ನಡು ರಸ್ತೆಯಲ್ಲಿ ಜಗಳವಾಡಿಕೊಂಡ ಪ್ರೇಮಿಗಳು ಈ ವೇಳೆ ಯುವತಿ ಮೇಲೆ ಹಲ್ಲೆ ಮಾಡಿದನೆಂದು ಯುವಕನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗ ನಡೆದಿದೆ.

ಆನೇಕಲ್ (ಡಿ.21) ::ನಡು ರಸ್ತೆಯಲ್ಲಿ ಜಗಳವಾಡಿಕೊಂಡ ಪ್ರೇಮಿಗಳು ಈ ವೇಳೆ ಯುವತಿ ಮೇಲೆ ಹಲ್ಲೆ ಮಾಡಿದನೆಂದು ಯುವಕನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗ ನಡೆದಿದೆ.

ಇಬ್ಬರು ಪ್ರೇಮಿಗಳು ಮೂಲತಃ ಮಂಗಳೂರಿನವರು. ಪರಸ್ಪರ ಪ್ರೀತಿ ಮಾಡುತ್ತಿದ್ದ ಯುವಕ-ಯುವತಿ. ಸಣ್ಣ ವಿಚಾರಕ್ಕೆ ನಡೆದಿರುವ ಜಗಳ. ಯುವತಿಯ ಮೇಲೆ ಹಲ್ಲೆ ಮಾಡುತ್ತಿದ್ದಾನೆಂದು ಪ್ರೇಮಿಗಳಿಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿದ ಸಾರ್ವಜನಿಕರು.

ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ ಮನೆಗೆ ಬಂದ ಪತಿಗೆ ಶಾಕ್; ಪ್ರಶ್ನಿಸಿದ್ದಕ್ಕೆ ಭೀಕರವಾಗಿ ಕೊಂದ ಪತ್ನಿ!

ಹೇಗಾಯ್ತು ಘಟನೆ?

ಮಂಗಳೂರು ಮೂಲದವರಾದ ಯುವಕ-ಯುವತಿ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಆನೇಕಲ್ ಪಟ್ಟಣದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ಯುವತಿ ಯುವಕನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಇಂದು ಆನೇಕಲ್ ಪಟ್ಟಣಕ್ಕೆ ಆಗಮಿಸಿದ್ದ ಯುವತಿಯ ಪ್ರಿಯಕರ. ಇಬ್ಬರು ಒಬ್ಬರಿಗೊಬ್ಬರು ಮಾತನಾಡಿಕೊಂಡು ಆನೇಕಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಬಂದಿದ್ದರು. 

ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದ, ಮದುವೆ ಆಗಿದೆ ಮಕ್ಕಳಿವೆ ಎಂದವಳು ಇನ್ನೊಬ್ಬನೊಂದಿಗೆ ಲವ್ವಿಡವ್ವಿ!

ಈ ಮಧ್ಯೆ ಇಬ್ಬರ ನಡುವೆ ಜಗಳ ಆಗಿತ್ತು. ಪ್ರೇಮಿಗಳ ನಡುವೆ ಜಗಳ ಆಗುತ್ತಿದ್ದಾಗ ಮಧ್ಯಪ್ರವೇಸಿದ ಇನ್ನೊಂದು ಗುಂಪು. ಯುವನಿಗೆ ನಡು ರಸ್ತೆಯಲ್ಲೇ ತಿಳಿಸಿದ ಪುಂಡರ ತಂಡ.. ಹೆಲ್ಮೆಟ್ ಹಿಡಿದು ಯುವಕನ ಮೇಲೆ ಹಲ್ಲೆ ಮಾಡಿದ ಪುಂಡರು. ಆನೇಕಲ್ ಪೊಲೀಸ್ ಠಾಣೆಯ ಹತ್ತಿರದಲ್ಲೇ ನಡೆದ ಘಟನೆ. ಸದ್ಯ ಯುವಕ ಹಾಗೂ ಯುವತಿಯನ್ನು ಆನೇಕಲ್ ಠಾಣೆಗೆ ಕರೆದೊಯ್ದ ಪೊಲೀಸರು