ಯುವತಿಯ ವಿಡಿಯೋ ಮಾಡಿ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಮೊಬೈಲ್‌ಗಳಿಗೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದ ಆರೋಪಿ| ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯ ತಾಯಿ| 

ಹುಬ್ಬಳ್ಳಿ(ಮಾ.25): ಆಟೋ ಚಾಲಕನೊಬ್ಬ ಯುವತಿಗೆ ಜೀವ ಬೆದರಿಕೆಯೊಡ್ಡಿ ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ವೈರಲ್‌ ಮಾಡುವುದಾಗಿ ಬ್ಲಾಕ್‌ಮೇಲ್‌ ಮಾಡುತ್ತ ಚಿನ್ನಾಭರಣ ಕಿತ್ತುಕೊಂಡಿದ್ದಲ್ಲದೆ, 25 ಲಕ್ಷ ಹಣ ಕೊಡುವಂತೆ ಹೆದರಿಸಿದ ಪ್ರಕರಣ ಇಲ್ಲಿನ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಹಳೆ ಹುಬ್ಬಳ್ಳಿ ರಾಜೇಂದ್ರನಗರದ ನಿವಾಸಿ ಅನೀಲರಾಜ ಡೊಂಗರೆ ಆರೋಪಿ. ಆಟೋ ಚಾಲಕನಾದ ಈತ ಯುವತಿಯ ತಾಯಿಯನ್ನು ಅವರ ಕಚೇರಿಗೆ ಪ್ರತಿದಿನ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದ. ಕಳೆದ ಜ. 21ರಂದು ಬೆಳಗ್ಗೆ ಅವರು ಕೆಲಸಕ್ಕೆ ಹೋದಾಗ ಮನೆಗೆ ಬಂದ ಆರೋಪಿ ನಿಮ್ಮ ತಾಯಿ ಅಕ್ಕಿ ಪ್ಯಾಕೆಟ್‌ ಕೊಟ್ಟಿದ್ದಾರೆ. ಬಾಗಿಲು ತೆಗಿ ಎಂದು ಹೇಳಿ ಯುವತಿಯಿಂದ ಬಾಗಿಲು ತೆಗೆಸಿ ಮನೆಯೊಳಗೆ ಬಂದಿದ್ದಾನೆ. ಬಳಿಕ ನೀರು ಕೊಡುವಂತೆ ಕೇಳಿದ್ದಾನೆ. ಯುವತಿ ನೀರು ತರುವ ವೇಳೆ ಬಟ್ಟೆ ತೆಗೆಯುವಂತೆ ಹೇಳಿದ್ದಾನೆ. ಯುವತಿ ನಿರಾಕರಿಸಿದಾಗ ಬೆಲ್ಟ್‌ನಿಂದ ಹೊಡೆದಿದ್ದಲ್ಲದೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.

ಪ್ರೀತಿ ತಿರಸ್ಕರಿಸಿದ ಯುವಕ: ವಿಡಿಯೋ ಬಹಿರಂಗ ಮಾಡೋದಾಗಿ ಯುವತಿಯಿಂದ ಬ್ಲಾಕ್‌ಮೇಲ್‌..!

ಬಳಿಕ ಯುವತಿಯ ವಿಡಿಯೋ ಮಾಡಿಕೊಂಡು ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಮೊಬೈಲ್‌ಗಳಿಗೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಹೀಗೆ 4 ತೊಲೆ ಚಿನ್ನದ ಸರವನ್ನು ಪಡೆದ ಆರೋಪಿ ಯುವತಿಯ ತಾಯಿಗೆ 25 ಲಕ್ಷ ನೀಡಬೇಕು, ತಾನು ಹೇಳಿದವರ ಜತೆ ಕಳಿಸಬೇಕು ಎಂದು ಬ್ಲಾಕ್‌ಮೇಲ್‌ ಮಾಡಿದ್ದಲ್ಲದೆ ವಿಡಿಯೋವನ್ನು ನನ್ನ ಹಾಗೂ ಮಗಳ ಮೊಬೈಲ್‌ಗೆ ಕಳಿಸಿದ್ದಾನೆ ಎಂದು ಯುವತಿಯ ತಾಯಿ ಮಂಗಳವಾರ ದೂರು ದಾಖಲಿಸಿದ್ದಾರೆ.