಿಯೋ ಕಳುಹಿಸಿದ್ದ. ವಿಡೀಯೋ ನೋಡಿ ಶಾಕ್ ಗೆ ಒಳಗಾಗಿದ್ದ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

ಫೆಬ್ರವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ