ರಾತ್ರಿವೇಳೆ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್‌ ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ದುರ್ಘಟನೆ ಏರ್‌ಪೋರ್ಟ್ ರಸ್ತೆ ಚಿಕ್ಕಜಾಲ ಬಳಿ ನಡೆದಿದೆ.

ಬೆಂಗಳೂರು (ಜು.3) ರಾತ್ರಿವೇಳೆ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್‌ ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ದುರ್ಘಟನೆ ಏರ್‌ಪೋರ್ಟ್ ರಸ್ತೆ ಚಿಕ್ಕಜಾಲ ಬಳಿ ನಡೆದಿದೆ.

ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸುರೇಶ್ ರಸ್ತೆ ಅಪಘಾತಕ್ಕೆ ಬಲಿಯಾದ ದುರ್ದೈವಿ. ರಾತ್ರಿ ವೇಳೆ ದೇವನಹಳ್ಳಿ ಇನ್ಸ್‌ಪೆಕ್ಟರ್ ಜತೆಗೆ ಕರ್ತವ್ಯದಲ್ಲಿದ್ದ ಸುರೇಶ್. ಕಳೆದ ರಾತ್ರಿ ಚಿಕ್ಕಜಾಲ ಬಳಿ ರಸ್ತೆ ಅಪಘಾತವಾಗಿತ್ತು. ಅಪಘಾತವಾದ ಸ್ಥಳಕ್ಕೆ ತೆರಳಿ ನೋಡುವಂತೆ ತಿಳಿಸಿದ್ದ ಇನ್ಸ್‌ಪೆಕ್ಟರ್. ಇನ್ಸ್‌ಪೆಕ್ಟರ್ ಸೂಚನೆಯಂತೆ ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದ ಸುರೇಶ್. ಸ್ಥಳ ಪರಿಶೀಲನೆ ವೇಳೆ ಮತ್ತೊಂದು ಕಾರು ಬಂದು ಸುರೇಶ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ನಿಂತಿದ್ದ ಸುರೇಶ್‌ಗೆ ಡಿಕ್ಕಿ ಹೊಡೆದಿರುವ ಕಾರು. ಡಿಕ್ಕಿ ಹೊಡೆದ ರಭಸಕ್ಕೆ ಕಾನ್ಸ್‌ಟೇಬಲ್ ಸುರೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಸದ್ಯ ಈ ಘಟನೆ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಟೆಂಪೋ-ಕಾರು ಡಿಕ್ಕಿ; ಕಾರು ಚಾಲಕ ಸಜೀವ ದಹನ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಟೆಂಪೋ ಹಾಗೂ ಸ್ಯಾಂಟ್ರೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನೊಳಗಿದ್ದ ವ್ಯಕ್ತಿ ಸಜೀವ ದಹನವಾಗಿದ್ದಾನೆ. ಮೈಸೂರಿನ ಮಂಡಿ ಮೊಹಲ್ಲಾದ ಮುಜಾಮಿಲ್‌ ಅಹಮ್ಮದ್‌ (32) ಬೆಂಕಿಗಾಹುತಿಯಾದ ನತದೃಷ್ಟ. ಅಪಘಾತದಲ್ಲಿ ತಮಿಳುನಾಡಿನ ನೀಲಗಿರಿ ಮೂಲದ ಟೆಂಪೋ ಚಾಲಕ ದೇವಕುಮಾರ್‌ಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ರಾತ್ರಿ 10.15ರ ವೇಳೆ ಹಿರೀಕಾಟಿ ಗೇಟ್‌ ಬಳಿ ಗುಂಡ್ಲುಪೇಟೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೋಗೆ ಮೈಸೂರು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಕಾರಿನೊಳಗಿದ್ದ ಅಹಮ್ಮದ್‌ ಸಜೀವ ದಹನವಾದರು. ಸುದ್ದಿ ತಿಳಿದು ಅಗ್ನಿಶಾಮಕ ದಳದವರು ಆಗಮಿಸಿದರಾದರೂ ಆ ವೇಳೆಗಾಗಲೇ ಅಹಮ್ಮದ್‌ ಸುಟ್ಟು ಕರಕಲಾಗಿದ್ದರು.