Asianet Suvarna News Asianet Suvarna News

ಉತ್ತರ ಕನ್ನಡ: ಅಕ್ರಮವಾಗಿ ಜಾನುವಾರು ಸಾಗಾಟ ಯತ್ನ; ಆರೋಪಿ ಬಂಧನ

ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲು ಯತ್ನಿಸಿದ ಘಟನೆ ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಬಳಿ ನಡೆದಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

attempt to smuggle cattle illegally in haliyala uttara kannada district accused arrested rav
Author
First Published Jun 16, 2024, 7:47 PM IST

ಕಾರವಾರ, ಉತ್ತರಕನ್ನಡ (ಜೂ.16): ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲು ಯತ್ನಿಸಿದ ಘಟನೆ ಹಳಿಯಾಳ ರಸ್ತೆಯ 3 ನಂಬರ್ ಗೇಟ್ ಬಳಿ ನಡೆದಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಅಡಿಕೆ ಹೊಸೂರು ಗ್ರಾಮದ ಶರೀಫ್ ಸಿದ್ಧಿ, ಬಂಧಿತ ಆರೋಪಿ.ಕೆಎ-31- 3994 ಸಂಖ್ಯೆಯ ಟಾಟಾ ಎಸಿ ವಾಹನದಲ್ಲಿ ಹಳಿಯಾಳ ತಾಲೂಕಿನ ಹೊಸೂರು ಗ್ರಾಮದಿಂದ  ಅಕ್ರಮವಾಗಿ ಎರಡು ಜಾನುವಾರುಗಳನ್ನು ದಾಂಡೇಲಿಗೆ ಸಾಗಾಟ ಮಾಡಲು ಯತ್ನಿಸಿದ್ದ ಆರೋಪಿ. ಈ ವೇಳೆ 3 ನಂ‌ ಗೇಟ್ ಹತ್ತಿರ ಬರುತ್ತಿದ್ದಂತೆ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.

ಚಕ್ಕಡಿ ಸಮೇತ ಕಟ್ಟಗಿ ದ್ಯಾಮವ್ವನ ಮೂರ್ತಿ ತಂದಿಟ್ಟ ಕಿಡಿಗೇಡಿಗಳು; ಬೆಚ್ಚಿಬಿದ್ದ ಗ್ರಾಮಸ್ಥರು!

ಘಟನೆ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios