ಬೆಂಗಳೂರು(ನ.  16) ಡಿ.ಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಬಂಧನವಾಗಿದೆ.  ಬೆಂಗಳೂರಿನಲ್ಲಿಯೇ ಸಂಪತ್ ರಾಜ್ ಬಲೆಗೆ ಬಿದ್ದಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಡಲು ಪ್ರಚೋದನೆಯ ಆರೋಪಿಯಾಗಿರುವ ಸಂಪತ್  ರಾಜ್ ತಲೆಮರೆಸಿಕೊಂಡಿದ್ದರು. ಕೋವಿಡ್ ತಗುಲಿದೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ  ಅಲ್ಲಿಂದ ಪರಾರಿಯಾಗಿದ್ದರು. ಸಂಪತ್ ರಾಜ್ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು  ಹೇಳಲಾಗಿತ್ತು. 

ಸಂಪತ್ ರಾಜ್ ಹಿಡಿಯಲು ಸೋನಿಯಾಗೆ ಮನವಿ ಮಾಡುವ ಪರಿಸ್ಥಿತಿ ಬಂತು

ಡಿಜೆ ಹಳ್ಳಿ ಗಲಭೆ ಪ್ರಕರಣ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ನಾಪತ್ತೆಯಾಗಿರುವ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಬೆನ್ನು ಹತ್ತಿತ್ತು.ಸಂಪತ್ ರಾಜ್ ಗೆ ನಾಗರಹೊಳೆಯಲ್ಲಿ ಆಶ್ರಯ ಕೊಟ್ಟಿದ್ದ ಎನ್ನಲಾದ ರಿಯಾಜುದ್ದೀನ್ ಎಂಬಾತನನ್ನು ಬಂಧಿಸಿ ಮಾಹಿತಿ   ಕಲೆಹಾಕಲಾಗುತ್ತಿತ್ತು. ಈಗ ಸಂಪತ್ ರಾಜ್ ಬಂಧನವಾಗಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಹೈಕೋರ್ಟ್ ಸಹ ಯಾಕೆ ಇಷ್ಟು ವಿಳಂಬವಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿತ್ತು.