ಇಲ್ಲಿನ ಅನಗಳ್ಳಿ ಗ್ರಾಮದ ನಂದಿಕೇಶ್ವರ ದೇವಾಲಯದ ಬಳಿ ಸ್ಕೂಟರಿನಲ್ಲಿ ಗೋಮಾಂಸವನ್ನು ಸಾಗಿಸುವುದನ್ನು ಕುಂದಾಪುರ ಪೊಲೀಸರು ತಡೆದು ಜಪ್ತಿ ಮಾಡಿದ್ದಾರೆ.

ಕುಂದಾಪುರ (ಅ.8): ಇಲ್ಲಿನ ಅನಗಳ್ಳಿ ಗ್ರಾಮದ ನಂದಿಕೇಶ್ವರ ದೇವಾಲಯದ ಬಳಿ ಸ್ಕೂಟರಿನಲ್ಲಿ ಗೋಮಾಂಸವನ್ನು ಸಾಗಿಸುವುದನ್ನು ಕುಂದಾಪುರ ಪೊಲೀಸರು ತಡೆದು ಜಪ್ತಿ ಮಾಡಿದ್ದಾರೆ.

ಶನಿವಾರ 12.30 ಗಂಟೆ ಸಮಯಕ್ಕೆ ಕುಂದಾಪುರ ಎಸೈ ಪ್ರಸಾದ್ ಕುಮಾರ ಕೆ. ಮತ್ತು ಸಿಬ್ಬಂದಿ ದೇವಸ್ಥಾನದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಸ್ಕೂಟರ್‌ನಲ್ಲಿ ಗೋಮಾಂಸ ತಂದು ಮಾರಾಟ ಮಾಡಲು ಯತ್ನಿಸಿದ್ದಾನೆ. ಆದರೆ ಪೊಲೀಸರನ್ನು ಕಂಡು ದುಷ್ಕರ್ಮಿ ಸ್ಕೂಟರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. 

ಗೋಮಾಂಸ ಹಿಡಿದವರೇ ಅರೆಸ್ಟ್.. ಶ್ರೀರಾಮಸೇನೆಯಿಂದ ಪ್ರೊಟೆಸ್ಟ್: ಅಕ್ರಮ ಸಾಗಾಟ ತಡೆದಿದ್ದೇ ತಪ್ಪಾ..?

ಪೊಲೀಸರು ಸ್ಕೂಟರನ್ನು ಪರಿಶೀಲಿಸಿದಾಗ, ಸೀಟ್‌ ಬಾಕ್ಸ್‌ ನಲ್ಲಿ 4 ಪ್ಲಾಸ್ಟಿಕ್‌ ಚೀಲಗಳಲ್ಲಿ ಗೋಮಾಂಸ ಕಟ್ಟಿರುವುದು ಕಂಡು ಬಂದಿದೆ. ಆರೋಪಿಗಾಗಿ ಅಕ್ಕಪಕ್ಕ ಹುಡುಕಿದಾಗ ಅನತಿ ದೂರದಲ್ಲಿ ಮನೆಯೊಂದರ ಪಕ್ಕ ಇನ್ನೂ 2 ಪ್ಲಾಸ್ಟಿಕ್‌ ಚೀಲಗಳಲ್ಲಿಯೂ ಗೋಮಾಂಸ ಪತ್ತೆಯಾಗಿದೆ.

ಪರಾರಿಯಾಗಿರುವ ಆರೋಪಿ ಗೋಕಳ್ಳನಾಗಿದ್ದು, ಗೋವನ್ನು ಕಳವು ಮಾಡಿ ತಂದು ವಧೆ ಮಾಡಿ ಬಳಿಕ 10 ಕೆಜಿ 2000 ರು. ಮೌಲ್ಯದ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದನೆಂದು ತಿಳಿದುಬಂದಿದೆ. ಸದ್ಯ ಘಟನೆ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರದಿಂದ ಬೆಂಗಳೂರಿಗೆ ಅಕ್ರಮ ಗೋಮಾಂಸ ಸಾಗಣೆ, ಕಾರಿಗೆ ಬೆಂಕಿ, ಶ್ರೀರಾಮ ಸೇನೆ ಕಾರ್ಯಕರ್ತರು ಅರೆಸ್ಟ್