ಇಸ್ಲಾಂಗೆ ಮತಾಂತರ ಮಾಡಿ ಮದುವೆಯಾಗಿದ್ದ ಹಿಂದೂ ಯುವತಿಯನ್ನು ಹೆರಿಗೆಗೆ ತವರು ಮನೆಗೆ ಕಳುಹಿಸಿದ್ದ ವ್ಯಕ್ತಿ ಬಳಿಕ ಬೇರೆ ಯುವತಿ ಜತೆಗೆ ಮದುವೆಯಾಗಿರುವ ಆರೋಪದಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಫೆ.23): ಇಸ್ಲಾಂಗೆ ಮತಾಂತರ ಮಾಡಿ ಮದುವೆಯಾಗಿದ್ದ ಹಿಂದೂ ಯುವತಿಯನ್ನು ಹೆರಿಗೆಗೆ ತವರು ಮನೆಗೆ ಕಳುಹಿಸಿದ್ದ ವ್ಯಕ್ತಿ ಬಳಿಕ ಬೇರೆ ಯುವತಿ ಜತೆಗೆ ಮದುವೆಯಾಗಿರುವ ಆರೋಪದಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಶಂಕರಿ 3ನೇ ಹಂತದ ಇಟ್ಟುಮಡು ನಿವಾಸಿ 25 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶ ಮೂಲದ ಪತಿ ಅಬ್ದುಲ್ ರಹೀಂ, ಮಾವ ಅಫೀಜ್, ಅತ್ತೆ ರಶೀದಾ ಮತ್ತು ಅಬ್ದುಲ್ ರಹೀಂನ 2ನೇ ಪತ್ನಿ ನಸ್ರೀನ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆ ಐದು ವರ್ಷಗಳ ಹಿಂದೆ ನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುವಾಗ ಆರೋಪಿ ಅಬ್ದುಲ್ ರಹೀಂ ಪರಿಚಿತನಾಗಿದ್ದ. ಆಗ ಈತ ರಿಚ್ಮಂಡ್ ಸರ್ಕಲ್ ಖಾಸಗಿ ಹೋಟೆಲ್‌ನಲ್ಲಿ ಈವೆಂಟ್ ಆರ್ಗನೈಸರ್ ಅಬ್ದುಲ್ ರಹೀಂ ಪರಿಚಯ ಆಗಿದ್ದ. ಇಬ್ಬರ ನಡುವೆ ಪ್ರೀತಿ ಬೆಳೆದು ಇಬ್ಬರ ಕುಟುಂಬಕ್ಕೂ ಪ್ರೀತಿ ವಿಚಾರ ಗೊತ್ತಾಗಿತ್ತು. ಈ ವೇಳೆ ಅಬ್ದುಲ್ ರಹೀಂ ಪೋಷಕರು, ಸಂತ್ರಸ್ತೆ ಇಸ್ಲಾಂಗೆ ಮತಾಂತರವಾದರೆ ಮದುವೆಗೆ ಒಪ್ಪಿಗೆ ಸೂಚಿಸುವುದಾಗಿ ಹೇಳಿದ್ದಾರೆ.
ರಾತ್ರಿ ವೇಳೆ ಡಿಸಿಪಿಗೆ ದೂರು ನೀಡಲು ಕ್ಯುಆರ್ ಕೋಡ್: ಆಗ್ನೇಯ ವಿಭಾಗದ ಠಾಣೆಗಳಲ್ಲಿ ಜಾರಿ
ಆಂಧ್ರದಲ್ಲಿ ಮತಾಂತರ: ಈ ವೇಳೆ ಅನ್ಯ ಮಾರ್ಗವಿಲ್ಲದೆ ಮಗಳ ಪ್ರೀತಿಗೆ ಒತ್ತಾಸೆಯಾಗಿ ನಿಂತ ಪೋಷಕರು, ಮಗಳು ಇಸ್ಲಾಂಗೆ ಮತಾಂತರವಾಗಲು ಒಪ್ಪಿಗೆ ಸೂಚಿಸಿದ್ದರು. ಅದರಂತೆ 2020ರ ಫೆ.6ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಸೀದಿಯಲ್ಲಿ ಸಂತ್ರಸ್ತೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು. ಬಳಿಕ ಎರಡು ಕುಟುಂಬಸ್ಥರು ಸೇರಿ ವಿವಾಹ ನೇರವೇರಿಸಿದ್ದರು.
ಆರೋಪಿ ಅಬ್ದುಲ್ ರಹೀಂ ಮನೆಯಲ್ಲಿ ಒಂದೂವರೆ ವರ್ಷ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಂಡಿದ್ದರು. ಈ ನಡುವೆ ಸಂತ್ರಸ್ತೆ ಗರ್ಭಿಣಿಯಾದ ಬಳಿಕ ವರಸೆ ಬದಲಿಸಿದ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರು. ಮಗಳನ್ನು ನೋಡಲು ಆಂಧ್ರಪ್ರದೇಶಕ್ಕೆ ಹೋದಗಾಲೆಲ್ಲಾ ಸಂತ್ರಸ್ತೆ ಪೋಷಕರು ಅಳಿಯನಿಗೆ ಹಣ ಕೊಟ್ಟು ಬರುತ್ತಿದ್ದರು. ಬಳಿಕ ಆರೋಪಿ ಅಬ್ದುಲ್ ರಹೀಂ ಹೆರಿಗೆ ನೆಪದಲ್ಲಿ ಸಂತ್ರಸ್ತೆಯನ್ನು ಬೆಂಗಳೂರಿನ ತವರು ಮನೆಗೆ ಬಿಟ್ಟು ಹೋಗಿದ್ದ.
ಹೆಣ್ಣು ಮಗು ಎಂದು ಜಗಳ: 2021ರ ನ.30ರಂದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಂತ್ರಸ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದನ್ನು ತಿಳಿದ ಪತಿ ಮತ್ತು ಅತ್ತೆ, ಮಾವ ಬಾಣಂತಿಯನ್ನು ನೋಡಲು ಬಂದಿರಲಿಲ್ಲ. ಹಲವು ದಿನ ಕಳೆದ ಬಳಿಕ ಪತಿ ಅಬ್ದುಲ್ ರಹೀಂ ಒಂದು ದಿನ ಬಂದು ಪತ್ನಿ ಹಾಗೂ ಮಗುವನ್ನು ನೋಡಿಕೊಂಡು ಹೋಗಿದ್ದ. ಬಳಿಕ ಯಾರೊಬ್ಬರು ಇತ್ತ ತಿರುಗಿ ನೋಡಲಿಲ್ಲ. ಹೀಗಾಗಿ ಸಂತ್ರಸ್ತೆಯ ಪೋಷಕರು ಸಂತ್ರಸ್ತೆ ಹಾಗೂ ಮಗುವನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಆಬ್ದುಲ್ ರಹೀಂ ಪೋಷಕರು ಹೆಣ್ಣು ಮಗು ಆಗಿದೆ. ಮನೆಗೆ ಸೇರಿಸುವುದಿಲ್ಲ.
ಮಗನಿಗೆ ಬೇರೊಂದು ಮದುವೆ ಮಾಡುವುದಾಗಿ ಹೇಳಿ ಜಗಳ ಮಾಡಿ ಕಳುಹಿಸಿದ್ದರು. ಬಳಿಕ ಎರಡೂ ಕುಟುಂಬಗಳ ನಡುವೆ ಸಂಪರ್ಕ ಕಡಿತವಾಗಿತ್ತು. ಈ ನಡುವೆ ಆರೋಪಿ ಅಬ್ದುಲ್ ರಹೀಂ ಬೇರೊಂದು ಯುವತಿ ಜತೆಗೆ ಮದುವೆಯಾಗಿ ಆಕೆಯ ಒಂದು ಗುಂಡು ಮಗು ಇರುವುದು ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಬ್ದುಲ್ ರಹೀಂ ಹಾಗೂ ಆತನ ಪೋಷಕರು ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ವಿಚ್ಛೇದನ ನೀಡಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 ವರ್ಷದಿಂದ ರೋಹಿಣಿ ನನ್ನ ಮನೆಯವರ ಹಿಂದೆ ಬಿದ್ದಿದ್ದಾರೆ: ರೂಪಾ ಆಡಿಯೋ?
ಜಾಲತಾಣದಲ್ಲಿ ವೇಶ್ಯೆ ಎಂದು ಅಪಪ್ರಚಾರ: ಆರೋಪಿ ಅಬ್ದುಲ್ ರಹೀಂ ವಿಚ್ಛೇದನ ನೀಡುವಂತೆ ಸಂತ್ರಸ್ತೆಗೆ ಒತ್ತಾಯಿಸುತ್ತಿದ್ದ. ಇತ್ತೀಚೆಗೆ ಸಂತ್ರಸ್ತೆಯ ಫೋಟೋಗಳನ್ನು ಪರ ಪುರುಷರ ಜತೆಗೆ ಇರುವಂತೆ ಎಡಿಟ್ ಮಾಡಿ ಸಾಮಾಜಿ ಜಾಲತಾಣದಲ್ಲಿ ವೈರಲ್ ಮಾಡಿದ್ದ. ಈಕೆ ವೇಶ್ಯೆ ಎಂದು ಅಪಪ್ರಚಾರ ಮಾಡಿದ್ದ. ವಿಚ್ಛೇದನಕ್ಕೆ ಸಹಿ ಮಾಡಿದ್ದಲ್ಲಿ ಇನ್ನೂ ಬೇರೆ ರೀತಿ ಮರ್ಯಾದೆ ತೆಗೆಯುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
