ವಿಜಯಪುರ(ನ.13): ನಗರದ ಹೊರ ವಲಯದ ಕನ್ನಾಳ ಕ್ರಾಸ್‌ ಬಳಿ ಮಹಾದೇವ ಬೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. 

ಇಂಡಿ ತಾಲೂಕಿನ ದೇಗಿನಾಳ ಗ್ರಾಮದ ಸಂಘರ್ಷ ಸಂಜಯ ಸೂರ್ಯವಂಶಿ (23), ಉಮರಾಣಿ ಗ್ರಾಮದ ಸಂಗಪ್ಪ ಗುರುಬಸು ಯಮದೆ (23) ಹಾಗೂ ವಿಜಯಪುರದ ಜಲನಗರ ಬಡಾವಣೆಯ ಚೇತನ ಚೆನ್ನಪ್ಪ ಶಿರಶ್ಯಾಡ (30) ಬಂಧಿತ ಆರೋಪಿಗಳಾಗಿದ್ದಾರೆ. 

ವಿಜಯಪುರ: ಬೈರಗೊಂಡ ಶೂಟೌಟ್‌, ಮತ್ತೆ ಐವರ ಬಂಧನ

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಗುರುವಾರ ಮತ್ತೆ 3 ಆರೋಪಿಗಳನ್ನು ಬಂಧಿಸಲಾಗಿದೆ. ಇದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಮೋಟಾರ್‌ ಸೈಕಲ್‌, ಎರಡು ಮೊಬೈಲ್‌ ಹಾಗೂ ಒಂದು ಏರಗನ್‌ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.