ಕೋಲ್ಕತ್ತಾ(ಫೆ. 11) ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಸಿಕ್ಕಿಲ್ಲ ಎಂದು ಮನನೊಂದ ಬಂಗಾಳಿ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್‍ನಲ್ಲಿ ಘಟನೆ ನಡೆದಿದ್ದು ಸುಬರ್ನಾ ಜಾಶ್ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಭಾನುವಾರ ತಡರಾತ್ರಿ ಪೋಷಕರು ಸುಬರ್ನಾ ಜಾಶ್ ಅವರನ್ನು ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಿಲ್ಲ.

ನಟಿ ಸುಬರ್ನಾ ಜಾಶ್ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯ ಬಾರಿಗೆ ‘ಮಯೂರ್ ಪಾಂಖಿ’ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.

ಐಂದ್ರಿತಾ ಹೊಸ ಅವತಾರ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!

ಬುರ್ದ್ವಾನ್‍ ಮೂಲದ ಸುಬರ್ನಾ ವಿದ್ಯಾಭ್ಯಾಸವನ್ನು ಮುಂದುವರಿಸಲು ಕೋಲ್ಕತ್ತಾಗೆ ಬಂದಿದ್ದರು. ವೃತ್ತಿಜೀವನಕ್ಕಾಗಿ ಕೋಲ್ಕತ್ತಾದಲ್ಲಿಯೇ ವಾಸಿಸುತ್ತಿದ್ದರು. ಅದರಂತೆಯೇ ಅನೇಕ ಆಡಿಷನ್‍ಗಳಿಗೆ ಹೋಗಿ ಅವಕಾಶಕ್ಕಾಗಿ ಕಾಯುತ್ತಿದ್ದರು.

ಯಾವುದೇ ಪ್ರಮುಖ ಪಾತ್ರ ದೊರೆಯದೆ ಖಿನ್ನತೆಗೆ ಒಳಗಾದ ನಟಿ ಕೆಲ ದಿನಗಳ ಹಿಂದೆ ಹುಟ್ಟೂರಿಗೆ ವಾಪಸ್ ಆಗಿದ್ದರು. ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.