ಕಾರವಾರ, (ಅ.03): ಪ್ಯಾರಾ ಮೋಟರ್ ತುಂಡಾಗಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಇಲ್ಲಿನ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ನಡೆದಿದೆ.

ಮಾರ್ಗದರ್ಶಕನ ಜೊತೆ ಪ್ಯಾರಾ ಮೋಟಾರಿನಲ್ಲಿ ಹಾರಾಟ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

 ಪ್ಯಾರಾ ಮೋಟಾರ್ ಹಾರುತ್ತಿರುವ ವೇಳೆ ಗ್ಲೈಡರಿನ ಮೇಲ್ಭಾಗದ ಪ್ಯಾರಾಚೂಟ್ ದಾರ ಹರಿದಿದ್ದೇ ಘಟನೆಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.