ತುಮಕೂರು(ಜ.12): ಗುಂಡು ಹಾರಿಸಿ ಪತಿಯೇ ತನ್ನ ಪತ್ನಿಯನ್ನು ಕೊಲೆಗೈದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಡಿ.ಕೊರಟಗೆರೆಯಲ್ಲಿ ಘಟನೆ ನಡೆದಿದೆ.

ಶಾರದ (28) ಕೊಲೆಯಾದ ಮಹಿಳೆ. ಸ್ನೇಹಿತನ ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಪತ್ನಿಯನ್ನು ಕೃಷ್ಣಪ್ಪ(35) ಎಂಬಾತ ಕೊಲೆ ಮಾಡಿದ್ದಾನೆ. ಬಂದೂಕಿನಿಂದ ಗುಂಡು ಹಾರಿಸೋದು ತೋರಿಸುತ್ತೇನೆಂದು ಹೇಳಿ ಕೃತ್ಯ ನಡೆಸಿದ್ದಾನೆ ಪತಿ.

ಕಲ್ಲಿನಿಂದ ಜಜ್ಜಿ ತಂದೆಯನ್ನು ಕೊಂದೇ ಬಿಟ್ಟ ಪಾಪಿ ಮಗ

ಬೇಟೆಗೆಂದು ಸ್ನೇಹಿತನ ಬಂದೂಕು ತಂದು ಮನೆಯಲ್ಲಿಟ್ಟಿದ್ದ ಕೃಷ್ಣಪ್ಪ ಶಾರದಾ ತಲೆಗೆ ಗುಂಡು ಹಾರಿಸಿದ್ದಾನೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.