ತೆಲುಗಿನ ಪುಷ್ಪಾ ಸಿನಿಮಾ ನೋಡ್ಕೊಂಡು ಇಲ್ಲೊಂದು ಖದೀಮರ ಗ್ಯಾಂಗ್ ಡಿಫರೆಂಟ್ ಸ್ಟೈಲಲ್ಲಿ ಗಾಂಜಾ ಮಾರಾಟ ಮಾಡೋಕೆ ಹೋಗಿ ಇದೀಗ ಜೈಲೂಟಕ್ಕೆ ರೆಡಿಯಾಗಿದೆ.
ವರದಿ: ಪ್ರದೀಪ್ ಕಗ್ಗೆ
ಬೆಂಗಳೂರು, (ಜುಲೈ.23) : ಅಲ್ಲು ಅರ್ಜುನ್ ನಟನೆಯ ತೆಲುಗಿನ ಸಿನಿಮಾ ಪುಷ್ಪಾ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ದೋಚಿಕೊಂಡಿದ್ದು ಗೊತ್ತಿರೋ ವಿಚಾರವೇ. ಆದ್ರೆ, ಸಿನಿಮಾ ಹಿಟ್ ಆಗಿ ಎಷ್ಟು ಜನಪ್ರೀಯತೆ ಗಳಿಸಿತ್ತೋ ಅದೇ ರೀತಿ ಚಿತ್ರದಲ್ಲಿ ರಕ್ತಚಂದನದ ಕಳ್ಳಸಾಗಾಣೆಗೆ ಮಾಡೋ ಹರಸಾಹಸದ ಕಾನ್ಸೆಪ್ಟು ಸಾಕಷ್ಟು ಕಳ್ಳರ ಪಾಲಿಗೆ ವರದಾನವಾಗಿದ್ದಂತೂ ಸತ್ಯ.
ಪುಷ್ಪ ಸಿನಿಮಾದಲ್ಲಿ ಕಾಳಸಂತೆಯಲ್ಲಿ ರಕ್ತಚಂದನವನ್ನ ಅದ್ಯಾವ ರೀತಿ ಕ್ಯಾಂಟರ್ ಒಂದರಲ್ಲಿ ಸಾಗಿಸ್ತಿದ್ರು ಎಂಬ ಕಾನ್ಸೆಪ್ಟಿನಿಂದ ಪ್ರೇರಣೆಗೊಂಡ ಖದೀಮರ ಗುಂಪೊಂದು ಬೊಲೆರೋ ಕಾರನ್ನೇ ಆಲ್ಟರ್ ಮಾಡಿಕೊಂಡು ಸಿಲಿಕಾನ್ ಸಿಟಿಗೆ ಗಾಂಜಾ ಸಪ್ಲೈ ಮಾಡೋಕೆ ಹೋಗಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ.
Mangaluru News: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳೇ ಡ್ರಗ್ ಪೆಡ್ಲರ್ಸ್: 12 ಮಂದಿ ಬಂಧನ
ಅರವಿಂದ, ಪವನ್, ಅಮ್ಜದ್ ಇತಿಯಾರ್, ಪ್ರಭು, ನಜೀಮ್,ಪ್ರಸಾದ್ ಹಾಗೂ ಪತ್ತಿ ಸಾಯಿಚಂದ್ರ ಪ್ರಕಾಶ್ ಬಂಧಿತರು.ಆರೋಪಿಗಳು ಅದ್ಯಾವ ರೀತಿ ಬೊಲೆರೋ ವಾಹನವನ್ನ ಆಲ್ಟ್ರೇಷನ್ ಮಾಡಿಕೊಂಡು ಗಾಂಜಾ ಬ್ಯಾಗನ್ನ ಅಡಗಿಸಿಟ್ಟಿದ್ದಾರೆ ಅನ್ನೋದನ್ನ. ಮಾಮೂಲಿ ಯಾರಾದ್ರೂ ನೋಡಿದ್ರೆ ಖಾಲಿ ಗಾಡಿಯಲ್ಲಿ ಯಾರೋ ಹೋಗ್ತಿದ್ದಾರೆ ಅಂದ್ಕೋಬೇಕು. ಆದ್ರೆ, ಇಲ್ಲಿ ಆಂಧ್ರದ ವಿಶಾಪಟ್ಟಣಂನಿಂದ ಗಾಂಜಾವನ್ನ ಖರೀದಿ ಮಾಡಿ ಬೆಂಗಳೂರಿಗೆ ತಂದು ಗ್ಯಾಂಗ್ ಇದೇ ವಾಹನದಲ್ಲಿ ಮಾರಾಟ ಮಾಡ್ತಿತ್ತು.
ಬೇಗೂರಿನ ದೇವರಚಿಕ್ಕನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಆರೋಪಿಗಳಾದ ಅರವಿಂದ,ಪವನ್ ಹಾಗೂ ಅಮ್ಜದ್ ಆರು ಕೆಜಿಯಷ್ಟು ಗಾಂಜಾವನ್ನ ಆಟೋದಲ್ಲಿ ತಂದು ಮಾರಾಟ ಮಾಡ್ತಿದ್ರು. ಮಾಹಿತಿ ತಿಳಿದದ ಬೇಗೂರು ಪೊಲೀಸ್ರು ಮೂವರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರ ಮಾಹಿತಿಯನ್ವಯ ಫೀಲ್ಡಿಗಿಳಿದ ಪೊಲೀಸರಿಗೆ ಆರೋಪಿಗಳು ಆಲ್ಟ್ರೇಷನ್ ವಾಹನದಲ್ಲಿ ಬೆಂಗಳೂರಿಗೆ ಗಾಂಜಾ ಸಪ್ಲೈ ಮಾಡೋ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು.
ಜುಲೈ 20ನೇ ತಾರೀಕು ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೋಳಗುಡ್ಡೆ ಬಳಿ ಬೊಲೆರೋ ಪಿಕಪ್ ಗಾಡಿಯಲ್ಲಿ ಗಾಂಜಾ ತುಂಬಿಕೊಂಡು ಬಂದಿದ್ದ ಉಳಿದ ಆರೋಪಿಗಳಾದ ಪತ್ತಿ ಸಾಯಿಚಂದ್ರ ಪ್ರಕಾಶ್, ಪ್ರಭು, ನಜೀಮ್ ಹಾಗೂ ಪ್ರಸಾದ್ ನನ್ನ ಬೇಗೂರು ಪೊಲೀಸರ ತಂಡ ಬಂಧಿಸಿದೆ.ಸದ್ಯ ಆರೋಪಿಗಳಿಂದ ಸರಿಸುಮಾರು 1 ಕೋಟಿ ಮೌಲ್ಯದ 175 ಕೆಜಿ ಗಾಂಜಾವನ್ನ ಬೇಗೂರು ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳೆಲ್ಲರೂ ಕ್ರಿಮಿನಲ್ ಬ್ಯಾಗ್ರೌಂಡ್ ನಿಂದಲೇ ಬಂದವ್ರು ಎಂಬ ವಿಚಾರ ಕೂಡ ತನಿಖೆಯ ವೇಳೆ ತಿಳಿದುಬಂದಿದೆ. ಒಟ್ಟಿನಲ್ಲಿ ಸಿನಿಮಾ ನೋಡಿ ಶಾರ್ಟ್ ಟೈಮಲ್ಲಿ ಗಾಂಜಾ ಮಾರಾಟ ಮಾಡಿ ದುಡ್ಡು ಮಾಡಲು ಅಣಿಯಾದವ್ರ ಸದ್ಯ ಜೈಲಲ್ಲಿ ಮುದ್ದೆ ಮುರಿಯೋ ಪರಿಸ್ಥಿತಿ ಎದುರಾಗಿದೆ.ಆಂಧ್ರಪ್ರದೇಶದ ವೈಜಾಕ್ ನಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಆರೋಪಿಗಳು..ಬೆಂಗಳೂರಿನ ಕಾಲೇಜು ಬಳಿ ಹಾಗೂ ಪಬ್, ಕಬ್ಲ್ ಗಳಿಗೆ ಗಾಂಜಾ ವನ್ನು ಮಾರಾಟ ಮಾಡಲಾಗುತ್ತಿತ್ತು..ಇದೀಗ ಆರೋಪಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ...
