ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಕೆ.ಜಿ.ಹಳ್ಳಿ ಮನೆಗೆ ಬೆಂಕಿ ಹಾಗೂ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್‌ ಮುಂದಾಗಿದೆ.

ಬೆಂಗಳೂರು (ಜು.26): ಜಾಗತಿಕವಾಗಿ ಕೋವಿಡ್‌-19 ಸೋಂಕು ಕಾಣಿಸಿಕೊಂಡು ಜನರು ಪರಿತಪಿಸುವ ಅವಧಿಯಲ್ಲಿಯೇ ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಅವರ ಕೆ.ಜಿ.ಹಳ್ಳಿಯಲ್ಲಿರುವ ಮನೆ ಹಾಗೂ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ರಕ್ಷಣೆ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. 

ಹೌದು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂಬ ಅನುಮಾನಗಳು ಕಂಡುಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಮೈಸೂರು ಜಿಲ್ಲೆಯ ಶಾಸಕ ತನ್ವೀರ್‌ ಸೇಠ್‌ ಅವರು ಸರ್ಕಾರಕ್ಕೆ ಪತ್ರ ಬರೆದು ಈ ಹಿಂಸಾಚಾರ ಪ್ರಕರಣಗಳಲ್ಲಿ ದಾಖಲಾದ ಮೊಕದ್ದಮೆಗಳನ್ನು ಮರು ಪರಿಶೀಲಿಸಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಕಾನೂನಾತ್ಮಕ ಕ್ರಮದಡಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆ ಈಗ ಸರ್ಕಾರದಲ್ಲಿ ಆರಂಭವಾಗಿದ್ದು ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚೆ ಮಾಡಿ ಅದನ್ನು ಸಚಿವ ಸಂಪುಟದ ಮುಂದಿಟ್ಟು ತೀರ್ಮಾನ ಕೈಗೊಳ್ಳಲಾಗುತ್ತದೆ. 

Bengaluru: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಬೆಂಕಿ ಹಚ್ಚಿದ ಕೇಸ್‌ ವಾಪಸ್‌?: ಗೃಹ ಸಚಿವರ ಸ್ಪಷ್ಟನೆ ಇಲ್ಲಿದೆ

ಸರ್ಕಾರ ರಕ್ಷಣೆಗೆ ಮುಂದಾದ ಮೂವರು ಯಾರು? 
ಇನ್ನು ಸರ್ಕಾರಕ್ಕೆ ತನ್ವೀರ್‌ ಸೇಠ್‌ ಮಾತ್ರವಲ್ಲದೇ ಹಲವು ಶಾಸಕರು ರಾಜ್ಯದ ಬೆಂಗಳೂರಿನ ಹಲವು ಗಲಭೆಗಳ ಪ್ರಕರಣ ಮರು ಪರಿಶೀಲಿಸಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನು ಆಧಾರವಾಗಿಟ್ಟಿಕೊಂಡು ಸರ್ಕಾರ ಸಚಿವ ಸಂಪುಟದ ಉಪಸಮಿತಿಯು ಪ್ರಕ್ರಿಯೆ ಆರಂಭಿಸಿದೆ. ಈ ಮೂಲಕ ಮೂವರ ರಕ್ಷಣೆಗೆ ಮುಂದಾಯ್ತಾ ರಾಜ್ಯ ಸರ್ಕಾರ? ಎಂಬದು ಎಲ್ಲರ ಅನುಮಾನವಾಗಿದೆ. ಬೃಹತ್‌ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್, ಕಾರ್ಪೋರೇಟರ್ ಪತಿ ಕಲಿಂ ಪಾಷಾ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ರಕ್ಷಣೆಗೆ ಯತ್ನ ಮಾಡಲಾಗುತ್ತಿದೆ. ಈ ಮೂವರೂ ಕಾಂಗ್ರೆಸ್ ಪ್ರಭಾವಿ ನಾಯಕರ ಹಿಂಬಾಲಕರು ಆಗಿದ್ದಾರೆ. 

ಕಾಂಗ್ರೆಸ್‌ ಸರ್ಕಾರದ ಪ್ರಭಾವಿ ನಾಯಕ ಹಿಂಬಾಲಕರು: ಸಂಪತ್‌ರಾಜ್‌ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಪ್ತನೂ ಆಗಿದ್ದಾನೆ. ಉಳಿದಂತೆ ಇನ್ನು ಜಾಕೀರ್‌ ಹುಸೇನ್‌ ಕೆ.ಜೆ. ಜಾರ್ಜ್‌ ಅವರ ಹಿಂಬಾಲಕ ಆಗಿದ್ದಾನೆ. ಕಲೀಂ ಪಾಷಾ ಕೂಡ ಮಾಜಿ ಕಾರ್ಪೋರೇಟರ್‌ ಪತಿಯಾಗಿದ್ದು, ಇವರಿಗೆ ಕ್ಲೀನ್‌ ಚಿಟ್‌ ನೀಡಲು ಸಿದ್ಧತೆ ನಡೆಯುತ್ತಿದೆ. ಇನ್ನು ಈ ಮೂವರು ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಸದ್ಯಕ್ಕೆ ಮೂವರೂ ಬೇಲ್‌ ಪಡೆದುಕೊಂಡು ಹೊರಗಿದ್ದಾರೆ. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತಮ್ಮ ಹಿಬಾಲಕರ ರಕ್ಷಣೆಗೆ ಮುಂದಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ವಿಡಿಯೋ: 3 ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

347 ಮಂದಿಯ ವಿರುದ್ಧ ಪ್ರಕರಣ ದಾಖಲು: ಕಳೆದ 2020ರ ಆಗಸ್ಟ್‌ 11ರಂದು ನಡೆದ ಡಿ.ಜೆ.ಹಳ್ಳಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಕ್ಕಿದ್ದಕ್ಕೆ 138 ಮಂದಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 109 ಜನರು ಸೇರಿದಂತೆ ಒಟ್ಟು 347 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಪ್ರಕರಣ ದಾಖಲಾದ ನಂತರ ಎನ್‌ಐಗೆ (NIA) ಕೇಸ್‌ ವರ್ಗಾವಣೆ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರದಡಿ ದಾಖಲಾದ ಕೇಸ್‌ಗಳಲ್ಲಿ ಕೇಸ್‌ ವಾಪಸ್‌ ಪಡೆಯಲು ಅವಕಾಶವಿದ್ದು, ಎನ್‌ಐಎ ದಾಖಲಿಸಿಕೊಂಡ ಮೂರು ಕೇಸ್‌ಗಳ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಲು ಸಾಧ್ಯವಿಲ್ಲ. ಗಲಭೆಯಲ್ಲಿ ಭಾಗಿಯಾಗಿದ್ದವರನ್ನು ಎನ್‌ಐಎ ಜಾರ್ಜ್‌ಶೀಟ್‌ ಪಟ್ಟಿಯಲ್ಲಿ ಯಾವೆಲ್ಲ ಹೆಸರುಗಳು ಬಂದಿವೆಯೋ ಅವುಗಳನ್ನು ಕೈಬಿಡಲು ಅವಕಾಶವಿಲ್ಲ.