ಬೆಂಗಳೂರಿನ ಗಿರಿನಗರದಲ್ಲಿ, ಪತ್ನಿಯ ಕಿರುಕುಳದಿಂದ ಬೇಸತ್ತು ಬ್ಯಾಂಕ್ ಉದ್ಯೋಗಿ ಗಗನ್ ರಾವ್ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇವರ ಸಾವಿಗೆ ಪತ್ನಿಯೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, (ನ.10) ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣುಬಿಗಿದು ಆತ್ಮ೧ಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಗಿರಿನಗರದ ಮನೆಯಲ್ಲಿ ನಡೆದಿದೆ. ಗಗನ್ ರಾವ್ ಮೃತ ದುರ್ದೈವಿ ಮೃತ ದುರ್ದೈವಿ. ಬ್ಯಾಂಕ್ ಒಂದರ ಎಂಪ್ಲಾಯಿ ಆಗಿ ಕೆಲಸ ಮಾಡುತ್ತಿದ್ದ ಪತಿ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮೇಘನ ಜಾದವ್ ಜೊತೆ ಗಗನ್ ಮದುವೆಯಾಗಿತ್ತು. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ಪತ್ನಿ ವಿನಾಕಾರಣ ಜಗಳವಾಡಲು ಶುರು ಮಾಡಿದ್ದಳು ಎಂದು ಆರೋಪಿಸಲಾಗಿದೆ.

ಪತ್ನಿಯ ಕಿರುಕುಳವೇ ಸಾವಿಗೆ ಕಾರಣ?

ಮದುವೆಯ ನಂತರ ಪತ್ನಿ-ಪತಿಯ ನಡುವೆ ನಿರಂತರ ಜಗಳಗಳು ಆರಂಭವಾಗಿ, ಇದರಿಂದ ಗಗನ್ ರಾವ್ ಮಾನಸಿಕವಾಗಿ ನೊಂದಿದ್ದ. ಪತ್ನಿಯ ಕಿರುಕುಳವೇ ಕಾರಣವೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು, ಮೃತನ ತಂಗಿ ದೂರು ನೀಡಿದ್ದಾರೆ.

ಮೃತನ ತಂಗಿ ದೂರು:

ಪೊಲೀಸ್ ಮೂಲಗಳ ಪ್ರಕಾರ ಹಿಂದಿನ ರಾತ್ರಿ ಮನೆಯಲ್ಲಿ ಪತಿ-ಪತ್ನಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಗಗನ್ ರಾವ್ ತೀವ್ರ ನೋವಿನಲ್ಲಿರುವಾಗ ಸಾವಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಗಗನ್ ರಾವ್ ಆತ್ಮ೧ಹತ್ಯೆ ಸುದ್ದಿ ತಿಳಿದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಅಣ್ಣನ ಸಾವಿಗೆ ಪತ್ನಿಯೇ ಕಾರಣ ಎಂದು ಮೃತನ ತಂಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಹಿಂದಿನ ಸತ್ಯಾಸತ್ಯತೆ ಏನೆಂಬುದು ತನಿಖೆ ಬಳಿಕವೇ ತಿಳಿಯಲಿದೆ.