ಎಗ್‌ರೈಸ್, ಕಬಾಬ್ ಕೊಟ್ಟಿಲ್ಲವೆಂದು ಅಂಗಡಿ ಮಾಲೀಕನ ಕತ್ತು ಸೀಳಿದ ಅಮೀನ್‌ಗಡ ಮುಸ್ತಾಕ್
ಎಗ್‌ರೈಸ್ ಹಾಗೂ ಚಿಕನ್ ಕಬಾಬ್ ಇಲ್ಲವೆಂದ ಅಂಗಡಿ ಮಾಲೀಕನನ್ನು ಯುವಕನೊಬ್ಬ ಚಾಕುವಿನಿಂದ ಹತ್ಯೆಗೈದಿರುವ ಘಟನೆ ಅಮೀನಗಡ ಪಟ್ಟಣದಲ್ಲಿ ನಡೆದಿದೆ.
ಬಾಗಲಕೋಟೆ (ಸೆ.18): ಎಗ್‌ರೈಸ್ ಹಾಗೂ ಚಿಕನ್ ಕಬಾಬ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಯುವಕನೊಬ್ಬ ಚಾಕುವಿನಿಂದ ಹತ್ಯೆಗೈದಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಗೈಬುಸಾಬ್ ಮುಲ್ಲಾ (34) ಹತ್ಯೆಯಾದ ದುರ್ದೈವಿಯಾಗಿದ್ದು, ಮುಸ್ತಾಕ್ ಜಂಗಿ (20) ಕೊಲೆ ಮಾಡಿದ ಆರೋಪಿಯಾಗಿದ್ದಾರೆ. ಈ ಘಟನೆಯಲ್ಲಿ ಚಾಕುವಿನಿಂದ ಹತ್ಯೆಗೈದು ಆರೋಪಿ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಜನರಿಗೆ ಕುಡಿಯೋದಕ್ಕೂ ಕಾವೇರಿ ನೀರು ಕೊಡಲಾಗಲ್ಲ: ಗೃಹ ಸಚಿವ ಪರಮೇಶ್ವರ್ ಮಾಹಿತಿ
ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಸ್ ನಿಲ್ದಾಣದ ಬಳಿ ಎಗ್‌ರೈಸ್ ಅಂಗಡಿ ಇಟ್ಟುಕೊಂಡಿದ್ದ ಗೈಬುಸಾಬ್ ಬಳಿ ಬಂದ ಮುಸ್ತಾಕ್ ಎಗ್‌ರೈಸ್ ಹಾಗೂ ಕಬಾಬ್ ಕೇಳಿದ್ದಾನೆ. ಈಗಾಗಲೇ ಸಮಯ ತಡವಾಗಿದ್ದರಿಂದ ಎಗ್‌ರೈಸ್ ಹಾಗೂ ಕಬಾಬ್ ಎಲ್ಲವೂ ಖಾಲಿಯಾಗಿದೆ ಎಂದು ಅಂಗಡಿ ಮಾಲೀಕ ಹೇಳಿದ್ದಾನೆ. ಅಂಗಡಿಯಲ್ಲಿ ಎಗ್‌ರೈಸ್ ಇಲ್ಲವೆಂದು ಹೇಳಿದ್ದಕ್ಕೆ, ಅಲ್ಲಿಂದ ಹೋಗಿದ್ದ ಮುಸ್ತಾಕ್ ಜಂಗಿ ಪುನಃ ಅಂಗಡಿ ಬಳಿಗೆ ವಾಪಸ್ ಬಂದು ಚಾಕುವಿನಿಂದ ಕುತ್ತಿಗೆಗೆ ತಿವಿದು ಕೊಲೆಗೈದಿದ್ದಾನೆ.
ಆರೋಪಿ ಮುಸ್ತಾಕ್ ಈ ಹಿಂದೆಯೂ ಹಲವರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದನು. ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗುತ್ತಿದೆ, ಈ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಮೀನಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಕೊಲೆ ಮಾಡಿದ ಆರೋಪಿ ಮುಸ್ತಾಕ್ ವಿರುದ್ಧ ಕ್ರಮವಾಗಬೇಕು ಅಂತಾ ಕುಟುಂಬಸ್ಥರು, ಎಸ್‌ಡಿಪಿಐ ಸಂಘಟನೆಯ ಸದಸ್ಯರು ಆಗ್ರಹ ಮಾಡಿದ್ದಾರೆ.