Asianet Suvarna News Asianet Suvarna News

ಪೊಲೀಸರಿಂದಲೇ ಚಿನ್ನ ಸ್ಮಗ್ಲಿಂಗ್; ಕಿಂಗ್ ಪಿನ್ ಆರೋಪಿಗೆ ಜಾಮೀನು

* ಪೊಲೀಸರಿಂದಲೇ 4.9ಕೆಜಿ ಸ್ಮಗ್ಲಿಂಗ್ ಆಗುತ್ತಿದ್ದ ಚಿನ್ನ ಕಳ್ಳತನ ಪ್ರಕರಣ
*  ಸಿಐಡಿ ವಶದಲ್ಲಿದ್ದ ಆರೋಪಿಗೆ ಷರತ್ತು ಬದ್ಧ ಜಾಮೀನು
* ಹುಬ್ಬಳ್ಳಿ ಮೂಲದ ಕಿರಣ್ ವೀರನಗೌಡರಗೆ ಷರತ್ತುಬದ್ಧ ಜಾಮೀನು ಮಂಜೂರು
* ಬೆಳಗಾವಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ

Belagavi missing gold case accused gets bail mah
Author
Bengaluru, First Published Jun 30, 2021, 9:33 PM IST

ಬೆಳಗಾವಿ(ಜೂ.  30)  ಪೊಲೀಸರಿಂದಲೇ 4.9 ಕೆಜಿ ಸ್ಮಗ್ಲಿಂಗ್ ಆಗುತ್ತಿದ್ದ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಪ್ರಕರಣದ ಕಿಂಗ್ ಪಿನ್ ಎನ್ನಲಾದವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.

ಹುಬ್ಬಳ್ಳಿ ಮೂಲದ ಕಿರಣ್ ವೀರನಗೌಡರಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಬೆಳಗಾವಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಧೀಶ  ಎನ್.ವಿ. ವಿಜಯ್  ಪೀಠ ಜಾಮೀನು ನೀಡಿದೆ.

ಫುಲ್ ಟೈಟಾಗಿ ಕಳ್ಳತನಕ್ಕೆ ಇಳಿಯುತ್ತಿದ್ದ ಕಳ್ಳ ಸಿಕ್ಕಿಬಿದ್ದ

3 ಲಕ್ಷ ವೈಯಕ್ತಿಕ ಬಾಂಡ್ ಹಾಗೂ 15 ದಿನಕ್ಕೊಮ್ಮೆ ಸಿಐಡಿ ತನಿಖೆಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಿಡಿಯೇಟರ್ ಆಗಿ ಕೆಲಸ ಮಾಡಿದ್ದ ಆರೋಪ ಕಿರಣ್ ಮೇಲೆ ಇದೆ. ಜೂನ್ 6 ಕ್ಕೆ ಹುಬ್ಬಳ್ಳಿಯಲ್ಲಿ ಕಿರಣ್ ವೀರನಗೌಡರನ್ನು ಸಿಐಡಿ ಬಂಧಿಸಿತ್ತು. ಬಳಿಕ ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದಿತ್ತು.

Follow Us:
Download App:
  • android
  • ios