ಮಗಳನ್ನ ಹೊತ್ತೊಯ್ದಿದಲ್ಲದೆ ಮನೆ ವಸ್ತುಗಳನ್ನೂ ಕದ್ದೊಯ್ದ ಅಳಿಯನ ಬಂಧನ!
ಮಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವಳನ್ನು ಮನೆಯಿಂದ ಕರೆದೊಯ್ದಿದ್ದಲ್ಲದೆ, ಒಂದೂವರೆ ವರ್ಷದ ಬಳಿಕ ಮತ್ತೆ ಅತ್ತೆ ಮನೆಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ನ.21): ಮಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವಳನ್ನು ಮನೆಯಿಂದ ಕರೆದೊಯ್ದಿದ್ದಲ್ಲದೆ, ಒಂದೂವರೆ ವರ್ಷದ ಬಳಿಕ ಮತ್ತೆ ಅತ್ತೆ ಮನೆಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರದೀಪ್ ಕುಮಾರ್ ಬಂಧಿತ ಆರೋಪಿ. ಒಂದೂವರೆ ವರ್ಷದ ಹಿಂದೆ ರೆಜಿನಾ ಅವರ ಚಿಕ್ಕ ಮಗಳು ಲಾವಣ್ಯಾಳನ್ನ ಪ್ರೀತಿಸಿ ಆಕೆಯನ್ನ ಕರೆದುಕೊಂಡು ಓಡಿ ಹೋಗಿದ್ದ ಆರೋಪಿ ಪ್ರದೀಪ್ ಕುಮಾರ್. ಮಗಳು ಎಲ್ಲಿದ್ದಾಳೆಂದು ಕೂಡ ರೆಜಿನಾ ಅವರಿಗೆ ಈವರೆಗೆ ಗೊತ್ತಿಲ್ಲ. ಮಗಳನ್ನು ಕರೆದೊಯ್ದ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಹಿಳೆ.
ಮಗಳನ್ನ ಕರೆದುಕೊಂಡು ಓಡಿಹೋಗಿದ್ದ ಆರೋಪಿ ಪ್ರದೀಪ್, ಅತ್ತೆ ಕನ್ಯಾಕುಮಾರಿಗೆ ಪ್ರವಾಸ ಹೋಗಿದ್ದ ಸಂದರ್ಭ ನೋಡಿಕೊಂಡು ಅತ್ತೆಯ ಮನೆ ಬಾಗಿಲು ಮುರಿದು ಬೆಲೆಬಾಳುವ ವಸ್ತು ಚಿನ್ನಾಭರಣ ಕದ್ದೊಯ್ದಿದ್ದಾನೆ.
'ನಿಮ್ಮಿಂದಾಗಿ ನಾನು ಸುರಕ್ಷಿತವಾಗಿ ಊರಿಗೆ ಬಂದೆ'; ಸುವರ್ಣನ್ಯೂಸ್‌ಗೆ ಧನ್ಯವಾದ ತಿಳಿಸಿದ ಚಂದ್ರಶೇಖರ್
ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಅಕ್ಕ ಪಕ್ಕದ ನಿವಾಸಿಗಳು ನೋಡಿದ್ದರು. ನೆರೆಹೊರೆಯವರು ಪ್ರಶ್ನೆ ಮಾಡಿದಾಗ ನಾನು ಇವರ ಸಂಬಂಧಿಕರು ಎಂದು ಹೇಳಿದ್ದ ಖರ್ತನಾಕ್ ಅಳಿಯ. ಮೊಬೈಲ್ ನಲ್ಲಿ ಫೊಟೋ ತೆಗೆದು ರೆಜಿನಾ ಅವರಿಗೆ ಕರೆ ಮಾಡಿದ್ದ ಸ್ಥಳೀಯರು. ಆದರೆ ಆ ವೇಳೆಗೆ ರೆಜಿನಾ ಅವರ ನಂಬರ್ ನಾಟ್ ರೀಚೆಬಲ್ ಆದ ಹಿನ್ನಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ರೆಜಿನಾ ವಾಪಾಸ್ ಬಂದಾಗ ಬಾಗಿಲು ಒಡೆದಿತ್ತು . ಅನುಮಾನಗೊಂಡು ನೋಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ಕಳ್ಳತನವಾಗಿತ್ತು.
ಕಳ್ಳತನವಾಗಿರುವುದು ಗೊತ್ತಾದ ಕೂಡಲೇ ಶಾಕ್ ಆಗಿದ್ದ ರೆಜಿನಾ. ಅಕ್ಕಪಕ್ಕದವರನ್ನು ವಿಚಾರಿಸಿದ್ದರು. ಆಗ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ ಎಂದಿದ್ದ ಸ್ಥಳೀಯ ನಿವಾಸಿಗಳು ಆರೋಪಿಯ ಫೋಟೊ ತೆಗೆದಿರೋದಾಗಿ ಪ್ರದೀಪ್‌ಕುಮಾರನ ಫೋಟೊ ತೋರಿಸಿದ್ದರು. ಫೊಟೋ ನೋಡಿದಾಗ ತನ್ನ ಅಳಿಯನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಮದುವೆಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳೊಂದಿಗೆ ಅಸಭ್ಯ ವರ್ತನೆ; ಮಚ್ಚಿನಿಂದ ಹಲ್ಲೆ!
ಸದ್ಯ ಈ ಸಂಬಂಧ ತನ್ನ ಅಳಿಯನ ವಿರುದ್ಧ ದೂರು ದಾಖಲಿಸಿದ ರೆಜಿನಾ. ದೂರು ದಾಖಲಾಗುತ್ತಿದ್ದಂತೆ 'ಮಾವ'ನ ಮನೆ ಸೇರಿದ ಅಳಿಯ.