ಬೆಂಗಳೂರು(ಜೂ. 12)  ತ್ರಿಕೋನ ಪ್ರೇಮದಲ್ಲಿ ಮಾಜಿ ಪ್ರಿಯಕರನಿಂದ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಮೋನಿಕ (23) ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋನಿಕ ಕೊನೆಯುಸಿರೆಳೆದಿದ್ದಾರೆ.  ಜೂನ್ 7ರಂದು ಚಿಕ್ಕಬಾಣವಾರದಲ್ಲಿ ಮೋನಿಕ ಮೇಲೆ ಹಲ್ಲೆಯಾಗಿತ್ತು.

ಬಾಯ್‌ಫ್ರೆಂಡ್ ಜತೆ ರೊಮ್ಯಾನ್ಸ್ ಮಾಡ್ತಿದ್ದಾಗ ಮಾಜಿ ಪ್ರಿಯಕರ ಎಂಟ್ರಿ ಕೊಟ್ಟಿದ್ದ

ಮೋನಿಕಳ ಮಾಜಿ ಪ್ರಿಯಕರ ಬಬಿತ್ ಹಾಗೂ ಹಾಲಿ ಪ್ರಿಯಕರ ರಾಹುಲ್ ಮೇಲೆ ಪ್ರಕರಣ ದಾಖಲಾಗಿತ್ತು.  ಆರೋಪಿಗಳನ್ನು  ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದರು.

ಆರೋಪಿ ಬಬಿತ್‌ನೊಂದಿಗಿನ 5 ವರ್ಷದ ಪ್ರೀತಿಗೆ ಯೂಟರ್ನ್ ಹೊಡೆದಿದ್ದ ಮೋನಿಕ ಬಬಿತ್‌ನ ಸ್ನೇಹಿತ ಆರೋಪಿ ರಾಹುಲ್‌ ನನ್ನು ನಂತರ ಪ್ರೀತಿಸುತ್ತಿದ್ದಳು  ಭಾನುವಾರ ರಾಹುಲ್ ಬರ್ತಡೇ ಪಾರ್ಟಿಗೆ ಹೋಗಿದ್ದ ಮೋನಿಕ ಹೋಗಿದ್ದರು. ಈ ವೇಳೆ ರಾಹುಲ್ ಮನೆಗೆ ಹೋಗಿ ಗಲಾಟೆ ಬಬಿತ್ ಗಲಾಟೆ ಮಾಡಿದ್ದ.

ಮೋನಿಕಳನ್ನು ಬೈಕ್‌ನಲ್ಲಿ ತನ್ನ ಮನೆಗೆ ಕರೆತಂದಿದ್ದ ಬಬಿತ್ ನಂತರ  ಮೋನಿಕಾಳನ್ನು ಗೋಡೆಗೆ ಗುದ್ದಿದ್ದ. ಪರಿಣಾಮ ಹುಡುಗಿ ಕುಸಿದು ಬಿದ್ದಿದ್ದಳು . ನಂತರ ಮೋನಿಕಾಳ ತಂದೆಗೆ ಕರೆ ಮಾಡಿದ್ದ. ಇಬ್ಬರು ಆರೋಪಿಗಳು ಪೊಲೀಸರ ವಶದದಲ್ಲಿಯೇ ಇದ್ದಾರೆ.