ಬೆಂಗಳೂರು(ಮಾ. 18)   ಬೆಂಗಳೂರಿನಲ್ಲಿ ಲವ್, ಸೆಕ್ಸ್, ದೋಖಾ ಪ್ರಕರಣವೊಂದು ಕೊರೋನಾ ಬಿಸಿಯ ನಡುವೆ ಬೆಳಕಿಗೆ ಬಂದಿದೆ.

ಮದುವೆಯಾಗು ಎಂದು ಒತ್ತಡ ಹೇರಿದ್ರೆ ಖಾಸಗಿ ಪೋಟೋಗಳನ್ನು ವೈರಲ್ ಮಾಡೋದಾಗಿ ಪ್ರೇಯಸಿಗೆ ಬ್ಲಾಕ್ ಮೇಲ್ ಮಾಡಿದ ಕುತಂತ್ರಿಯೊಬ್ಬನ ಕತೆ ಇದು.

ಪ್ರಿಯತಮನೊಂದಿಗಿನ ಸರಸಕ್ಕಾಗಿ ಗಂಡನ ರುಂಡ-ಮುಂಡ ಬೇರೆ ಮಾಡಿದಳು

ಯುವತಿ ಜತೆಗಿದ್ದ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ 30 ವರ್ಷದ ಯುವತಿಗೆ ವಂಚಸಿದ ಆರೋಪ ಕೇಳಿಬಂದಿದೆ. 

ಚಂದ್ರಾಲೇಔಟ್ ನಿವಾಸಿ ರವಿಚಂದ್ರ ಎಂಬಾತನ ಮೇಲೆ ಆರೋಪ ಕೇಳಿಬಂದಿದ್ದೆ. ಸಂತ್ರಸ್ತೆ ಮತ್ತು ರವಿಚಂದ್ರ ಬಾಲ್ಯದಿಂದ ಸ್ನೇಹಿತರು.

ಕಳೆದ ಆರು ವರ್ಷಗಳಿಂದ ಪ್ರೀತಿಸಿ ಮದ್ವೆ ಆಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದು ಈಗ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾರೆ. ಅಲ್ಲದೇ  ಫೆಬ್ರವರಿ 20 ರಂದು ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ಆರೋಪಿ ರವಿಚಂದ್ರ ಭಾವ ದೇವರಾಜ್, ಅಕ್ಕ ಲತಾ ಮತ್ತು ಇತರರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಾಲೇಔಟ್  ಠಾಣೆಯಲ್ಲಿ ದೂರು ದಾಖಲಾಗಿದೆ.