ಸೋಮವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಸಂಪೂರ್ಣವಾಗಿ ಬಾಗಿಲು ತೆಗೆಯಲು ಕಳ್ಳರು ವಿಫಲರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಹುಬ್ಬಳ್ಳಿ(ಜ.21): ಬೀದರ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಲೂಟಿ ಹಾಗೂ ಮಂಗಳೂರಲ್ಲಿ ಕೋಟೆಕಾರ್ ಬ್ಯಾಂಕ್ ದರೋಡೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಕೆನರಾ ಬ್ಯಾಂಕ್‌ ಲೂಟಿ ಯತ್ನ ನಡೆದಿದೆ. ನಗರದ ಎಪಿ ಎಂಸಿಯಲ್ಲಿನ ಬ್ಯಾಂಕ್‌ ಶಾಖೆಗೆ ನುಗ್ಗಿದ ತಂಡವೊಂದು ಬ್ಯಾಂಕಿನ ಬಾಗಿಲು ಮುರಿಯಲೆತ್ನಿಸಿದೆ.

ಸೋಮವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಸಂಪೂರ್ಣವಾಗಿ ಬಾಗಿಲು ತೆಗೆಯಲು ಕಳ್ಳರು ವಿಫಲರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಮಂಗಳೂರು ಬ್ಯಾಂಕ್‌ ಲೂಟಿ ಮಾಡಿದ್ದು ಧಾರಾವಿ ಗ್ಯಾಂಗ್‌!

ಘಟನೆ ನಡೆದರೂ ಪ್ರಕರಣ ದಾಖಲಿಸದಿರುವ ಬ್ಯಾಂಕ್ ಅಧಿಕಾರಿಯನ್ನು ತರಾಟೆಗೆ ಶಶಿಕುಮಾ‌ರ್ ಅವರು ತೆಗೆದುಕೊಂಡರು. ನಂತರ ಸೋಮವಾರ ಸಂಜೆ ಬ್ಯಾಂಕ್ ಅಧಿಕಾರಿಗಳು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2-3 ದಿನದಲ್ಲಿ ಬೀದರ್‌ ಎಟಿಎಂ ಲೂಟಿಕೋರರ ಬಂಧನ: ಗೃಹ ಸಚಿವ ಡಾ. ಜಿ. ಪರಮೇಶ್ವರ್ 

ಬೆಳಗಾವಿ: ಬೀದರ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ ಹಣ ಲೂಟಿ ಪ್ರಕರಣ ಇನ್ನು ಎರಡು ಮೂರು ದಿನದಲ್ಲಿ ಭೇದಿಸಲಾಗು ವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ನಿದ್ರೆಯಿಂದ ಏಳದ ಸರ್ಕಾರ, ದರೋಡೆ ತೋಟವಾಗಿ ಬದಲಾದ ಸರ್ವಜನಾಂಗದ ಶಾಂತಿಯ ತೋಟ!

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್‌ಎಸ್‌ಬಿಐ ಹಣ ಲೂಟಿ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ಆರೋಪಿಗಳಿದ್ದಾರೆಂಬ ಮಾಹಿತಿ ಇದೆ ಎಂದು ತಿಳಿಸಿದರು. ಇತ್ತೀಚೆಗೆ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಲು ತಂದಿದ್ದ ವಾಹನದ ಮೇಲೆ ದಾಳಿ ನಡೆಸಿದ್ದ ದರೋಡೆಕೋರರು ಒಬ್ಬನನ್ನು ಹತ್ಯೆ ಮಾಡಿ ಮತ್ತೊಬ್ಬನನ್ನು ಗಾಯಗೊಳಿಸಿ ಹಣದೊಂದಿಗೆ ಪರಾರಿಯಾಗಿದ್ದರು. ಈ ದರೋಡೆಕೋರರುಬಿಹಾರಿಗಳು ಎಂದು ಶಂಕಿಸಲಾಗಿದೆ. 

ಇದೇ ವೇಳೆ ಮಂಗಳೂರಿನ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕುರಿತು ಮಾತನಾಡಿದ ಸಚಿವ ಪರಮೇಶ್ವರ್, 'ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ಕು ಕೆಜಿ ಚಿನ್ನಾಭರಣ ಸೇರಿ ₹4 ಕೋಟಿ ಮೌಲ್ಯದೆ ಆಸ್ತಿ ಜಪ್ತಿ ಮಾಡಲಾಗಿದೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಆರೋಪಿಗಳ ಬಂಧನವಾಗಿದೆ. ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಆರು ಜನ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ' ಎಂದು ಸಚಿವರು ತಿಳಿಸಿದರು.