ಮೊಹಮ್ಮದ್‌ ನಾಸಿರ್‌ ಒಂದು ವರ್ಷದಿಂದ ಕೋಟದ ಕೋಚಿಂಗ್‌ ಇನ್ಸಟಿಟ್ಯೂಟ್‌ನಲ್ಲಿ ನೀಟ್‌ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ, ಭಾನುವಾರ ಜೈಪುರದಲ್ಲಿ ಪರೀಕ್ಷೆಯನ್ನು ಬರೆದು ಸೋಮವಾರ ಕೋಟಕ್ಕೆ ಮರಳಿದ್ದ. ಅದೇ ದಿನ ರಾತ್ರಿ 11 ಗಂಟೆಗೆ ಇಲ್ಲಿನ ಕಟ್ಟಡವೊಂದರ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಕೋಟ(ರಾಜಸ್ಥಾನ)(ಮೇ.10): ಬೆಂಗಳೂರು ಮೂಲದ ಮೊಹಮ್ಮದ್‌ ನಾಸಿರ್‌ (22) ಎಂಬ ವಿದ್ಯಾರ್ಥಿ ಇಲ್ಲಿನ ವಿಜ್ಞಾನನಗರದಲ್ಲಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈತ ಒಂದು ವರ್ಷದಿಂದ ಕೋಟದ ಕೋಚಿಂಗ್‌ ಇನ್ಸಟಿಟ್ಯೂಟ್‌ನಲ್ಲಿ ನೀಟ್‌ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ, ಭಾನುವಾರ ಜೈಪುರದಲ್ಲಿ ಪರೀಕ್ಷೆಯನ್ನು ಬರೆದು ಸೋಮವಾರ ಕೋಟಕ್ಕೆ ಮರಳಿದ್ದ. ಅದೇ ದಿನ ರಾತ್ರಿ 11 ಗಂಟೆಗೆ ಇಲ್ಲಿನ ಕಟ್ಟಡವೊಂದರ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಮಯದಲ್ಲಿ ಅವನ ರೂಂನಲ್ಲಿ ಯಾರು ಇರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಪ್ರೇಮಿಗಳ ಶವ ಪತ್ತೆ: ಮನೆಯಿಂದ ಓಡಿಹೋಗಿ ಮಸಣ ಸೇರಿದರು

ಈತನ ದೇಹವನ್ನು ಎಂಬಿಎಸ್‌ ಆಸ್ಪತ್ರೆಯೆಯಲ್ಲಿ ಇರಿಸಲಾಗಿದ್ದು, ಬೆಂಗಳೂರಿನಿಂದ ಆತನ ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.