ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ!
* ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ
* ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಯುವಕರು
* ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಲಾಡ್ಜ್‌ನಲ್ಲಿ ಆತ್ಮಹತ್ಯೆ
ಶಿವಮೊಗ್ಗ, (ಸೆ.26): ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ (Shivanogga) ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ (suicide) ಶರಣಾದ ಸಂತೋಷ್ ಮತ್ತು ಹನುಮಂತ ಇಬ್ಬರು ಶುಕ್ರವಾರ ತಡರಾತ್ರಿ ಲಾಡ್ಜ್‌ಗೆ ಬಂದು ಡಬ್ಬಲ್ ಬೆಡ್ ರೂಂ ಪಡೆದಿದ್ದರು.
ಬೆಟ್ಟದಿಂದ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ : 3 ದಿನದ ಬಳಿಕ ಪತ್ತೆ
ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದುಕೊಂಡು ರೂಮ್ ಸೇರಿಕೊಂಡಿದ್ದರು. ಇಂದು (ಸೆ.26) ಬೆಳಗ್ಗೆ ಸಹ ರೂಮಿನ ಬಾಗಿಲು ಸಾಕಷ್ಟು ಬಾರಿ ಬಡಿದಾಗಲೂ ತೆರೆಯಲಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.