ಬೆಂಗಳೂರು(ಡಿ.09): ಟರ್ಕಿ ದೇಶದ ನಿಷೇಧಿತ ಕೋಟ್ಯಂತರ ಮೌಲ್ಯದ ನೋಟುಗಳ ಚಲಾವಣೆಗೆ ಯತ್ನಿಸಿದ್ದ ಇಬ್ಬರು ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸತ್ಯವೇಲು ಹಾಗೂ ಧರ್ಮಪುರಿಯ ಶರವಣ ಬಂಧಿತರಾಗಿದ್ದು, ಆರೋಪಿಗಳಿಂದ 4.5 ಕೋಟಿ ಮೌಲ್ಯದ 5 ಲಕ್ಷ ಮುಖ ಬೆಲೆಯ 97 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ವೇಲಂಕಣ್ಣಿ ಸರ್ಕಲ್‌ಬಳಿ ಸೋಮವಾರ ಮಧ್ಯಾಹ್ನ ಆರೋಪಿಗಳು ಟರ್ಕಿ ನೋಟು ಚಲಾವಣೆಗೆ ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮದುವೆಗಳೇ ಖದೀಮರ ಟಾರ್ಗೆಟ್‌: ಸ್ವಲ್ಪ ಯಾಮಾರಿದ್ರು ಚಿನ್ನದ ಸರ ಕಿತ್ತು ಪರಾರಿ...!

ತಮಿಳುನಾಡಿನಿಂದ ಬೆಂಗಳೂರಿಗೆ ಪಯಣಿಸುವ ವೇಳೆ ಭಾನುವಾರ ಪ್ರಯಾಣಿಕರೊಬ್ಬರಿಂದ ಟರ್ಕಿ ನೋಟುಗಳನ್ನು ಕದ್ದಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ಅನುಮಾನವಿದ್ದು, ತನಿಖೆ ನಡೆಸಲಾಗುತ್ತಿದೆ. ಜೇಬುಗಳ್ಳತನ ಸಂಬಂಧ ಯಾವುದಾರೂ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಆರೋಪಿಗಳು ಸುಳ್ಳು ಹೇಳುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.