ರೈಲಿನಲ್ಲಿ ಸೀಟ್ ವಿಚಾರಕ್ಕೆ ಗಲಾಟೆ: ಆಂಧ್ರದಲ್ಲಿ ಕನ್ನಡಿಗರ ಮೇಲೆ ಮನಬಂದಂತೆ ಹಲ್ಲೆ

ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮೈಸೂರಿನ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಮೈಸೂರಿನಿಂದ 220 ಮಂದಿ ತಿರುಪತಿಗೆ ಪ್ರವಾಸಕ್ಕೆಂದು ತೆರಳಿದ್ದರು. ಸೀಟ್ ಮೇಲಿಟ್ಟಿದ್ದ ಲ್ಯಾಪ್‌ಟಾಪ್ ಮೇಲೆ ಕುಳಿತಿದ್ದೀರಾ ಎಂದು  ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. 

Assault on Kannadigas at Train in Andhra Pradesh grg

ಪಾಕಾಲಂ(ಜು.29):  ರೈಲಿನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿ ಕರ್ನಾಟಕದ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ ಘಟನೆ ಆಂಧ್ರಪ್ರದೇಶದ ಪಾಕಾಲಂ ನಿಲ್ದಾಣದಲ್ಲಿ ನಡೆದಿದೆ. 

ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮೈಸೂರಿನ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಮೈಸೂರಿನಿಂದ 220 ಮಂದಿ ತಿರುಪತಿಗೆ ಪ್ರವಾಸಕ್ಕೆಂದು ತೆರಳಿದ್ದರು. ಸೀಟ್ ಮೇಲಿಟ್ಟಿದ್ದ ಲ್ಯಾಪ್‌ಟಾಪ್ ಮೇಲೆ ಕುಳಿತಿದ್ದೀರಾ ಎಂದು  ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಸ್ಥಳೀಯ ಜನರನ್ನು ಕರೆಸಿ ಹಲ್ಲೆ ಮಾಡಿದ್ದಾರೆ ಅಂತ ತಿಳಿದು ಬಂದಿದೆ. 

ಮಗನ ಬರ್ತ್‌ಡೇ ಸಂಭ್ರಮದಲ್ಲಿದ್ದ ಮನೆಯನ್ನು ಸೂತಕದ ಮನೆ ಮಾಡಿದ್ರಾ ಕಾಂಗ್ರೆಸ್ ಕಾರ್ಯಕರ್ತರು..?

ಸ್ಥಳೀಯ ಪೊಲೀಸರನ್ನು ಕರೆದರೂ ಸಹಾಯಕ್ಕೆ ಬರಲಿಲ್ಲ. ಪೊಲೀಸರಿಗೆ ನಾವು ದೂರು ಕೊಟ್ಟರು ನಮ್ಮನ್ನೇ ಅಪರಾಧಿಗಳಂತೆ ಪ್ರಶ್ನೆ ಮಾಡಿದ್ದಾರೆ ಅಂತ ಹಲ್ಲೆಗೊಳಗಾದ ತಿಳಿಸಿದ್ದಾರೆ. 

ಹಲ್ಲೆ ಮಾಡಿದ ವಿಡಿಯೋವನ್ನ ಚಿತ್ರೀಕರಣ ಮಾಡಿದ್ದಕ್ಕೆ‌ ಮೊಬೈಲ್‌ನ್ನು ಕಿತ್ತುಕೊಂಡಿದ್ದಾರೆ. ಅಲ್ಲಿನ ಜನರ ಬಳಿ ಡ್ರಾಗರ್ ಹಾಗೂ ಚಾಕು ಇತ್ತು, ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಪ್ರಯಾಣಿಕರು ಸದ್ಯ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. 

Latest Videos
Follow Us:
Download App:
  • android
  • ios