ಕೋರಮಂಗಲದ 60 ಅಡಿ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಹಿ ತಿನಿಸು ಮಾರಾಟ ಮಳಿಗೆಯ ಶೌಚಾಲಯದಲ್ಲಿ ಮೊಬೈಲ್‌ ಇರಿಸಿ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪದಡಿ ಮಳಿಗೆಯ ಸಿಬ್ಬಂದಿ ಬಿಹಾರ ಮೂಲದ ಅಮೋದ್‌ (25))ನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮೇ.7): ಕೋರಮಂಗಲದ 60 ಅಡಿ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಹಿ ತಿನಿಸು ಮಾರಾಟ ಮಳಿಗೆಯ ಶೌಚಾಲಯದಲ್ಲಿ ಮೊಬೈಲ್‌ ಇರಿಸಿ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪದಡಿ ಮಳಿಗೆಯ ಸಿಬ್ಬಂದಿ ಬಿಹಾರ ಮೂಲದ ಅಮೋದ್‌ (25))ನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್‌ 25ರ ಸಂಜೆ ನಡೆದ ಈ ಘಟನೆಯ ಬಗ್ಗೆ ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ದೂರುದಾರ ಮಹಿಳೆ ಮಳಿಗೆಯ ಮೊದಲ ಮಹಡಿಯ ಶೌಚಾಲಯಕ್ಕೆ ತೆರಳಿದಾಗ, ಗೋಡೆಯ ಮೇಲ್ಭಾಗದ ಫೈಬರ್‌ ಗಾಜಿನ ಫಲಕ ಮತ್ತು ಮರದ ಹಲಗೆಗಳ ನಡುವೆ ಮೊಬೈಲ್‌ ಇರಿಸಿರುವುದು ಅನುಮಾನಗೊಂಡು ಪತ್ತೆಹಚ್ಚಿದ್ದಾರೆ. ಮಳಿಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಅಮೋದ್‌ ಶೌಚಾಲಯಕ್ಕೆ ಹೋಗಿ ಬರುವುದು ಸೆರೆಯಾಗಿದೆ. 

ಇದನ್ನೂ ಓದಿ: ಹಣ ಉಳಿಸಲು ಸೆಕೆಂಡ್ ಹ್ಯಾಂಡ್ ಬಟ್ಟೆ ಖರೀದಿಸ್ತೀರಾ? ಈ ಯುವಕನ ಚರ್ಮರೋಗ ಕೇಳಿದ್ರೆ ಶಾಕ್!

ಆರೋಪಿ ಮಹಿಳೆ ಮೊಬೈಲ್‌ ಕಂಡ ತಕ್ಷಣ ವಿಡಿಯೋ ಮತ್ತು ಚಿತ್ರಗಳನ್ನು ಡಿಲೀಟ್‌ ಮಾಡಿದ್ದಾನೆ. ಪೊಲೀಸರು ಆತನ ಮೊಬೈಲ್‌ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.