ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿದ ಭಗ್ನಪ್ರೇಮಿ: ಕಾಲೇಜು ವಿದ್ಯಾರ್ಥಿನಿ ಸಾವು
ಭಗ್ನಪ್ರೇಮಿಯೊಬ್ಬ 20 ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ರೈಲು ಬರುತ್ತಿದ್ದಾಗ ಹಳಿಗೆ ತಳ್ಳಿದ ಪರಿಣಾಮ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಚೆನ್ನೈನ ಸಂತ ಥೋಮಸ್ ರೈಲ್ವೇ ಸ್ಟೇಷನ್ ಸಮೀಪ ಸಂಜೆ ಈ ಅವಘಡ ಸಂಭವಿಸಿದೆ.
ಚೆನ್ನೈ: ಭಗ್ನಪ್ರೇಮಿಯೊಬ್ಬ 20 ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ರೈಲು ಬರುತ್ತಿದ್ದಾಗ ಹಳಿಗೆ ತಳ್ಳಿದ ಪರಿಣಾಮ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಚೆನ್ನೈನ ಸಂತ ಥೋಮಸ್ ರೈಲ್ವೇ ಸ್ಟೇಷನ್ ಸಮೀಪ ಸಂಜೆ ಈ ಅವಘಡ ಸಂಭವಿಸಿದೆ. ಹೀಗೆ ವಿದ್ಯಾರ್ಥಿನಿಯನ್ನು ರೈಲಡಿ ತಳ್ಳಿ ಕೊಲೆ ಮಾಡಿದವನನ್ನು 23 ವರ್ಷ ಪ್ರಾಯದ ಸತೀಶ್ ಎಂದು ಗುರುತಿಸಲಾಗಿದೆ. ಸಾವಿಗೀಡಾದ ಯುವತಿಯನ್ನು 20 ವರ್ಷದ ಸತ್ಯಾ ಎಂದು ಗುರುತಿಸಲಾಗಿದೆ.
ಸತ್ಯಾ, ಸಂತ ಥೋಮಸ್ ಮೌಂಟ್ (St Thomas Mount) ನಿವಾಸಿಯಾಗಿರುವ ಮನಿಕ್ಕಂ ಹಾಗೂ ಅಡಂಬಕ್ಕಂ ಪೊಲೀಸ್ ಠಾಣೆಯಲ್ಲಿ(Adambakkam police station) ಹೆಡ್ ಕಾನ್ಸ್‌ಟೇಬಲ್ ಆಗಿದ್ದ ರಾಮಲಕ್ಷ್ಮಿ ಎಂಬುವವರ ಪುತ್ರಿಯಾಗಿದ್ದು ಟಿ ನಗರದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಅಧ್ಯಯನ ಮಾಡುತ್ತಿದ್ದಳು. ಅಡಂಬಕ್ಕಂನ ನಿವಾಸಿಯಾಗಿದ್ದ ಸತೀಶ್ ಎಂಬಾತ ಸತ್ಯಾಳಿಗೆ ಹಲವು ಬಾರಿ ಪ್ರೇಮ ನಿವೇದನೆ ಮಾಡಿದ್ದ. ಆದರೆ ಸತ್ಯಾ ಈತನ ಪ್ರಪೋಸಲ್‌ನ್ನು ನಿರಾಕರಿಸಿದ್ದಳು. ಅಲ್ಲದೇ ಆತನ ಜೊತೆ ಮಾತನಾಡದೇ ನಿರ್ಲಕ್ಷಿಸಿದ್ದಳು.
ಆದಾಗ್ಯೂ ಆತ ನಿರಂತರ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದ. ಹೀಗಾಗಿ ಕೆಲ ವಾರಗಳ ಹಿಂದಷ್ಟೇ ಮಂಬಾಲಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಸತ್ಯಾ ಪೋಷಕರು ದೂರು ದಾಖಲಿಸಿದ್ದರು. ಆದರೆ ಇಂದು ಮಧ್ಯಾಹ್ನ 1.15 ರ ಸುಮಾರಿಗೆ ಸತ್ಯಾ ತನ್ನ ಕಾಲೇಜಿಗೆ ಹೋಗಲು ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಸತೀಶ್ ಆಕೆಯೊಂದಿಗೆ ಜಗಳ ಮಾಡಲು ಶುರು ಮಾಡಿದ್ದಾನೆ.
ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ತಾಂಬರಂ-ಬೀಚ್ ಇಎಂಯು ರೈಲು ಮೊದಲ ಪ್ಲಾಟ್‌ಫಾರ್ಮ್ ಸಮೀಪಿಸುತ್ತಿದ್ದಾಗ ಸತೀಶ್, ಸತ್ಯಾಳನ್ನು ಹಳಿಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಣಾಮ ಆಕೆಗೆ ಇಎಂಯು ರೈಲು ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದೇ ವೇಳೆ ಪ್ರಯಾಣಿಕರು ಸತೀಶ್‌ನನ್ನು ಹಿಡಿಯಲು ಪ್ರಯತ್ನಿಸಿದ್ದು, ಅಷ್ಟರಲ್ಲಾಗಲೇ ಆತ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ.
ಕಾಲೇಜು ಫೆಸ್ಟ್‌ನಲ್ಲಿ ಗಲಾಟೆ: ನಮಾಜ್ ಮುಗಿಸಿ ಕಾಲೇಜಿಗೆ ಬಂದವನ ಕೊಲೆ
ಘಟನಾ ಸ್ಥಳಕ್ಕೆ ಸೇಂಟ್ ಥಾಮಸ್ ಮೌಂಟ್ ರೈಲ್ವೆ ಪೊಲೀಸ್ ಪೋರ್ಸ್ ಸಿಬ್ಬಂದಿ, ತಾಂಬರಂ (Tambaram) ಮತ್ತು ಮಾಂಬಲಮ್ ರೈಲ್ವೆ ಪೊಲೀಸರು (Mambalamm railway police) ಮತ್ತು ಸೇಂಟ್ ಥಾಮಸ್ ಮೌಂಟ್ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ನಂತರ ಸತ್ಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ರೈಲ್ವೆಯ ಸಹಾಯಕ ಪೊಲೀಸ್ ಮಹಾ ನಿರ್ದೇಶಕಿ ವಿ ವನಿತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಪಿಯ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುತ್ತೇವೆ ಎಂದು ಹೇಳಿದರು.
ಭಾನುವಾರದ ರಜಾ ಮಜಾ ಮಾಡಲು ಹೋಗಿ ದುರಂತ ಅಂತ್ಯ ಕಂಡ ವಿದ್ಯಾರ್ಥಿಗಳು
ಟೆಕ್ಕಿ ಸ್ವಾತಿ ಕೊಲೆ ಪ್ರಕರಣ
2016 ರಲ್ಲಿ ನಡೆದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣವನ್ನು (techie Swathi Murder Case) ಇದು ನೆನಪಿಸುತ್ತಿದೆ. ನುಂಗಂಬಾಕ್ಕಂ ಉಪ ನಗರ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಕೆಲಸದ ಸ್ಥಳಕ್ಕೆ ರೈಲು ಹತ್ತಲು ಕಾಯುತ್ತಿದ್ದಾಗ ಟೆಕ್ಕಿ ಸ್ವಾತಿಯನ್ನು ಇಂಜಿನಿಯರಿಂಗ್ ಪದವೀಧರನಾಗಿದ್ದ (engineering graduate) ಕುಮಾರ್ ಕಡಿದು ಕೊಲೆ ಮಾಡಿದ್ದ. ನುಂಗಂಬಾಕ್ಕಂ ನಗರದ ಹೊರವಲಯದಲ್ಲಿ ಈ ಘಟನೆ ನಡೆದಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಘಟನೆ ನಡೆದು ದಿನಗಳ ನಂತರ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಲು ಬಂದಾಗ ಆತ ಆತ್ಮಹತ್ಯೆಗೆ ಯತ್ನಿಸಿದ್ದ.