Asianet Suvarna News Asianet Suvarna News

Bengaluru: ಬೈಕ್‌ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ

ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಸಿ.ನಗರದ ಮೊಹಮ್ಮದ್ ಜಬಿ (22) ಮತ್ತು ಭಾರತಿ ನಗರದ ರೆಯಾನ್ (20) ಬಂಧಿತರು. 
 

Arrest of two people who were robbing a bike at Bengaluru gvd
Author
First Published Jun 10, 2024, 11:25 AM IST

ಬೆಂಗಳೂರು (ಜೂ.10): ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಸಿ.ನಗರದ ಮೊಹಮ್ಮದ್ ಜಬಿ (22) ಮತ್ತು ಭಾರತಿ ನಗರದ ರೆಯಾನ್ (20) ಬಂಧಿತರು. ಆರೋಪಿಗಳಿಂದ 60 ಸಾವಿರ ರು. ಮೌಲ್ಯದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. 

ಮೇ 22ರಂದು ಬೆಳಗ್ಗೆ ಬಾಗಲೂರು ಲೇಔಟ್ ನಿವಾಸಿ ಧರ್ಮಲಿಂಗಂ ಎಂಬುವವರು ದ್ವಿಚಕ್ರ ವಾಹನದಲ್ಲಿ ಪುಲಿಕೇಶಿ ನಗರ ಹೇನ್ಸ್ ರಸ್ತೆಯ ಹರಿದ್ರ ಗಣಪತಿ ದೇವಸ್ಥಾನ ಬಳಿ ಬರುವಾಗ, ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ದ್ವಿಚಕ್ರ ವಾಹನ ಅಡ್ಡಗಟ್ಟಿ ಕೀ ಕಿತ್ತುಕೊಂಡು ಮೊಬೈಲ್, ಪರ್ಸ್ ಕಿತ್ತುಕೊಂಡು ಪರಿಶೀಲಿಸಿ, ಮೊಬೈಲ್‌ ಪಾಸ್‌ ಕೊಟ್ಟು ಪರ್ಸ್‌ನೊಂದಿಗೆ ಪರಾರಿಯಾಗಿದ್ದರು. 

ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಮೊಹಮ್ಮದ್ ಜಬಿ ವಿರುದ್ದ ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್, ಎಚ್‌ಎಸ್‌ಆರ್ ಲೇಔಟ್, ಹೆಬ್ಬಾಳ, ಕೆ. ಆರ್. ಪುರ, ಸದಾಶಿವನಗರ ಠಾಣೆಗಳಲ್ಲಿ ರಾಬರಿ, ಕಳವು ಪ್ರಕರಣಗಳು ದಾಖಲಾಗಿವೆ. ಉಪ್ಪಾರಪೇಟೆ ಠಾಣೆಯಲ್ಲಿ ಕೊಲೆ, ಅವಲಹಳ್ಳಿ ಠಾಣೆಯಲ್ಲಿ ಕಳವು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 

ಬೈಕ್ ಡಿಕ್ಕಿಯಾಗಿ ವೃದ್ದೆ ಸಾವು: ಮತ್ತಿನಲ್ಲಿದ್ದ ಸವಾರನ ಬಂಧನ

ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನಿನ ಮೇಲೆ ಹೊರಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಮತ್ತೊಬ್ಬ ಆರೋಪಿ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಈ ಇಬ್ಬರಬಂಧನದಿಂದ ಪುಲಿಕೇಶಿ ನಗರದಲ್ಲಿ ದಾಖಲಾಗಿದ್ದ ರಾಬರಿ ಮತ್ತು ಅವಲ ಹಳ್ಳಿಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios