ಬ್ಯಾಂಕಿಗೆ ಖೋಟಾ ನೋಟು ಜಮೆ ಮಾಡಿ ಹೊಸ ನೋಟುಗಳಿಗೆ ಮನವಿ ಮಾಡಿದ್ದ ಚಾಲಾಕಿ ಮಹಿಳೆಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.23): ಬ್ಯಾಂಕಿಗೆ ಖೋಟಾ ನೋಟು ಜಮೆ ಮಾಡಿ ಹೊಸ ನೋಟುಗಳಿಗೆ ಮನವಿ ಮಾಡಿದ್ದ ಚಾಲಾಕಿ ಮಹಿಳೆಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರಪ್ಪನಪಾಳ್ಯದ ಶೀಲಾ (36) ಬಂಧಿತ ಆರೋಪಿ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಈಕೆಯಿಂದ .100 ಮುಖ ಬೆಲೆಯ 117 ನೋಟುಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ನೋಟಿನ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಶೀಲಾ ಆ.10ರಂದು ಮಧ್ಯಾಹ್ನ 3.45ರ ಸುಮಾರಿಗೆ ಜಯನಗರ 9ನೇ ಬ್ಲಾಕ್‌ನಲ್ಲಿ ಇರುವ ಕರ್ನಾಟಕ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದಳು. 100 ಮುಖ ಬೆಲೆಯ 117 ನೋಟುಗಳನ್ನು ಜಮೆ ಮಾಡಿ ಹೊಸ ನೋಟು ಕೊಡುವಂತೆ ಮನವಿ ಮಾಡಿದ್ದಳು. ನೋಟುಗಳ ಬಗ್ಗೆ ಅನುಮಾನಗೊಂಡು ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ಆ ನೋಟು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಶೀಲಾ ಬ್ಯಾಂಕ್‌ನಿಂದ ಜಾಗ ಖಾಲಿ ಮಾಡಿದ್ದಳು. ಈ ಸಂಬಂಧ ಬ್ಯಾಂಕ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಹಿಳೆಯ ಚಹರೆ ಗುರುತಿಸಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಶೀಲಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತನಿಖೆಯಿಂದ ಈ ನಕಲಿ ನೋಟುಗಳ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಹರದಲ್ಲಿ ನಕಲಿ ನೋಟು, ಪೊಲೀಸರ ದಾಳಿ, 500 ಮುಖಬೆಲೆಯ 3.23 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ!
ದಾವಣಗೆರೆ: ಮನೆ, ಕೊಟ್ಟಿಗೆ ಮನೆ ಮೇಲೆ ಖೋಟಾ ನೋಟು ಇರುವ ಮಾಹಿತಿ ಮೇರೆ ದಾಳಿ ನಡೆಸಿದ ಪೊಲೀಸರು 500 ರು. ಮುಖಬೆಲೆಯ 3.23 ಲಕ್ಷ ರು. ಮುಖಬೆಲೆಯ 646 ನಕಲಿ ನೋಟುಗಳ ಹರಿಹರ ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಹರಿಹರ ತಾಲೂಕು ಹೊಟ್ಟಿಗೇನಹಳ್ಳಿ ಗ್ರಾಮದ ಕುಬೇರಪ್ಪ ಎಂಬುವರ ಮನೆ ಮತ್ತು ಮನೆ ಮುಂಭಾಗದ ಕೊಟ್ಟಿಗೆ ಮನೆಯ ಮೇಲೆ ಖೋಟಾ ನೋಟು ಇರುವುದಾಗಿ ಖಚಿತ ಮಾ ಹಿತಿ ಆಧರಿಸಿ, ಗ್ರಾಮಾಂತರ ಎಎಸ್ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಯು.ಸತೀಶ ಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
Raichur; 48 ಗಂಟೆಯಲ್ಲಿಯೇ ಮೂವರು ಕಳ್ಳರನ್ನು ಬಂಧಿಸಿದ ಸಿಂಧನೂರು ಪೊಲೀಸ್!
ದಾಳಿ ವೇಳೆ 500 ರು. ಮುಖಬೆಲೆಯ 3.23 ಲಕ್ಷ ರು.ಗಳಷ್ಟು646 ನಕಲಿ ನೋಟು ಜಪ್ತಿ ಮಾಡಿದ್ದಾರೆ. ಈ ನೋಟುಗಳಲ್ಲಿ ಆರ್‌ಬಿಐ ಎಂಬುದಾಗಿ ಗ್ರೀನ್ ಲೈನ್ ಇದ್ದು, ನಿಜವಾದ ನೋಟಿನಲ್ಲಿ ಹೀಗೆ ಇರುವುದಿಲ್ಲ. ನೋಟು ತುಂಬಾ ತೆಳುವಾಗಿದ್ದು, ಅಂಚಿನಲ್ಲಿ ಸ್ಪರ್ಶನ ಅನುಭವವೂ ಇಲ್ಲ. ಖೋಟಾ ನೋಟು ಪತ್ತೆಯಾದ ಸ್ಥಳದಲ್ಲಿ ಕುಬೇರಪ್ಪ ಎಂಬಾತ ಕಳೆದ 4 ತಿಂಗಳಿನಿಂದ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದಾನೆ.
Chitradurga: ಸರ್ಕಾರಿ ಕೆಲಸ ನೇಮಕಕ್ಕೆ ಕ್ರಿಮಿನಲ್ ಕೇಸ್ ಅಡ್ಡಿ, ಯುವತಿ ಆತ್ಮಹತ್ಯೆ
ಹರಿಹರ ಗ್ರಾಮಾಂತರ ಠಾಣೆಯಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕುಬೇರಪ್ಪನ ಪತ್ತೆ ಕಾರ್ಯವು ತನಿಖಾಧಿಕಾರಿ ಸತೀಶ ಕುಮಾರ ನೇತೃತ್ವದಲ್ಲಿ ಸಾಗಿದೆ. ಪಿಎಸ್‌ಐ ಅರವಿಂದ, ಅಬ್ದುಲ್ ಖಾದರ್ ಜಿಲಾನಿ, ಪ್ರೊ.ಪಿಎಸ್‌ಐ ಶ್ರೀಪತಿ ಗಿನ್ನಿ, ಸಿಬ್ಬಂದಿಯಾದ ರಮೇಶ, ಬಾಲರಾಜ, ಶ್ರೀಧರ ಬಣಕಾರ, ಗಂಗಾಧರ, ಇಲಿಯಾಸ್, ನಾಗರಾಜ, ಮುರುಳೀಧರ, ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತಂಡದ ಕಾರ್ಯಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್, ಎಸ್ಪಿ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.
