ಬೆಂಗಳೂರು(ಮಾ.21): ಮಾದಕ ವಸ್ತು ಮಾರಾಟ ಜಾಲದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಚಿತ್ರ ನಿರ್ಮಾಪಕನ ಜೊತೆ ಸಂಪರ್ಕ ಹೊಂದಿರುವ ಪ್ರಕರಣ ಸಂಬಂಧ ಮತ್ತೊಬ್ಬ ವಿದೇಶಿ ಪೆಡ್ಲರ್‌ನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಸಿಕ್ಕ ಮಾಹಿತಿಗಳು ಮತ್ತಷ್ಟು ಕೋನಗಳನ್ನು ತೆರೆದಿವೆ

ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ 75 ಲಕ್ಷದ ಡ್ರಗ್ಸ್‌ ವಶ

ಗೋವಿಂದ ಪುರ ಡ್ರಗ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್ ವುಡ್  ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನವಾಗಿದೆ. ಮಾ.8ರಂದು ನಿರ್ಮಾಪಕ ಶಂಕರೇಗೌಡ ಮನೆ ಮೇಲೆ ಪೊಲೀಸರ ದಾಳಿಯಾಗಿತ್ತು.

ಪ್ರಕರಣದ ತನಿಖೆ ನಂತರ ಬಂಧಿಸಿದ ಶಂಕರೇಗೌಡ ಬಂಧನವಾಗಿದೆ. ಪೇಜ್ -3 ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಟೀಂ ಮಾಹಿತಿ ಆಧರಿಸಿ ಬಂಧನವಾಗಿದೆ ಎನ್ನಲಾಗಿದೆ. ಡ್ರಗ್ ಪೆಡ್ಲರ್ಸ್ ಜೊತೆ ಸಂಪರ್ಕ ಹೊಂದಿ ಪಾರ್ಟಿ ನಡೆಸುತ್ತಿದ್ದ ಆರೋಪ ಗೌಡರ ಮೇಲೆ ಇದೆ.

ನಿರ್ಮಾಪಕ ಶಂಕರ್ ಆಪ್ತ ವಲಯದಲ್ಲಿದ್ದವರನ್ನೂ ನೊಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು ತನಿಖೆ ನಂತರ ಬಂಧನವಾಗಿದ್ದು ಇನ್ನು ಯಾವ ಮಾಹಿತಿ ಹೊರಬರಲಿದೆ  ಕಾದು ನೋಡಬೇಕಿದೆ.