14 ವರ್ಷಗಳ ಹಿಂದೆ ಆರ್ ಟಿ ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಜಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದ.
ವರದಿ- ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು : ಅದು ಮೀಸೆ ಚಿಗುರುವ ವಯಸ್ಸಿನ ದ್ವೇಷ.. ಕ್ಷುಲ್ಲಕ ವಿಚಾರದ ಜಗಳ ಹೊಡೆದಾಟದಿಂದ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು.. ಹಾಗಂತ ಇಲ್ಲಿ ಕೊಲೆಯಾದನು ಮಸಣ ಸೇರಿದರೇ ಕೊಲೆಗಡುಕ ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ.. ಹುಚ್ಚು ವಯಸ್ಸಿನ ಹುಚ್ಚಾಟದಲ್ಲಿ ಮಾಡಿದ ಕೃತ್ಯಕ್ಕೆ ಯಾರ ಕೈಗೂ ಸಿಗದೆ 14 ವರ್ಷ ನಾನಾ ರೀತಿ ತಲೆ ಮರಿಸಿಕೊಂಡಿದ್ದ.. ಆದ್ರೆ ಖಾಕಿ ಮಾತ್ರ ಇವನ ಬೆನ್ನು ಬಿಡದೆ ಹುಡುಕಿದ್ದು, ಕೊನೆಗೆ ಆತನ ಬಂಧಿಸಿದ್ದಾರೆ.
ಅದು ಇವತ್ತಿನ ಮಾತಲ್ಲ ಬಿಡಿ.. 2011ರ ಆಗಸ್ಟ್ 22ರ ಸಮಯ.. ಅಂದರೆ 14 ವರ್ಷಗಳ ಹಿಂದಿನ ಕಥೆ.. ಆರ್ ಟಿ ನಗರದ ಕೆಂಪೇಗೌಡ ಬಡವಾಣೆಯ ನಿವಾಸಿ ಕದಿರೇಶ್ ಎಂಬಾತನ ಮಗ ಚೇತನ್ ಬೀದಿ ಹೆಣವಾಗಿದ್ದ.. ಅವತ್ತಿನ ರಾತ್ರಿ ಮಾರಕಾಸ್ತ್ರಗಳ ಸಮೇತ ಬಂದ ಯುವಕರ ಗ್ಯಾಂಗ್ ಒಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಚೇತನ್ ಎಂಬಾತನ ಹತ್ಯೆ ಮಾಡಿತ್ತು.. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ರಾಜು ಎಂಬಾತನ ಬಂಧಿಸಿತ್ತು.. ಆದ್ರೆ ಕೊಲೆಗೆ ಕಾರಣವಾದ ಹಾಗೂ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದ.. ನಾನ ಕಡೆ ಹುಡುಕಿದರೂ ಪೊಲೀಸರ ಕೈಗೆ ಸಿಗದ ಆತ ಎಸ್ಕೇಪ್ ಆಗಿದ್ದ..
ಒಂದಲ್ಲಾ.. ಎರಡಲ್ಲಾ.. ಬರೊಬ್ಬರಿ 14 ವರ್ಷ ತಲೆ ಮರೆಸಿಕೊಂಡಿದ್ದ ಆ ಆಸಾಮಿ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ.. ಇವನೇ ನೋಡಿ ಆತ.. ಹೆಸರು ಜಾನ್.. ತನ್ನ 19ನೇ ವಯಸ್ಸಿಗೆ ಮಚ್ಚಿಡಿದು ಹಲ್ಲೆ ಮಾಡಿದ ಈತ ಯಾರ ಕೈಗೂ ಸಿಗದಂತೆ ಓಡಾಡಿಕೊಂಡಿದ್ದು ಎಲ್ಲವೂ ಮುಗಿದೊಯ್ತು ಅಂದುಕೊಳ್ಳುವಷ್ಟರಲ್ಲೇ, ಕೊನೆಗೂ ಪೊಲೀಸರಿಗೆ ಸಿಕ್ಕ ಅದೊಂದು ಕ್ಲ್ಯೂ ಮೇಲೆ ಲಾಕ್ ಆದವನು..
ಇದನ್ನೂ ಓದಿ: ಕಂಡ ಕಂಡವರಿಗೆ ಚುಚ್ಚುವ ರೌಡಿಗಳು; ಮೀಮ್ಸ್ ಮಾಡೋದ್ರಲ್ಲಿ ಬ್ಯೂಸಿಯಾದ ಪೊಲೀಸರು!
ಮೂಲತಃ ಆಂದ್ರದವನಾದ ಈ ಜಾನ್, ಈ ಹಿಂದೆ ಬಂಧಿಸಲ್ಪಟ್ಟಿದ್ದ, ರಾಜು ಎಲ್ಲರೂ ಜೊತೆಗಾರರಂತೆ.. ಆ ಸಂದರ್ಭದಲ್ಲಿ ಇವರಿಗಿನ್ನು ಮಿಸೆ ಚಿಗುರುವ ವಯಸ್ಸು.. ದೊಡ್ಡವರು ಹೇಳಿಕೊಟ್ಟ ದಾರಿಯಲ್ಲಿ ಬೆಳೆಯ ಬದಲು ಗಲಾಟೆ, ಹೊಡೆದಾಟ ಅಂತ ಆಗಲೇ ಅಡ್ಡದಾರಿ ಹಿಡಿದಿದ್ದರು.. ಈ ನಡುವೆ ಇದೇ ರೀತಿ ಅಪರಾಧ ಹಿನ್ನಲೆ ಇದ್ದ ಚೇತನ್ ಜೊತೆ ಜಗಳ ಮಾಡಿಕೊಂಡಿದ್ದರು.. ಕೊನೆಗೆ ಅದೇ ಕಾರಣಕ್ಕೆ 2011ರ ಆಗಸ್ಟ್ 22ರ ರಾತ್ರಿ ಆರ್ ಟಿನಗರದ ಕೆಂಪೇಗೌಡ ಬಡವಾಣೆಯಲ್ಲಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.. ಈ ನಡುವೆ ರಾಜ ಲಾಕ್ ಆಗಿ ಜೈಲು ಸೇರಿದ್ದ.. ಬಿಡುಗಡೆಯಾದ ಬಳಿಕವೂ ಆದೇ ದಾರಿ ಹಿಡಿದು ಪೊಲೀಸರಿಗೆ ಸಿಕ್ಕಿ ಬಿಳುತಿದ್ದ.. ಆದ್ರೆ ಜಾನ್ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ.. ಆದ್ರೆ ಆರ್ ಟಿನಗರ ಪೊಲೀಸರು ಮಾತ್ರ ಆತನ ಹುಡುಕಾಟ ನಿಲ್ಲಿಸಿರಲಿಲ್ಲ.. ಇದೇ ರೀತಿ ಹುಡುಕಾಟದ ನಡುವೆ ಸಿಕ್ಕ ಅದೊಂದು ಕ್ಲ್ಯೂ ಜಾನಿ ಹೆಜ್ಜೆ ಗುರುತು ಬಿಚ್ಚಿಟ್ಟಿತ್ತು..
ಕೃತ್ಯದ ಬಳಿಕ ತನ್ನೂರಾದ ಆಂಧ್ರಾಗೆ ತೆರಳಿ ತಲೆ ಮರೆಸಿಕೊಂಡ ಈತ ನಂತರ ಸೈಲೆಂಟ್ ಆಗಿ ವಾಪಾಸ್ ಆಗಿದ್ದ.. ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತ ಇರುವ ಹೋಟೆಲ್ ಗಳಲ್ಲಿ ಕೆಲಸ ಮಾಡುತಿದ್ದ.. ಜೊತೆಗೆ ತಾನು ಮಾಡಿಕೊಂಡಿದ್ದ ಮನೆಗೆ ಅಡುಗೆ ಮಾಡಲು ಸಿಲಿಂಡರ್ ಬೇಕು ಅಂತ ತಂದೆಯ ಆಧಾರ್ ನಂಬರ್ ನಲ್ಲಿ ಸಿಲಿಂಡರ್ ಪಡೆದಿದ್ದ.. ಅಲ್ಲೇ ನೋಡಿ ತಗಲಾಕಿಕೊಂಡಿದ್ದು.. ನಿರಂತರ ಹುಡುಕಾಟದ ನಡುವೆ ಪೊಷಕರು ಆತನ ಬಗ್ಗೆ ನೀಡದ ಮಾಹಿತಿಯೊಂದು ಪೊಲೀಸರಿಗೆ ಸಿಕ್ಕಿತ್ತು..
ಇದನ್ನೂ ಓದಿ: ಬೆಂಗಳೂರಿನಲ್ಲಿ 6x3 ಅಡಿ ಜಾಗದಷ್ಟು ಮನೆಗೆ 25,000 ರೂ. ಬಾಡಿಗೆ! ಯುವಕನ ವಿಡಿಯೋ ವೈರಲ್
ಆ ಬಳಿಕ ಮಲ್ಲೇಶ್ವರಂನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತಿದ್ದ ಜಾನಿಯನ್ನು ಆರ್ ಟಿನಗರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.. ಕೊಲೆ ಮಾಡಿ ಎಸ್ಕೇಪ್ ಆದೇ ಅಂತ 14 ವರ್ಷ ತಲೆ ಮರೆಸಿಕೊಂಡಿದ್ದ ಐನಾತಿ ಹಂತಕನಿಗೆ ಖಾಕಿ ಕೋಳ ತೊಡಿಸಿದೆ.. ಎಲ್ಲವೂ ಮುಗಿದೊಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಜಾನಿ ಈಗ ಜೈಲು ಸೇರಿದ್ದಾನೆ.
