ಪ್ರತಿ ಖಾತೆಯಲ್ಲಿ ಆಗುವ ಪ್ರತಿ 1 ಲಕ್ಷ ರು. ವಹಿವಾಟಿಗೆ 1000 ರು. ಕಮಿಷನ್‌ ಅನ್ನು ಬಾಡಿಗೆ ನೀಡಿದ ವ್ಯಕ್ತಿಗಳಿಗೆ ಪಾವತಿ ಮಾಡಲಾಗುತ್ತದೆ. ತಮ್ಮ ಖಾತೆಗೆ ಯಾರು ಹಣ ಹಾಕುತ್ತಾರೆ, ಯಾರು ಹಣ ಬಿಡಿಸಿ ಕೊಳ್ಳುತ್ತಾರೆ ಎಂಬ ಯಾವುದೇ ಮಾಹಿತಿಯೂ ಖಾತೆದಾರರಿಗೆ ಇರಲ್ಲ. ಹೀಗಾಗಿ ಕೇಸು ದಾಖಲಾದರೆ ಇವರು ಸಿಕ್ಕಿಬೀಳುತ್ತಾರೆ. 

ಪಣಜಿ(ಜೂ.25):  ಯುವಕರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ಸೈಬರ್‌ ವಂಚಕರು ಜನರನ್ನು ವಂಚಿಸುತ್ತಿರುವ ಪ್ರಕರಣವನ್ನು ಗೋವಾ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೊಂದೆಡೆ ಸುಲಭ ಆದಾಯದ ಆಸೆಗೆ ಬಿದ್ದು ಯುವಕರು ವಂಚನೆಗೆ ಸಿಕ್ಕಿಬೀಳುತ್ತಿದ್ದಾರೆ ಎಂಬ ವಿಷಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: 

ಸೈಬರ್ ವಂಚಕರು ಯಾರದ್ದಾದರೂ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದಾಗ ಅದನ್ನು ಜಮೆ ಮಾಡಲು ಅವರಿಗೆ ಬ್ಯಾಂಕ್ ಖಾತೆ ಬೇಕು. ತಮ್ಮ ಖಾತೆಗೆ ಹಣ ಹಾಕಿಸಿಕೊಂಡ್ರೆ ಸಿಕ್ಕಿ ಬೀಳುತ್ತಾರೆ. ಹೀಗಾಗಿ ತಮ್ಮ ಜಾಲದ ಮೂಲಕ ಅಮಾಯಕ ಯುವಕರನ್ನು ಸಂಪರ್ಕಿಸುವ ವಂಚಕರು, ಅವರಿಗೆ ಹಣದ ಆಸೆ ತೋರಿಸಿ ಖಾತೆ ಬಾಡಿಗೆ ಪಡೆಯುತ್ತಾರೆ. 

ಮನೆಯಲ್ಲೇ ಕುಳಿತು ಆದಾಯ ಗಳಿಸಿ, ಬಣ್ಣದ ಮಾತಿಗೆ ಮರುಳಾಗಿ 20 ಲಕ್ಷ ಕಳೆದಕೊಂಡ ಯುವಕ!

ಇನ್ನೊಂದೆಡೆ ಸೈಬರ್ ವಂಚಕರು ಬೇರೆಯವರಿಗೆ ವಂಚನೆ ಮಾಡಿದ ಹಣವನ್ನು ಹೀಗೆ ಬಾಡಿಗೆ ಪಡೆದ ಖಾತೆಗಳಿಗೆ ಜಮೆ ಮಾಡಿ ತಕ್ಷಣವೇ ಹಣ ಬಿಡಿಸಿಕೊಳ್ಳುತ್ತಾರೆ. ಹೀಗೆ ಪ್ರತಿ ಖಾತೆಯಲ್ಲಿ ಆಗುವ ಪ್ರತಿ 1 ಲಕ್ಷ ರು. ವಹಿವಾಟಿಗೆ 1000 ರು. ಕಮಿಷನ್‌ ಅನ್ನು ಬಾಡಿಗೆ ನೀಡಿದ ವ್ಯಕ್ತಿಗಳಿಗೆ ಪಾವತಿ ಮಾಡಲಾಗುತ್ತದೆ. ತಮ್ಮ ಖಾತೆಗೆ ಯಾರು ಹಣ ಹಾಕುತ್ತಾರೆ, ಯಾರು ಹಣ ಬಿಡಿಸಿ ಕೊಳ್ಳುತ್ತಾರೆ ಎಂಬ ಯಾವುದೇ ಮಾಹಿತಿಯೂ ಖಾತೆದಾರರಿಗೆ ಇರಲ್ಲ. ಹೀಗಾಗಿ ಕೇಸು ದಾಖಲಾದರೆ ಇವರು ಸಿಕ್ಕಿಬೀಳುತ್ತಾರೆ.