ಜಮೀನನಲ್ಲಿ ದಾರಿ ಬಿಡುವ ವಿಚಾರದಲ್ಲಿ ಉಂಟಾದ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಲಕ್ಷ್ಮೇದೇವರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಲಕ್ಷ್ಮೇದೇವರಹಳ್ಳಿ ಗ್ರಾಮದ ಪಾಲಾಕ್ಷಮ್ಮ ಕೊಲೆಯಾದ ಮಹಿಳೆ.

ಹೊಸದುರ್ಗ (ಜೂ.29): ಜಮೀನನಲ್ಲಿ ದಾರಿ ಬಿಡುವ ವಿಚಾರದಲ್ಲಿ ಉಂಟಾದ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಲಕ್ಷ್ಮೇದೇವರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಲಕ್ಷ್ಮೇದೇವರಹಳ್ಳಿ ಗ್ರಾಮದ ಪಾಲಾಕ್ಷಮ್ಮ ಕೊಲೆಯಾದ ಮಹಿಳೆ.

ಮೃತ ಮಹಿಳೆಯ ಜಮೀನಿನ ಪಕ್ಕದಲ್ಲಿಯೇ ಮುಂದಿನ ಜಮೀನುಗಳಿಗೆ ತೆರಳಲು ಕಾಲುದಾರಿ ಇತ್ತು. ಈ ಜಾಗ ನನಗೆ ಸೇರಿದ್ದು, ಇಲ್ಲಿ ಯಾರೂ ಒಡಾಡಬಾರದು ಎಂದು ಕಳೆದ ನಾಲ್ಕೈದು ತಿಂಗಳಿಂದ ಪಾಲಾಕ್ಷಮ್ಮ ಹಾಗೂ ಆಕೆಯ ಗಂಡ ಪ್ರಸನ್ನ ತಕರಾರು ಮಾಡುತ್ತಿದ್ದರು.

Karnataka crimes: ಸುಳ್ಳು ವೆಬ್‌ ಸೈಟ್‌ ಸೃಷ್ಟಿಸಿ .17 ಲಕ್ಷ ವಂಚನೆ

ದಾರಿ ಗಲಾಟೆ ಸಂಬಂಧ ಈ ಹಿಂದೆ ಪಾಲಾಕ್ಷಮ್ಮ ಅದೇ ಗ್ರಾಮದ ರಾಜಣ್ಣ ಇತರರ ಮೇಲೆ ದೂರು ನೀಡಿದ್ದಳು. ಇಂದು ಪಾಲಾಕ್ಷಮ್ಮ ಹಾಗೂ ಆಕೆಯ ಗಂಡ ಪ್ರಸನ್ನ ದಾರಿ ಜಾಗದಲ್ಲಿ ತೆಂಗಿನ ಸಸಿ ನೆಡಲು ಹೋಗಿದ್ದಾರೆ, ಆಗ ರಾಜಣ್ಣ ಹಾಗೂ ಇತತರು ಬಂದು ಗಲಾಟೆ ಮಾಡಿದ್ದಾರೆ. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ರಾಜಣ್ಣ ಇತರರು ದೊಣ್ಣೆ ಹಾಗೂ ಮಚ್ಚಿನಿಂದ ಪಾಲಾಕ್ಷಮ್ಮ ಹಾಗೂ ಆಕೆಯ ಗಂಡ ಪ್ರಸನ್ನ ಮೇಲೆ ಹಲ್ಲೆ ಮಾಡಿದ್ದಾರೆ.

ಈ ವೇಳೆ ಪಾಲಾಕ್ಷಮ್ಮನ ತಲೆಗೆ ಮಚ್ಚಿನಿಂದ ಬಲವಾದ ಪೆಟ್ಟು ಬಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ರಾಜಣ್ಣ ಹಾಗೂ ಇತರೆ 15 ಜನರ ಮೇಲೆ ದೂರು ನೀಡಲಾಗಿದೆ.

ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಕಳ್ಳ ಪರಾರಿ!

ಕೆಜಿಎಫ್‌: ಅಂಡ್ರಸನ್‌ಪೇಟೆ ಪೊಲೀಸ್‌ರ ಕೈಯಿಂದ ಕಳ್ಳನೊಬ್ಬ ಹ್ಯಾಂಡ್‌ಕಫ್‌ ಸಮೇತ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಚಾಂಪಿಯನ್‌ ರೀಫ್‌ನ ಡಿ.ಬ್ಲಾಕ್‌ನ ನಿವಾಸಿ ಸುಬೋಸ್‌ಚಂದ್ರ ಬೋಸ್‌ ಪರಾರಿಯಾಗಿರುವ ಆರೋಪಿ. ಈತನಿಗಾಗಿ ಪೊಲೀಸ್‌ರು ಹುಟಕಾಟ ನಡೆಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1.30 ರಲ್ಲಿ ಕಳ್ಳತನದ ಪ್ರಕರಣಗಳನ್ನು ಭೇದಿಸಲು ಸುಬೋಷ್‌ಚಂದ್ರ ಬೋಸ್‌ನನ್ನು ವಿಚಾರಣೆ ಮಾಡಿದಾಗ ಆತನ ಸಹಚರನನ್ನು ತೋರಿಸುವುದಾಗಿ ಪೊಲೀಸ್‌ರಿಗೆ ತಿಳಿಸಿದ್ದಾನೆ. ಈ ಹಿನೆÜ್ನಲೆಯಲ್ಲಿ ಸೈನೆಡ್‌ ಗುಡ್ಡಗಳ ಪಕ್ಕದಲ್ಲಿ ಕರೆದುಕೊಂಡು ಹೋಗಿ ಹಡುಕಾಟ ನಡೆಸಿದ್ದರು. ಇಬ್ಬರು ಪೇದೆಗಳು ಸುಭಾಶ್‌ಚಂದ್ರ ಬೋಷ್‌ನನ್ನು ಹಿಡಿದುಕೊಂಡಿದ್ದರು. ಈ ಸಂದರ್ಭದಲ್ಲಿ ಬೋಸ್‌ ಇಬ್ಬರು ಪೊಲೀಸ್‌ರನ್ನು ಕೆಳಗೆ ತಳ್ಳಿ ಪೊದೆಗಳ ನಡುವೆ ಪರಾರಿಯಾಗಿದ್ದಾನೆ. ಈ ಕುರಿತು ಅಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಸುನಿಲ್‌ ಕುಮಾರ್‌ ದೂರು ದಾಖಲಿಸಿದ್ದಾರೆ.

ನಡು ರಸ್ತೆಯಲ್ಲಿ ಹೊತ್ತಿ ಉರಿದ ಓಮಿನಿ ಕಾರು ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

ಸಬ್‌ ಇನ್ಸ್‌ಪೆಕ್ಟರ್‌ಗೆ ನೋಟಿಸ್‌: ಕೆಜಿಎಫ್‌ ಪೊಲೀಸ್‌ ಜಿಲ್ಲಾ ರಕ್ಷಣಾಧಿಕಾರಿ ಡಾ.ಧರಣಿದೇವಿ ಪ್ರತಿಕ್ರಿಯೆ ನೀಡಿದ್ದು, ತಪ್ಪಿಸಿಕೊಂಡಿರುವ ಕಳ್ಳನಿಗಾಗಿ ಪೊಲೀಸರುರು ಹಡುಕಾಟ ನಡೆಸಿದ್ದಾರೆ. ಶೀಘ್ರದಲ್ಲಿ ಕಳ್ಳನನ್ನು ಬಂಧಿಸಲಾಗುವುದು, ಕರ್ತವ್ಯದಲ್ಲಿ ಇದ್ದ ಪೇದೆಗಳಿಗೆæ ಮತ್ತು ಸಬ್‌ ಇನ್ಸ್‌ಪೆಕ್ಟರ್‌ಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದರು.