ಬೆಂಗಳೂರು [ಜ.07]: ಜಸ್ಟ್ ಡಯಲ್ ಮೂಲಕ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ್ದ 22 ಲಕ್ಷ ರು. ಮೌಲ್ಯದ ಇನ್ನೋವಾ ಕ್ರಿಸ್ಟ್ ಕಾರು ಬುಕ್ ಮಾಡಿ ಪರಾರಿಯಾಗಿದ್ದವನ್ನು ಬಂಧಿಸಲಾಗಿದೆ. 

ದಾಸನಪುರದ ಹುನುಂತೇಗೌಡ ಪಾಳ್ಯ ನಿವಾಸಿ ಅರುಣ್ ಕುಮಾರ್ ಎಂಬುವವರಿಗೆ ಸೇರಿದ್ದ ಕಾರನ್ನು ಕಳ್ಳತನ ಮಾಡಿದ್ದ ಕರಣ್ ಎಂಬಾತನನ್ನು ಮೊಬೈಲ್ ಲೊಕೋಶನ್ ಆಧರಿಸಿ ಬಂಧಿಸಲಾಗಿದೆ. 

ಕದ್ದೊಯ್ದ ಕಾರನ್ನು ತುಮಕೂರಿನಲ್ಲಿ ಇರಿಸಿದ್ದ ಆರೋಪಿಯನ್ನು ಬಂಧಿಸಿದ ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಅರುಣ್ ಕುಮಾರ್ ಅವರಿಗೆ ಸೇರಿದ ಇನ್ನೋವಾ ಕಾರನ್ನು ಆರೋಪಿ ಬುಕ್ ಮಾಡಿದ್ದ.  ಟ್ರಾವೆಲ್ ಏಜೆನ್ಸಿ ಸಂಪರ್ಕಿಸಿ ಮೈಸೂರಿಗೆ ಪ್ರವಾಸಕ್ಕೆ ತೆರಳಬೇಕಿದ್ದು, ವಾಹನದ ಅಗತ್ಯ ಇದೆ ಎಂದು ಹೇಳಿದ್ದ. ಅದರಂತೆ ಟ್ರಾವೆಲ್ಸ್ ಏಜೆನ್ಸಿ ಅವರು ಈತನಿಗೆ ಕಾರನ್ನು ನೀಡಿದ್ದರು. 

ಕಾರು ಬುಕ್‌ ಮಾಡಿ ಕಾರಿನ ಜತೆ ಪರಾರಿ! ಡ್ರೈವರ್‌ನ್ನು ಲಾಡ್ಜ್‌ಗೆ ಕಳುಹಿಸಿ ಕೃತ್ಯ...

ಈ ವೇಳೆ ಆರೋಪಿ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಯಲ್ಲಿ ಚಾಲಕ ಅರುಣ ಅವರಿಗೆ  ಹೋಟೆಲ್ ಗೆ ತೆರಳಿ ಸ್ನೇಹಿತನಿಂದ ಹಣ ಪಡೆದುಕೊಂಡು ಬರಲು ಸೂಚಿಸಿದ್ದ.  ಡ್ರೈವರ್ ಹೋಟಲ್ ಗೆ ತೆರಳುತ್ತಿದ್ದಂತೆ ಕಾರನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. 

ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಪ್ : ಡಸ್ಟರ್‌ ಕಾರು ಆರ್‌ಟಿಓ ಬಲೆಗೆ...

ಚಾಲಕ ಅರುಣ್ ಕುಮಾರ್ ವಾಪಸ್ ಬರುವ ವೇಳೆ ಕಾರು ನಾಪತ್ತೆಯಾಗಿತ್ತು. ಬಳಿಕ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಇದೀಗ ಆರೋಪಿ ಬಂಧಿಸಲಾಗಿದೆ.