ಗುವಾಹಾಟಿ, (ಜುಲೈ. 04)​: ಸೆಕ್ಸ್​ ವಿಡಿಯೋವನ್ನು ಅಶ್ಲೀಲ ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿದ ಆರೋಪದ ಮೇಲೆ ಆಸ್ಸಾಂನ ದಿಬ್ರುಗಢ್​​ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

 ಯೂನಿವರ್ಸಿಟಿಯೇ  ದೂರು ನೀಡಿದ ಮೇರೆಗೆ ಪೊಲೀಸರು 30 ವರ್ಷದ ಗಣಿತಶಾಸ್ತ್ರದ ಸಹಾಯಕ ಪ್ರಾಧ್ಯಾಪಕನನ್ನು ಅರೆಸ್ಟ್ ಮಾಡಿದ್ದಾರೆ. ಈತ ಅಶ್ಲೀಲ ವೆಬ್​​ಸೈಟ್​ಗಳಲ್ಲಿ ಸೆಕ್ಸ್​ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ ಎಂದು ಯೂನಿವರ್ಸಿಟಿ ದೂರಿನಲ್ಲಿ ಉಲ್ಲೇಖಿಸಿದೆ.

ಮದುವೆಗೂ ಮುನ್ನ ವರನ ಫೋನ್‌ಗೆ ವಧುವಿನ ನಗ್ನ ವಿಡಿಯೋ, ಬಳಿಕ ನಡೆದದ್ದು ಯಾರೂ ಊಹಿಸಿರಲಿಲ್ಲ!

ಪ್ರೊಫೆಸರ್​​ನ ಸೆಕ್ಸ್​ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್​ ಆಗಿತ್ತು. ಮಹಿಳೆಯೋರ್ವರ ಜತೆ ಸೆಕ್ಸ್ ಮಾಡಿ ಆ ವಿಡಿಯೋವನ್ನು ಆತನೇ ಅಶ್ಲೀಲ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಿದ್ದ. ಆ ಬಗ್ಗೆ ಯೂನಿವರ್ಸಿಟಿಯಿಂದಲೇ ದೂರು ಬಂದಿತ್ತು. ನಾವು ಸಹಾಯಕ ಪ್ರಾಧ್ಯಾಪಕನ ಮನೆಯನ್ನು ದಾಳಿ​ ಮಾಡಿ, ಆತನ ಲ್ಯಾಪ್​ಟಾಪ್​ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

​ತಾನು ವಿಡಿಯೋ ಅಪ್ಲೋಡ್​ ಮಾಡಿದ್ದನ್ನು ವಿಚಾರಣೆ ವೇಳೆ ಆ ಪ್ರೊಫೆಸರ್ ಒಪ್ಪಿಕೊಂಡಿದ್ದಾನೆ. ಇದೀಗ ವೈರಲ್​ ಆದ ವಿಡಿಯೋ ಮೂರು ವರ್ಷದ ಹಿಂದೆ ಗುವಾಹಟಿಯ ಹೋಟೆಲ್​ವೊಂದರಲ್ಲಿ ಮಹಿಳೆಯೊಂದಿಗೆ ಸೆಕ್ಸ್​ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹೀಗೆ ತಾನು ಲೈಂಗಿಕ ಕ್ರಿಯೆ ನಡೆಸುವುದನ್ನು ತನ್ನೊಂದಿಗೆ ಇರುವ ಮಹಿಳೆಯ ಗಮನಕ್ಕೆ ಬಾರದಂತೆ ವಿಡಿಯೋ ಮಾಡುತ್ತಿದ್ದ. ಆ ಕ್ಯಾಮರಾವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.