* ಕಾಮಗಾರಿಗೆಂದು ತೋಡಿದ್ದ ಗುಂಡಿಯಲ್ಲಿ ಬಿದ್ದು ಬಿಜೆಪಿ ಮುಖಂಡ ಸಾವು* ಆನೇಕಲ್‌ನ ಹೊಸೂರು ಮುಖ್ಯರಸ್ತೆಯಲ್ಲಿ ಸಂಭವಿಸಿದ ದುರ್ಘಟನೆ * ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಹೊಂಡ ತೋಡಿದ್ದರು

ಬೆಂಗಳೂರು, (ಸೆ.29): ಬೈಕ್ ಓಡಿಸುವಾಗ ರಸ್ತೆ (Road) ಕಾಮಗಾರಿಗೆಂದು ತೋಡಿದ್ದ ಗುಂಡಿಯಲ್ಲಿ ಬಿದ್ದು ಬಿಜೆಪಿ (BJP) ಮುಖಂಡ ಮೃತಪಟ್ಟಿದ್ದಾನೆ.

ಆನೇಕಲ್‌ನ (Anekal) ಹೊಸೂರು ಮುಖ್ಯರಸ್ತೆಯಲ್ಲಿ ಇಂದು (ಸೆ.29) ಈ ದುರ್ಘಟನೆ ಸಂಭವಿಸಿದೆ. ಸಬ್‌ಮಂಗಲ ನಿವಾಸಿ ಮಾದೇಶ್(50) ಮೃತ ದುರ್ದೈವಿ. 

ಬೆಂಗ್ಳೂರಿನ ಎಲ್ಲ ರಸ್ತೆಗಳ ಆಡಿಟ್‌ ನಡೆಸಲು ಸರ್ಕಾರ ನಿರ್ಧಾರ: ಸಿಎಂ ಬೊಮ್ಮಾಯಿ

 ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಹೊಂಡ ತೋಡಿದ್ದರು. ಆದರೆ ಕೆಲಸ ಪೂರ್ಣಗೊಳಿಸದೆ ಗುಂಡಿಯನ್ನು ಹಾಗೆಯೇ ಬಿಟ್ಟುಹೋಗಿದ್ದರು ಎನ್ನಲಾಗಿದೆ. ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಧರಣಿ ನಡೆಸಿದ್ದಾರೆ. 

ಅಲ್ಲದೇ ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ದಿನೇಶ್ ಭೇಟಿ ನೀಡಿ ಧರಣಿ ನಡೆಸುತ್ತಿದ್ದವರ ಮನವೊಲಿಕೆಗೆ ಯತ್ನಿಸಿದ್ದಾರೆ.

ಗುಂಡಿ ಸರಿ ಮಾಡಿ ಎಂದು ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಇನ್ನು ಬೆಂಗಳೂರಿನಲ್ಲೂ ಸಹ ಇದೇ ರೀತಿಯ ಘಟನೆಗಳು ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಬೆಂಗಳೂರು ನಗರ ರಸ್ತೆಗಳಲ್ಲಿ ಗುಂಡಿಗಳು ಇದ್ದು ಅವುಗಳನ್ನ ಮುಚ್ಚುವಂತೆ ಎಷ್ಟೇ ಅಭಿಯಾನ ಮಾಡಿದ್ರೂ ಪ್ರಯೋಜನವಾಗಿಲ್ಲ.

ಅಲ್ಲದೇ ಕೋರ್ಟ್‌ ಸಹ ಗುಂಡಿ ಬಗ್ಗೆ ಬಿಬಿಎಂಪಿಗೆ ಸಾಕಷ್ಟು ಬಾರಿ ಛೀಮಾರಿ ಹಾಕಿದೆ. ಎಷ್ಟು ಗುಂಡಿ ಮುಚ್ಚಿದ್ದೀರಿ ಎಂದು ಲೆಕ್ಕೆ ಸಹ ಕೇಳಿದುಂಟು.