ಲೈಂಗಿಕ ದೌರ್ಜನ್ಯ ಕೇಸ್: ‘ಕೈ’ ನಾಯಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್; ಅಸ್ಸಾಂ ಪೊಲೀಸರಿಂದ ಬಂಧನ ಸಾಧ್ಯತೆ
ಉಚ್ಛಾಟಿತ ಕಾಂಗ್ರೆಸ್ ನಾಯಕಿ ಅಂಗಿತಾ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಶ್ರೀನಿವಾಸ್ ಅವರ ನಿವಾಸಕ್ಕೆ ಅಸ್ಸಾಂ ಪೊಲೀಸರು ಬಂದಿದ್ದು, ಅವರು ಸದ್ಯ ಮನೆಯಲ್ಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಅಸ್ಸಾಂ ಪೊಲೀಸರು ನೋಟಿಸ್ ಅಂಟಿಸಿ ತೆರಳಿದ್ದಾರೆ.
ಬೆಂಗಳೂರು / ಗುವಾಹಟಿ ( ಏಪ್ರಿಲ್ 23, 2023): ಉಚ್ಛಾಟಿತ ಅಸ್ಸಾಂ ಪ್ರದೇಶ ಯುವ ಕಾಂಗ್ರೆಸ್ (ಎಪಿವೈಸಿ) ಅಧ್ಯಕ್ಷೆ ಅಂಕಿತಾ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರ ತಂಡ ಕರ್ನಾಟಕಕ್ಕೆ ಬಂದಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡಗಳು ರಾಯ್‌ಪುರ ಮತ್ತು ದೆಹಲಿಗೆ ತೆರಳಲಿವೆ ಎಂದೂ ಮೂಲಗಳು ತಿಳಿಸಿವೆ.
ಉಚ್ಛಾಟಿತ ಕಾಂಗ್ರೆಸ್ ನಾಯಕಿ ಅಂಕಿತಾ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಶ್ರೀನಿವಾಸ್ ಅವರ ನಿವಾಸಕ್ಕೆ ಅಸ್ಸಾಂ ಪೊಲೀಸರು ಬಂದಿದ್ದು, ಅವರು ಸದ್ಯ ಮನೆಯಲ್ಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಅಸ್ಸಾಂ ಪೊಲೀಸರು ನೋಟಿಸ್ ಅಂಟಿಸಿ ತೆರಳಿದ್ದಾರೆ.
ಇದನ್ನು ಓದಿ: ಕತ್ತು ಹಿಸುಕಿ ಪ್ರೇಮಿಯ ಕೊಲೆ: ಸೋದರಿ ಸಹಾಯದಿಂದ ಶವವನ್ನು 12 ಕಿ.ಮೀ. ದೂರ ಎಸೆದ ಪಾಪಿ!
ಬೆಂಗಳೂರು ಪೊಲೀಸರ ಸಹಾಯದಿಂದ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ನನ್ನು ಅರೆಸ್ಟ್ ಮಾಡಲು ಅಸ್ಸಾಂನ ಗುವಾಹಟಿಯ ಐಪಿಎಸ್ ಅಧಿಕಾರಿ ಜಂಟಿ ಕಮೀಷನರ್ ಆಫ್ ಪೊಲೀಸ್ ಪ್ರತೀಕ್ ಖುದ್ದು ಆಗಮಿಸಿದ್ದಾರೆ. ಉಚ್ಛಾಟಿತ ಕಾಂಗ್ರೆಸ್ ನಾಯಕಿ ಅಂಕಿತಾ ದತ್ತಾ ನೀಡಿದ ದೂರಿನ ಮೇರೆಗೆ ಅಸ್ಸಾಂ ಪೊಲೀಸರು ಆಗಮಿಸಿದ್ದಾರೆ.
ಈ ಸಂಬಂಧ ಅಸ್ಸಾಂನ ಡಿಸ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಶ್ರೀನಿವಾಸ್‌ನನ್ನು ಅಸ್ಸಾಂ ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಐಪಿಸಿ ಸೆಕ್ಷನ್ 509 (ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಪದಗಳು, ಸನ್ನೆಗಳು ಅಥವಾ ಕೃತ್ಯಗಳನ್ನು ಬಳಸುವುದು), 294 (ಇತರರಿಗೆ ಕಿರಿಕಿರಿ ಉಂಟುಮಾಡುವ ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 341 (ತಪ್ಪಾದ ಸಂಯಮ), 352 (ಯಾವುದೇ ವ್ಯಕ್ತಿಗೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು), 354/354 ಎ (iv) (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 506 (ಕ್ರಿಮಿನಲ್ ಬೆದರಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿಯಲ್ಲಿ ಅಸ್ಸಾಂನ ಡಿಸ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ರಕ್ತ ಮಾರ್ತಿದ್ದ ತಂದೆ: ದುಡ್ಡು ಹೊಂದಿಸಲಾಗದೆ ಆತ್ಮಹತ್ಯೆ ಮಾಡ್ಕೊಂಡ್ರು!
ಇನ್ನೊಂದೆಡೆ, ಶ್ರೀನಿವಾಸ್ ಬಿವಿ ವಿರುದ್ಧ "ಮಾನಸಿಕ ಕಿರುಕುಳ" ಮತ್ತು ಲಿಂಗದ ಆಧಾರದ ಮೇಲೆ "ತಾರತಮ್ಯ" ಆರೋಪ ಮಾಡಿದ್ದಕ್ಕೆ ಶನಿವಾರ, ಅಂಕಿತಾ ದತ್ತಾ ಅವರನ್ನು "ಪಕ್ಷ ವಿರೋಧಿ ಚಟುವಟಿಕೆ" ಗಾಗಿ 6 ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಹೊರಹಾಕಲಾಗಿದೆ. ಈ ಆರೋಪ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕರ್ನಾಟಕ ಮೂಲದ ಬಿ.ವಿ. ಶ್ರೀನಿವಾಸ್ ಅವರನ್ನು ಬಿಜೆಪಿ ಮಾತ್ರವಲ್ಲದೆ ನೆಟ್ಟಿಗರು ಸಹ ಕಿಡಿ ಕಾರುತ್ತಿದ್ದಾರೆ. ಅಲ್ಲದೆ, ಇದು ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಇದನ್ನೂ ಓದಿ: ಬಾರ್ ಡ್ಯಾನ್ಸರ್ ಜತೆ ಲವ್ವಿ ಡವ್ವಿ: ದುಬೈನಿಂದ ಬಂದ ಐಐಟಿ ಎಂಜಿನಿಯರ್ ಈಗ ಪಕ್ಕಾ ಕ್ರಿಮಿನಲ್!