ಬೆಂಗಳೂರು (ನ. 13)  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ನಂತರ ರಾಜಧಾನಿಯಲ್ಲಿ  ಪ್ರತಿದಿನ ಮಾದಕ ವಸ್ತು ಸಾಗಾಟ ಪ್ರಕರಣಗಳು ದಾಖಲಾಗುತ್ತಲೇ ಇವೆ ಎಂಬ ಪರಿಸ್ಥಿತಿ ಬಂದು ನಿಂತಿದೆ.

ರಾಜಗೋಪಾಲನಗರ ಪೊಲೀಸು ಕಾರ್ಯಾಚರಣೆ ನಡೆಸಿದ್ದು   ಗಾಂಜಾ ಮಾರಾಟ ಮಾಡ್ತಿದ್ದ  ಶಿವಕುಮಾರ್  ಎಂಬಾತನನ್ನು ಬಂಧಿಸಿದ್ದಾರೆ.  ಬಂಧಿತನಿಂದ  ಬರೋಬ್ಬರಿ 110 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

ಚಾಲಕನ ಸೀಟಿನಡಿ ಹ್ಯಾಶ್ ಆಯಿಲ್ ಸಾಗಿಸುತ್ತಿದ್ದುದ್ದು ಎಲ್ಲಿಗೆ?

ಮನೆಯಲ್ಲೇ ಗಾಂಜಾ ಇಟ್ಟಿಕೊಂಡು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ. ಮನೆಯನ್ನ ಪರಿಶೀಲಿಸಿದಾಗ 93 ಕೆಜಿ ಗಾಂಜಾ ಪತ್ತೆಯಾಗಿದೆ. ಬಂಧಿತನಿಂದ 110 ಕೆಜಿ ಗಾಂಜಾ, 1 ಬೈಕ್ ಹಾಗೂ 3 ಸಾವಿರ ನಗದು ವಶಕ್ಕೆ ಪಡೆದಿದ್ದು  ಈ ದಂಧೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಟೋಲ್ ಗೇಟ್ ಬಳಿ ಪೊಲೀಸರು ಗುರುವಾರ ಅಂತರ್ ರಾಜ್ಯ ಮಾದಕ ಸರಬರಾಜುಗಾರರ ಬಂಧನ ಮಾಡಿತ್ತು.  ಚಾಲಕನ ಸೀಟಿನಡಿ  3 ಕೆ.ಜಿ.ಹ್ಯಾಶ್ ಆಯಿಲ್ ಬಚ್ಚಿಡಲಾಗಿತ್ತು.  ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ  ಮಾಹಿತಿ ಆಧಾರದಲ್ಲಿ ದಾಳಿ ಮಾಡಲಾಗಿತ್ತು.