ನೇಪಾಳ (Nepal)ಮೂಲದ ಆ ದಂಪತಿ 20 ವರ್ಷದ ಹಿಂದೆ ಮದುವೆ ಆಗಿದ್ರು. 6 ವರ್ಷದಿಂದ ಬೆಂಗಳೂರಲ್ಲಿ (Bengaluru) ಬಂದು ನೆಲೆಸಿದ್ದರು.  ಆದ್ರೆ ಅನುಮಾನವೆಂಬ (Doubt) ಭೂತ ಪತಿಯ ತಲೆಗೆ ಹೊಕ್ಕಿತ್ತು.

ಬೆಂಗಳೂರು (ಮಾ. 27): ನೇಪಾಳ (Nepal)ಮೂಲದ ಆ ದಂಪತಿ 20 ವರ್ಷದ ಹಿಂದೆ ಮದುವೆ ಆಗಿದ್ರು. 6 ವರ್ಷದಿಂದ ಬೆಂಗಳೂರಲ್ಲಿ (Bengaluru) ಬಂದು ನೆಲೆಸಿದ್ದರು. ಆದ್ರೆ ಅನುಮಾನವೆಂಬ (Doubt) ಭೂತ ಪತಿಯ ತಲೆಗೆ ಹೊಕ್ಕಿತ್ತು.ಮೂರು ವರ್ಷದ ಹಿಂದೆ ಬೇರೆ ಬೇರೆಯಾಗಿದ್ದರು. ನಾಲ್ಕು ದಿನದ ಹಿಂದೆ ಮತ್ತೆ ಪತ್ನಿ ಮನೆಗೆ ಬಂದ ಆಸಾಮಿ ಪತ್ನಿ ಕೊಲೆ ಮಾಡಿ ಜೈಲು ಸೇರಿದ್ದಾನೆ.

ನೇಪಾಳ ಮೂಲದ ಕಾರ್ಮಿಕ ತೇಜ್ ಬಹದ್ದೂರ್ ಹಾಗೂ ಕಮಲಾದೇವಿ ಈ ದಂಪತಿ 20 ವರ್ಷದ ಹಿಂದೆ ಮದುವೆಯಾಗಿದ್ರು. 6 ವರ್ಷದಿಂದ ಬೆಂಗಳೂರಲ್ಲಿ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಮೂವರು ಮಕ್ಕಳಿದ್ದು ಇಬ್ಬರು ಹೆಣ್ಣು ಮಕ್ಕಳು ನೇಪಾಳದಲ್ಲಿದ್ರೆ, ಗಂಡುಮಗ ಮಾತ್ರ ಬೆಂಗಳೂರಿನ ಪುಸ್ತಕ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ತೇಜ್ ಬಹದ್ದೂರ್ ಜೆಪಿ ನಗರದ (JP nagar) ಹಂದಿ ಫಾರ್ಮ್ ನಲ್ಲಿ ಕೆಲಸ ಮಾಡಿಕೊಂಡಿದ್ದ‌.ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ಹೀಗಿರ್ಬೇಕಾದ್ರೆ ಕಳೆದ ಮೂರು ವರ್ಷಗಳಿಂದ ಪತ್ನಿಗೆ ಅನೈತಿಕ ಸಂಬಂಧ ಇದೆ ಎಂಬ ಸಂಶಯ ಪತಿಗೆ ಕಾಡತೊಡಗಿತ್ತು.ಹಾಗಾಗಿ ಮನಸ್ತಾಪಗೊಂಡು ಬೇರೆ ಬೇರೆ ಕಡೆ ವಾಸವಾಗಿದ್ರು. 

 ಇತ್ತೀಚೆಗೆ ಕಮಲಾದೇವಿಗೆ ಕರೆ ಮಾಡಿದ್ದ ತೇಜ್ ಬಹುದ್ದೂರ್, ನಿನ್ನ ಬಿಟ್ಟು ಇರಕ್ಕಾಗಲ್ಲ. ಮತ್ತೆ ಅನುಮಾನ ಪಡಲ್ಲ.ನಿನ್ನ ಜೊತೆಯೇ ಬದುಕಿ ನಿನ್ನ ಮಡಿಲಲ್ಲೇ ಸಾಯ್ತೀನಿ ಅಂತಾ ಡೈಲಾಗ್ ಹೊಡೆದಿದ್ದ. ಆಯ್ತು ಅಂತಾ ರಾಮಮೂರ್ತಿನಗರದ ಬಿ.ಚನ್ನಸಂದ್ರದ ಬಚಣ್ಣ ಲೇಔಟ್ ನ ಮೂರನೇ ಅಡ್ಡರಸ್ತೆಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ನಾಲ್ಕು ದಿನದ ಹಿಂದೆ ಹೆಂಡತಿ ವಾಸವಿದ್ದ ಚಿಕ್ಕ ರೂಂ ಸೇರಿಕೊಂಡ ಆಸಾಮಿ ತನ್ನ ಬುದ್ಧಿ ಬಿಟ್ಟಿರಲಿಲ್ಲ. ಪತ್ನಿ ಫೋನ್ ನಲ್ಲಿ ಮಾತಾಡಿದ್ರೆ ಸಹಿಸಿಕೊಳ್ತಿರಲಿಲ್ಲ. ಅದೇ ಅನುಮಾನವೆಂಬ ಭೂತ ಮತ್ತೆ ಕಾಡತೊಡಗಿದೆ‌.

ಹೀಗಿರಬೇಕಾದರೆ ನಿನ್ನೆ ಮಗ ಕೆಲಸದಿಂದ ಬಂದಿರಲಿಲ್ಲ. ಪತಿ ಪತ್ನಿ ಇಬ್ಬರೇ ಇದ್ದಾಗ ಮೊನ್ನೆ ರಾತ್ರಿ 8 ಗಂಟೆ ಸುಮಾರಿಗೆ ಗಲಾಟೆ ಶುರುವಾಗಿದೆ.ಮಾತಿಗೆ ಮಾತು ಬೆಳೆದು ಮನೆಯಲ್ಲಿದ್ದ ಚಾಕುವಿನಿಂದ ಕಮಲಾದೇವಿಯ ಎದೆಯ ಕೆಳಭಾಗಕ್ಕೆ ಚಾಕುವಿನಿಂದ ಇರಿದು ತೇಜ್ ಬಹದ್ದೂರ್ ಪರಾರಿಯಾಗಿದ್ದಾನೆ.ಆಕೆ ಎಷ್ಟೇ ಕಿರುಚಾಡಿದ್ರು ಯಾರು ಬರದಿದ್ದಾಗ ರಕ್ತದ ಮಡುವಲ್ಲೇ ಕೆಳಗಿನ ವರೆಗೂ ಬಂದಿದ್ದಾಳೆ.ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸೋ ಪ್ರಯತ್ನ ಮಾಡಿದ್ರು ಪ್ರಯೋಜನವಾಗಲಿಲ್ಲ. 

ಘಟನೆ ಸಂಬಂಧ ರಾಮಮೂರ್ತಿನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.