ತಿರುವನಂತಪುರ(ಏ.  11)  ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆ ಕುಥುಪರಂಬರದಿಂದ ಘಟನೆ ವರದಿಯಾಗಿದೆ.

ಇಬ್ಬರು ಮಕ್ಕಳ ತಾಯಿ  ಕೆಎಸ್ ಸ್ವಪ್ನಾ (40)  ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ..ಹಾಗಾಗಿ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ಪ್ರಿಯತಮನೊಂದಿಗೆ ಬೆಡ್ ರೂಂನಲ್ಲಿದ್ದವಳು ಗಂಡನ ಕೈಗೆ ಸಿಕ್ಕಳು!

ಕಳೆದ ವರ್ಷ ಕುಥುಪರಂಬರ ಶಾಖೆಗೆ ಸ್ವಪ್ನ ಬಂದಿದ್ದರು. ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ ಎಂದಿದ್ದ ಸ್ವಪ್ನಾ ಬ್ಯಾಂಕ್ ನಲ್ಲಿಯೇ ನೇಣು ಹಾಕಿಕೊಂಡಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಬಂದ ಸಿಬ್ಬಂದಿ ಸ್ವಪ್ನಾ ಅವರನ್ನು ನೇಣು  ಹಾಕಿಕೊಂಡ ಸ್ಥಿತಿಯಲ್ಲಿ ನೋಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಬೆಳಗ್ಗೆ 8.10ಕ್ಕೆ ಬ್ಯಾಂಕ್ ಗೆ ಬಂದ ಸ್ವಪ್ನಾ  8.17ಕ್ಕೆ ನೇಣು ಹಾಕಿಕೊಂಡಿದ್ದಾರೆ. ಸಿಸಿಟಿವಿಯ ದೃಶ್ಯಾವಳಿ ಎಲ್ಲ ವಿವರ ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.