ಬೆಂಗಳೂರು(ಫೆ. 04) ಹೆತ್ತ ತಾಯಿಯನ್ನೇ ಕೊಂದ ಮಗಳು ಅಪರಾಧ ಸುದ್ದಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ.  ತಾನು ಮೈತುಂಬಾ ಸಾಲ ಮಾಡಿಕೊಂಡು ತಾಯಿಯನ್ನು ಕೊಂದಿದ್ದಳು ಎನ್ನಲಾಗಿತ್ತು. ಆದರೆ ಈ ಕತೆಗೆ ಒಬ್ಬ ಪ್ರಿಯಕರ ಎಂಟ್ರಿ ಕೊಟ್ಟಿದ್ದಾನೆ.

ಪ್ರಿಯಕರನ ಜೊತೆಗಿನ ಲವ್ವಿಡವ್ವಿಗೆ ತಾಯಿಯನ್ನೇ ಹತ್ಯೆ ಮಾಡಿದ್ದಾಳೆ. ತಾಯಿ, ತಮ್ಮನ ಹತ್ಯೆಗೆ ಮೊದಲೇ ಪ್ಲ್ಯಾನ್ ಮಾಡಿದ್ದ ಪಾಪಿ ಮಗಳ ಮರ್ಮ ಅರಿಯದೇ ತಾಯಿ ಕೊಲೆಯಾಗಿ ಹೋಗಿದ್ದಾರೆ.

ಕುಟುಂಬದವರಿಗೆ ಹೈದರಾಬಾದ್  ಟ್ರಿಪ್ ಹೋಗೋಣ ಎಂದಿದ್ದ ಮಗಳು ಅಮೃತಾ 15 ನೇ ತಾರೀಕಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಳು.  ಆದರೆ ಮೂರು ಜನ ಇದ್ದ ಕುಟುಂಬದಲ್ಲಿ ಟಿಕೆಟ್ ಬುಕ್ ಮಾಡಿದ್ದು ಕೇವಲ ಎರಡು ಟಿಕೆಟ್!

ಯುವಕನ ಜೊತೆಯೇ ತೆರಳಿ ಹೈದರಾಬಾದ್ ಟಿಕೆಟ್ ಬುಕ್ ಮಾಡಿದ್ದ ಯುವತಿ ಮೂರು ಜನ ಟ್ರಿಪ್ ಗೆ ಹೋಗುತ್ತಿರುವುದಾಗಿ ಹೇಳಿದ್ದಳು.  ಮಗಳ ಮರ್ಡರ್ ಮರ್ಮ ಅರಿಯದ ತಾಯಿ ನಿರ್ಮಲ ಹಾಗೂ ಸಹೋದರ ಹರೀಶ ಪ್ರಯಾಣಕ್ಕೆ ತಯಾರಿ ಮಾಡಿಕೊಂಡಿದ್ದರು. 

ಸಾಲ ಮಾಡಿ ತಪ್ಪಿಸಿಕೊಳ್ಳಲು ತಾಯಿಗೇ ಚಾಕು ಹಾಕಿದ ಮಗಳು!

ಪ್ರಯಾಣದ ಹಿಂದಿನ ರಾತ್ರಿ ತಾಯಿ, ಸಹೋದರನಿಗೆ ಮುಹೂರ್ತ ಇಟ್ಟ ಅಮೃತ ತಾಯಿ ಹತ್ಯೆ ಮಾಡಿ ತಮ್ಮನ ಕೊಲೆ ಮಾಡಲು ಹೋದಾಗ ಆತ ನಿದ್ರೆಯಿಂದ ಎಚ್ಚೆತ್ತುಕೊಂಡಿದ್ದಾನೆ.  ಈ ವೇಳೆ ಆತನ ಕತ್ತು ಹಾಗೂ ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾಳೆ. ಈ ವೇಳೆ ಮನೆಯ ಹತ್ತಿರವೇ ಪ್ರಿಯತಮ ನಿಂತಿದ್ದ. ನಂತರ ಬೈಕ್ ನಲ್ಲಿ ಬಂದು ಕಾದು ಕುಳಿತಿದ್ದ ಯುವಕನ ಜೊತೆ ಪರಾರಿಯಾಗಿದ್ದಾಳೆ.

ಅಮೃತ ಪರಾರಿ ಬಳಿಕ ಮೊಬೈಲ್ ವಿವರ ಪತ್ತೆ ಮಾಡಿದ ಪೊಲೀಸರು ಯಾವುದೋ ಒಂದು ನಂಬರ್‌ ಗೆ ಪದೇ ಪದೇ ಕಾಲ್ ಹೋಗಿರುವುದನ್ನು ಪತ್ತೆ ಮಾಡಿದ್ದಾರೆ. ಪ್ರತಿನಿತ್ಯ ಪ್ರಿಯಕರನ ಜೊತೆ ಮಾತನಾಡುತಿದ್ದ ಅಮೃತ ವಿಚಾರ ಮೊದಲೇ ತಿಳಿದಿದ್ದ ತಾಯಿ ನಿರ್ಮಲ  ಆತನ ಸಹವಾಸ ಬಿಡುವಂತೆ ಹೇಳಿದ್ದರು.

ಪ್ರೀತಿಗೆ ಒಲ್ಲೆ ಎಂದ ತಾಯಿಯನ್ನೇ ಕೊಂದವಳು ಅನುಮಾನ ಬಾರದೇ ಇರಲಿ ಎಂಬುದಾಗಿ ತಮ್ಮನ ಮೇಲೂ ಹಲ್ಲೆಗೈದು ಎಸ್ಕೇಪ್ ಆಗಿದ್ದಾಳೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಮೃತಾಳ ಬಾಯ್ ಫ್ರೆಂಡ್ ಬೈಕ್ ಪತ್ತೆಯಾಗಿದೆ.  ಇದೀಗ ಪೊಲೀಸರು ಕೊಲೆಗೆ ಪ್ರೇರಣೆ ನೀಡಿದ ಪ್ರಿಯಕರನ ಬೆನ್ನು ಬಿದ್ದಿದ್ದಾರೆ.

"