ಕೌಟುಂಬಿಕ ಕಲಹ: ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಹಲ್ಲೆ
ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ. ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ರಾಕ್ಷಸಿ ಕೃತ್ಯ ಎಸಗಿದ್ದು, ಗಾಯಾಳು ತಾಯಿ, ಮಗುವನ್ನ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗದಗ (ನ.18): ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ. ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ರಾಕ್ಷಸಿ ಕೃತ್ಯ ಎಸಗಿದ್ದು, ಗಾಯಾಳು ತಾಯಿ, ಮಗುವನ್ನ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಾಕು ಇರಿದ ಮುರಳಿ ಪೂಜಾರ್ (32) ಎಂಬಾತನನ್ನ ಮರಕ್ಕೆ ಕಟ್ಟಿ ಹಾಕಿದ್ದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ. ಗೋವಾದಲ್ಲಿ ಕೆಲಸ ಮಾಡ್ತಿದ್ದ ಮುರುಳಿ ಅಲ್ಲಿ ಪತ್ನಿಯೊಂದಿಗೆ ಕಿರಿಕ್ ಮಾಡ್ಕೊಂಡಿದ್ದ. ಹೀಗಾಗಿ ಪತ್ನಿಯನ್ನ ಬಿಟ್ಟು ಮಗುವಿನೊಂದಿಗೆ ಡೋಣಿ ತಾಂಡಾದಲ್ಲಿನ ತವರು ಮನೆಗೆ ಸಕ್ಕುಬಾಯಿ ಬಂದಿದ್ರು. ರಾಜಿ ಪಂಚಾಯ್ತಿ ಬಳಿಕ ಮುರಳಿ ಹಾಗೂ ಸಕ್ಕುಬಾಯಿ ಅವರನ್ನ ಒಂದು ಮಾಡೋದಕ್ಕೆ ಹಿರಿಯರು ಮುಂದಾಗಿದ್ರು. ನಿನ್ನೆಯಷ್ಟೆ ಹಿರಿಯರು ಸೇರಿ ಮಾತುಕಥೆ ನಡೆಸಿದ್ರು.
ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ
ಬೆಳಗ್ಗೆ ಅಳಿಯನೊಂದಿಗೆ ಗೋವಾಕ್ಕೆ ಕಳಿಸೋದಕ್ಕೆ ನಿರ್ಧಾರವನ್ನೂ ಮಾಡ್ಲಾಗಿತ್ತು. ಆದ್ರೆ ಏಕಾ ಏಕಿ ಮಧ್ಯರಾತ್ರಿ ಬಂದಿದ್ದ ಕಳಿಯ ಸಕ್ಕುಬಾಯಿ, ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದ್ದು, ಪ್ರಾಣಾಪಾಯ ಇಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಚಾಕು ಇರಿದ ಮುರಳಿಯನ್ನ ಕೂಡಿ ಹಾಕಿದ್ದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತಂದೆಯಿಂದಲೇ ಮಗನ ಮೇಲೆ ಮಾರಣಾಂತಿಕ ಹಲ್ಲೆ: ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿ ತಂದೆಯೇ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ರಾತ್ರಿ ನಡೆದಿದೆ. ಗ್ರಾಮದ ನಾಗಪ್ಪ ಶಿವಬಸಪ್ಪ ಹಾದಿಮನಿ ತನ್ನ ಪುತ್ರ ಅಣ್ಣಪ್ಪನ (18) ಮೇಲೆ ಕ್ಷುಲ್ಲಕ ಕಾರಣಕ್ಕೆ ಕೊಡಲಿಯಿಂದ ಹಲ್ಲೆ ಮಾಡಿದ್ದು, ಮಾರಣಾಂತಿಕವಾಗಿ ಗಾಯಗೊಂಡಿರುವ ಆತನನ್ನು ಹುಬ್ಬಳ್ಳಿ ಕಿಮ್ಸ್‌ಗೆ ಸೇರಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಶಿವಬಸಪ್ಪ ಗ್ರಾಮದಲ್ಲಿ ಇನ್ನೊಬ್ಬರ ಜಮೀನು ಲಾವಣಿ ಪಡೆದು 18 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದರು. ಸಮಪಾಲಿನ ಕರಾರು ಆಗಿತ್ತು. ಜೋಳ ಮಾರಲಾಗಿದ್ದು, ಅದರ ದುಡ್ಡನ್ನು ನೀಡಿರಲಿಲ್ಲ ಎನ್ನಲಾಗಿದೆ. ಈ ಕುರಿತು ಪ್ರಶ್ನಿಸಲು ತಂದೆ ಅವರ ಮನೆಗೆ ತೆರಳಿದ್ದ. ಈ ವಿಷಯ ಕುರಿತಂತೆ ಬುಧವಾರ ಸಂಜೆ ತಂದೆ ಮಗನ ನಡುವೆ ತೀವ್ರ ಮಾತಿನ ಚಕಮಕಿ ಆಗಿತ್ತು. ಆ ಸಂದರ್ಭದಲ್ಲಿ ಅಣ್ಣಪ್ಪನ ತಾಯಿ ಬಂದು ಸಮಧಾನ ಪಡಿಸಿ ಮುಂಜಾನೆ ನೋಡೋಣ ಎಂದು ತಿಳಿಸಿದ್ದಾಳೆ. ಆದರೆ ರಾತ್ರಿ 10.30 ರ ಹೊತ್ತಿಗೆ ಅಣ್ಣಪ್ಪ ಜೋರಾಗಿ ಕಿರುಚಿದ್ದು ಕೇಳಿ ತಾಯಿ ಓಡಿ ಬಂದು ನೋಡಿದ್ದಾಳೆ.
Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್
ಆತನ ಕತ್ತಿನಿಂದ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿತ್ತು. ಆತನ ತಂದೆಯೇ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ‘ನನಗೇ ಗೊಂಜಾಳದ ಚೀಟಿ ಲೆಕ್ಕ ಕೇಳ್ತಾನ್ ಅಂವ’ ಎಂದು ಸಿಟ್ಟಿನಿಂದ ಅವಾಚ್ಯ ಶಬ್ದಗಳಿಂದ ಬೈದು, ಶಿವಬಸಪ್ಪ ಕುದಿಯುತ್ತಿದ್ದ. ಬಿದ್ದು ಒದ್ದಾಡುತ್ತಿದ್ದ ಅಣ್ಣಪ್ಪನನ್ನು ವಾಹನವೊಂದರಲ್ಲಿ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಸೇರಿಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.